ಎದೆಯ ಗುಡಿಯಲಿ ದೀಪವಾರಿದೆ
ಸತ್ಯ ದೀಪವ ಹೊತ್ತಿಸು ||
ಬೇಕು ಬೇಕಿನ ಜೀಕು ಜೀಕಿನ
ಕಾಯ ಕಾಮನೆ ತಿರುಗುಣಿ
ನಾನು ನನ್ನದು ನನಗೆ ಎಂಬುವ
ಮಮತೆ ಮರುಕದ ಸರಪಣಿ
ಇರದೆ ಇರುವಾ ಇದ್ದು ಬೆರೆವಾ
ಸಹಜ ಕಲೆಯೆ ಜೀವನಾ
ಇತ್ತ ಚೇತನ ಅತ್ತ ಚಿಂತನ
ರಾಜಯೋಗದ ಪಾವನಾ
ಕಮಲವಾಗೈ ಕೆಸವಿನಾಚೆಯ
ಮೊಗ್ಗು ಮುಗಿಲಿಗೆ ಅರಳಿಸು
ಹಕ್ಕಿಯಾಗೈ ಪಕ್ಕ ತೂರೈ
ಶಿವನ ಕಾಯಕ ಬೆಳಗಿಸು
*****


















