ತಡೆಯದಿರೆ ಮನವ
ಮನದಾ ಭಾವನೆಯಾ
ಭಾವದೆಳೆಯ ಬೆರೆತ ನೋವು
ಕಣ್ಣ ನೀರಂಚಲಿ ಸೆರೆಯಾಗಿದೆ||

ಬೆರೆತಂಥ ಸ್ಪಂದನ
ಜೀವನದಿಯಾಗಿ ಸೇರುತಲಿ
ದೋಣಿಯ ಕಾಣದೆ ದಡವ
ಸೇರದೆ ಇನಿಯಾ ಕಾದಿಹೆ||

ಮನದಾಸೆ ಮಾಗಿ
ಋತುರಂಗಿನ ಬಾನಾಡಿಯಾಗಿ
ಬಾನಲ್ಲಿ ಹಾರುತ ದೂರ
ಕೂಗಿ ಕರೆಯಿತು ನಿನ್ನನೇ||

ಬರಡಾಗಿದೆ ಮನವು
ಚೈತ್ರ ಬಂದ ದಿನವು
ಮೌನ ತಾಳಿದೆ ವಸಂತ
ನೀನು ಬಾರದೆ ಹೃದಯ ತುಡಿದಿದೆ||
*****