ಆ ನಾನು ಈ ನಾನು

ಆ ನಾನು ಈ ನಾನು ತಾ ನಾನು ನಾ
ತಿರೆಯೊಳಗಣ ಬೀಜ ಬಿತೈತೆ
ಹೊರಗಣ ನೀರ ಹಾಸೈತೆ
ಮನುಜ.. ಹಾರೈಕೆ ನಿನಗೆ
ಹಾರೈಕೆ ನಿನಗೆ..||

ಆನು ಎಂದರೆ ತಾನಾನುನಾ
ಬಾಳು ಎಂದರೆ ನಾನಾನುನಾ
ಎರಡರ ಹಾದಿ ಒಂದೇ…
ಭೇದವಿಲ್ಲವೆಂಬಂತೆ ಹಾರೈಕೆ
ನಿನಗೆ ಹಾರೈಕೆ ||

ಇಲ್ಲದು ಬೇಡದ್ದು ತಾ ನಾನು ನಾ
ಬೇಡಿದ್ದು ಇದ್ದದ್ದು ನಾನಾನು ನಾ
ಒಂದೇ ಹಿಡಿಯಲಿ ನಾವೇ ನಾವು
ಕೆಳೆಯ ಭಾವ ಸೂರೆಯಲಿ
ಹಾರೈಕೆ ನಿನಗೆ ||

ನೊಂದವರ ಹಾಡು ಬೆಂದವರ ಹಾಡು
ಇಳೆಯ ಸ್ವರ್ಗದ ಹಾಡು
ಅವರವರ ಪಾಡಿದು ಅವರಿಗೊಲಿದಾ
ಬದುಕು ಭಾವೈಕ್ಯದಾ ಹಾಡು
ಕೇಳೇಳೊ ಮನವೆ ಹಾರೈಕೆ ನಿನಗೆ
ಹಾರೈಕೆ ನಿನಗೆ… ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ – ೧೨
Next post ವಂಚನೆ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…