ಅಂಗಿಯ ಮೇಲದು ಶಾಯಿಯ ಚುಕ್ಕಿ. ಜೇಬಿನಲ್ಲಿ ಚಕ್ಕಲಿ ಅವಲಕ್ಕಿ, ನಾಲಿಗೆ ಬಹಳೇ ಹೋಗಿದೆ ಸೊಕ್ಕಿ ! ಬಂದ ಬಂದನವ ಗೋವಿಂದಾ. ಮಾಮಿಡಿಯೊಂದೂ ಮರದೊಳಗಿಲ್ಲ; ಪೇರಲ ಹಣ್ಣೂ ಕಾಣುವದಿಲ್ಲ; ಆತನು ಹುಡುಕದ ಗಿಡಮರವಿಲ್ಲ ! ಬಂದ ಬಂದನವ ಗೋವಿಂದಾ ಸಂಗಡ ಹುಡುಗರ ತಂಡವ ಕಟ್ಟಿ. ಊರಿನ ನಾಲ್ಕೂ ಗಡಿಯನೆ ಮುಟ್ಟಿ, ತಂಟೆಯ ತರುವ...

ಮಧುರ ನೀರವ ಚಿಂತನೆಗಳ ಅಧಿವೇಶನಕೆ ಗತಘಟನೆ ಸ್ಮರಣೆಗಳನೆಲ್ಲ ಕರೆಕಳಿಸುವೆನು ; ಕುದಿವೆ ಬಯಸಿದ್ದೆಷ್ಟೊ ಅಲ್ಲಿ ಇಲ್ಲದ್ದಕ್ಕೆ, ಹಳೆವ್ಯಥೆಗೆ ಹಾಳಾದ ಕಾಲಕ್ಕೆ ಮರುಗುವೆನು. ಗಳಿಗೆ ದಿನ ಇರದ ಸಾವಿನ ಆಳರಾತ್ರಿಯಲಿ ಹುಗಿದ ಪ್ರಿಯಮಿತ್ರರಿಗೆ ಮರಮರಳಿ ...

ಎಲ್ಲಿ ದೊರಕೀತು ಸುಖವು? ಅಂಬೆ ವಿಹ್ವಲಳಾಗಿದ್ದಳು. ಇನ್ನು ಹೋಗುವುದು ಎಲ್ಲಿಗೆ ಎಂದವಳಿಗೆ ತೋಚುತ್ತಲೇ ಇರಲಿಲ್ಲ. ಕಾಶಿಯಿಂದ ಹಸ್ತಿನಾವತಿಯ ರಥವೇರಿ ಬಂದವಳು ಅವಿವಾಹಿತೆಯಾಗಿ ಕಾಶಿಗೆ ಹೋಗಬಾರದು. ಹಸ್ತಿನಾವತಿಗೆ ಹಿಂದಿರುಗಿ ಭೀಷ್ಮರೆದುರು ನಿಂತು...

ನನ್ನಮ್ಮ ಬೆಂಗಳೂರಿಗೆ ಬಂದವಳಲ್ಲ ಮೆಜೆಸ್ಟಿಕ್‌ನ ವಾಕಿಂಗ್‌ಸ್ಟಿಕ್ಕಾಗಿ ಸಿಕ್ಕಾಗಿ ತನ್ನತನ ಮುಕ್ಕಾಗಿ ಸಿನಿಮಾ ಮಹಲು ರಸ್ತೆಯಮಲಿಗೆ ಸಿಕ್ಕಿದವಳಲ್ಲ. ಸೀಳುಹಾದಿಯಲ್ಲಿ ಕೂಳೆಹೊಲದಲ್ಲಿ ಕಾಲುಬಲಿತು ಕೂದಲು ನರೆತವಳು. ಸದಾ ಸೌದೆ ಬುತ್ತಿ ನೆತ್ತಿಮೇಲ...

ಮದುವೆಯಾಗಿ ಮೂರು ವರ್ಷಗಳ ಬಳಿಕ ಮಡದಿ ಮಗಳೊಂದಿಗೆ ಮೊನ್ನೆ ಲಾಲ್‌ಬಾಗ್ ನೋಡಲು ಹೋದಾಗ ಮಗಳನ್ನು ಆಡಲು ಬಿಟ್ಟು, ಮುದ್ದು ಮಡದಿಯೊಂದಿಗೆ ಜೋಡಿಯಾಗಿ ಕುಳಿತಿದ್ದಾಗ ಅನಿಸಿತು, ನಮ್ಮ ಬಾಳೇ ಒಂದು ರೀತಿ, ನಮಗೆ ನಮ್ಮದೇ ಒಂದು ನೀತಿ, ಒಬ್ಬೊಬ್ಬರದು ಒಂದ...

ರಾಜಕೀಯ ಸಾಹಿತ್ಯದ ಮೇಲೆ ಅಳಿಕೆ ನಡೆಸಲು ಸುರುಮಾಡಿದಾಗ ವಿಷಣ್ಣರಾಗುವವರಲ್ಲಿ ನಾನೂ ಒಬ್ಬ. ಈ ಮಾತನ್ನೀಗ ತಪ್ಪರ್ಥ ಬರದಂತೆ ಹೇಳುವುದೇ ಕಷ್ಟವಾಗಿದೆ. ಎನ್ನುವುದು ಕೂಡಾ ಸಮಕಾಲೀನ ಯುಗದಲ್ಲಿ ಸಾಹಿತ್ಯಕ್ಷೇತ್ರವನ್ನು ರಾಜಕೀಯ ಎಷ್ಪರಮಟ್ಟಿಗೆ ತನ್ನ ಕ...

ಸತ್ಯುಳ್ಳ ಸರದಾರ ಸುದ್ದುಳ್ಳ ಸುಗಣೀಯ ಮುದ್ಮಾಡಿ ಕದ್ಮಾಡಿ ಬಿಡತೀಯಾ ||ಪಲ್ಲ|| ಆಗ್ಮಾಡಿ ಹೋಗ್ಮಾಡಿ ಕತ್ಲಾಗ ಗಿಣಿಮಾಡಿ ಪತ್ಲಾಗ ಪದುಮಿಟ್ಟು ಓಡ್ತೀಯಾ ಸುದ್ದೋಕಿ ಸೂರ್‍ಮಾಡಿ ಉದ್ದೋಕ ಊರ್‍ಮಾಡಿ ಕೇರ್‍ಮಾಡಿ ಕೆರುಮಾಡಿ ಹಾರ್‍ತೀಯಾ ||೧|| ಪುಗಸೆಟ...

ಸೇಲ್ಸ್ ಗರ್ಲ್‌ಗಾಗಿ ಸಂದರ್ಶನ ನಡೆಯುತ್ತಿದ್ದು, ಸಂದರ್ಶಕರು ಕೇಳಿದ್ರು – “ಅತೀಯಾಗಿ ಸುಳ್ಳು ಹೇಳಿದ್ರೆ ಏನು ಮಾಡ್ತಾರೆ ಗೊತ್ತ?” ಸಂದರ್ಶಕಿ: “ಗೊತ್ತು ಸಾರ್” ಸಂದರ್ಶಕರು ಕೇಳಿದ್ರು : “ಏನು ?&#822...

ಹೋರಾಟದ ಹಾದಿಯನ್ನು ನಂಬಿ ನಡೆದ ಶಕ್ತಿಯೇ ಕಪ್ಪು ಜನರ ಕೆಂಪು ಕಥೆಗೆ ನಾಂದಿಯನ್ನು ಹಾಡಿದವನೇ. ಕುಡಿಯಲು ನೀರು ಕೊಡದ ದೇವರ ನೋಡಲು ಬಿಡದ ಮನುಜ ಮನುಜರ ಮಧ್ಯ ವಿಷ ಬಿತ್ತುವ ಜನಕೆ ನೀನು. ದುಡಿಮೆಯನ್ನು ದೋಚುತ್ತ ಬಿಸಿ ರಕ್ತವ ಹೀರುತ್ತಾ ನೀತಿ ಶಾಸ್...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...