ಒಂದು ಗುಡಿ ಗೋಪುರವನ್ನು ನೋಡಿದ ಓರ್ವ “ಎಂತಹ ಅದ್ಭುತ ಶಿಲ್ಪ! ಇಲ್ಲಿ ದೇವರು ಇದ್ದನೆ” ಎಂದು ಕೊಂಡ. ಅದರ ಪಕ್ಕದಲ್ಲೇ ಆಕಾಶವನ್ನು ಚುಂಬಿಸುತ್ತಾ ತನ್ನ ಹಸಿರು ಗರಿಗಳಿಂದ ಗಾಳಿಯಲ್ಲಿ ತೂರಾಡುತ್ತಿತ್ತು ಭವ್ಯವಾಗಿ ನಿಂತಿದ್ದ ತೆಂಗಿನ ಮರ. ಮರದಲ್ಲಿ ಬಿಟ್ಟ ತೆಂಗಿನ ಕಾಯಿಗಳ ಗೊಂಚಲನ್ನು ನೋಡಿ ಇಲ್ಲಿ ದೇವರು ಇದ್ದೇ ಇದ್ದಾನೆ. ಮತ್ತೆ ತೆಂಗಿನ ಬಟ್ಟಲಲ್ಲಿ ಎಳೆನೀರಿನ ಅಮೃತವನ್ನು ತುಂಬಿ ಹಿಡಿದ್ದಾನೆ” ಎಂದು ಗುಡಿ ಬಿಟ್ಟು ಮರಕ್ಕೆ ಪ್ರದಕ್ಷಿಣೆ ನಮಸ್ಕಾರ ಹಾಕಿ ಮುಂದೆ ನಡೆದ.
*****