ಗೂಡು ಸೇರುವ ಹೊತ್ತು-
ಪುಂಡ ಹುಂಜಗಳು ಪೈಪೋಟಿಗಿಳಿದು ತಮ್ಮ ಪಂಜಗಳಿಗೆ
ಬಿಗಿದ ತುಂಡು ಚಾಕುಗಳಿಂದ ತಲೆ ಮತ್ತು ಹೃದಯಭಾಗ
ಸೀಳಿಕೊಂಡು, ಚಿಮ್ಮುವ ನೆತ್ತರಿನ ಆವೇಶದಲಿ ಆಗಸದೆತ್ತರಕೆ
ಜಿಗಿದು, ಕೆಂಡಗಳ ಸುಡುತ್ತಿವೆ.

ಒಂದು ಡೈರಿಯಷ್ಟು ಪ್ರೇಮ ಕವಿತೆಗಳನ್ನು ಬರೆದು,
ಶುದ್ಧ ಪೋಲಿ ಪ್ರೇಮಿ ಎನಿಸಿಕೊಳ್ಳುತ್ತಲೇ
ಆ ಪುಟಗಳ ಚಿಟ್ಟೆಯೊಂದರ ಬೆನ್ನು ಬಿದ್ದಿದ್ದಳು.

ಕೋಳಿ ಪಂದ್ಯದ ಜೂಜುಕೋರರು-
ಸ್ತನಗಳು ಉಬ್ಬಿ, ತುಯ್ಯುವ ಸದ್ದಿಗೆ ಕೈಗಳಲಿ
ಮೌನಭರಿತ ವಿಷಾದದ ಹೂಗಳಿಡಿದು ಬಂದರು.
*****

Latest posts by ಮಂಜುನಾಥ ವಿ ಎಂ (see all)