ಹಸಿರು ಎಲೆಯಲಿ

ಹಸಿರು ಎಲೆಗಳ ಎಳೆಯಲಿ
ಹಸಿರು ಉಸಿರಿನ ನರ್ತನ
ಪ್ರಕೃತಿ ಇತ್ತಿಹ ದಿವ್ಯಕೊಡುಗೆಯ
ಜೀವ ಜೀವದಾ ಚೇತನ ||

ಸುಪ್ರಭಾತದ ತನಿಯ ಚೆಲುವಲಿ
ಹೂವು ಹೂವಿನ ಮೊಗದಲಿ
ತುಂತುರು ನೀರ ಮಣಿಯರೂಪವು
ಹೊಳೆಯುವ ಸಂಭ್ರಮ ||

ನಗುವ ಚೆಲ್ಲಿ ಬರುವ ದುಂಬಿಯ
ಸಾಲು ಚೆಲುವಿನ ನೋಟವು
ಕದವ ತೆರೆದು ಮಧುವ ನೀಡುವ
ಸುಮದ ನೋಟವು ನೂತನ ||

ಕೊಡುವ ಕೊಳ್ಳುವ ಆಟ ಪ್ರಕೃತಿ
ಕೊಡುಗೆ ಇದುವೆ ಈ ಜಗದಲಿ
ಸ್ವಾರ್ಥ ಮನಕೆ ಪಾಠವು
ಅರಿವ ಮನಸಿರೆ ಚಂದವು ||

ಬಾಳು ಬೆಳೆಯುವ ರೀತಿ ಪ್ರಕೃತಿಯು
ನಮಗೆ ನೀಡುವ ನೀತಿಯು
ಸುಮದ ಬಾಳೊಲು ಅದರ ಸೊಗಸೊಳು
ಬಾಳಿದರೆ ನಿಜದಿ ಸ್ವರ್ಗವು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ವಿನಂತಿ
Next post ಗೆಳತಿ, ನೀನಾದರೆ ಸನಿಹ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…