ದೇಗುಲದಿ ನಿನ್ನ ಶಿಲೆಯಮೂರುತಿಯ ಮುಂದೆ ಬಾರಿಸುವ ಜೇಗಟೆಯದನಿಗೆ ದೇವ! ಮರೆತು ನಿದ್ದೆಯಮಾಡುತಿಹ ಎನ್ನ ಹೃದಯದಲಿ ಅರಿವಿಲ್ಲ! ಎಚ್ಚರಿಸು ಪರಮಾತ್ಮನೆ! ೧ ಕಂದದಯೆ ಕುಂದದೆಯೆ ನಿನ್ನ ಬಿಂಬದ ಮುಂದೆ ನಿಂದು ಉರಿಯುತಿಹ ನಂದಾದೀಪವು ಹರಿಸಲಾರದೆದೆಯಲಿಹ ಗಾಢಾಂಧತೆಯ ತೋರು ನೀಂ ಜ್ಞಾನಜೋತಿಯನು ದೇವ! ೨ ಹೊಳೆಯುತಿಹ ನಿ...

ನರನೆ ದೊರೆಯಾಗುವ ಹಂಬಲವೆ ನಿನಗೆ? ಧರೆಯಲಿ ದೇವ ಮರೆತು ಇರುವಂತೆ ಮರಣವೇ ಮಹನವಮಿಯೆಂದ ಸಂತರಿಗೆ ಅರವಿನಲಿದ್ದು ಅವರ ಮರೆಯಲುಂಟೆ! ದುಕ್ಕ ದುಮ್ಮಾನಗಳ ಈ ಲೋಕ ಹೌದು, ದಕ್ಕದ ಅಸೆಗಳಿಗೆ ಕೈ ಚಾಚಲೇಕೆ ಲೆಕ್ಕವಿರದ ಈ ಸೊನ್ನೆ ಬಾಳು ನಿನ್ನದೇನೊ! ಸುಕ್ಕ...

ಒಮ್ಮೆ ನಕ್ಕು ಬಿಡು ಗೆಳತಿ ಅತ್ತಿರುವ ನಿನ್ನ ಕಣ್ಣುಕಂಡು ಬತ್ತಿರುವ ನನ್ನೆದೆಗೆ ತಂಪು ಗೈಯಲು ಹಾಡಬೇಡವೆಂದರೆಂದು ಹಾಡು ನಿಲ್ಲಿಸಿತೇ ಕೋಗಿಲೇ? ನಿನ್ನ ನಗುವೇ ಹಾಡಾಗಿತ್ತು ನನ್ನ ಪಾಲಿಗೆ ನಿನ್ನ ನಗುವಿನ ಮೆರವಣಿಗೆಯ ಸರಪಣಿಗೆಲ್ಲಿತ್ತು ಕೊನೆ? ನಿ...

(ಕುವೆಂಪುರವರ ನೆನಪಿನಲ್ಲಿ) ಜಯ ಕನ್ನಡ ಭಾಗ್ಯವಿಧಾತೆ ಜಯ ಹೇ ಕರ್ನಾಟಕ ಮಾತೆ ಜಯ ಕವಿರತ್ನತ್ರಯ ಕಾವ್ಯವಿಖ್ಯಾತೆ ಜಯ ಜನ್ನನ ಪರಿಶುದ್ಧ ಯಶೋ ಚರಿತೆ ಜಯ ಅಲ್ಲಮ ಬಸವ ವಚನ ಮಣಿಖಚಿತ ಜಯ ಮಹಾದೇವಿಯಕ್ಕ ಹೊನ್ನಮ್ಮ ಸಂಪ್ರೀತೆ ಜಯ ಕುಮಾರವ್ಯಾಸ ಭಾಮಿನಿ ...

ನಂದಿದರು ದುಸ್ಸತ್ವದಮನಸತ್ವೋನ್ನತರು ರಾಮಕೃಷ್ಣಾದಿಗಳು ದಿವ್ಯಭೂತಿಗಳು ಮತ್ತೆಲ್ಲು ಕಾಣದಿಹ ಬೆಲೆಗಳನ್ನು ಮಾನುಷ್ಯ- ಜೀವಿತದಿ ನೆಲೆಗೊಳಿಸಿದಭವಬಂಧುಗಳು ಕರಣಗಳ ಪಾತ್ರದೊಳು ರುದ್ರರಭಸದಿ ಹರಿದು ಬಲುಕೇಡುಗಳ ಬಳೆವ ಸಂಮೋದಧುನಿಯ ಬಾಳ ಜಡೆಯೊಳು ತಳೆದ...

ಮಮ್ತಾಜ್ ನಾನೆಂತಹ ಬದ್‌ನಸೀಬ್* ನೋಡು ನೀನು ಬಹಳ ಪುಣ್ಯವಂತೆ ಬಾದಷಹ ಷಹಜಹಾನನು ನಿನ್ನ ಅಮರ ಸೌಂದರ್ಯದ ಸ್ಮೃತಿಗೆ ಸರಿಸಾಟಿಯಿಲ್ಲದ ಸುಂದರ ಇಮಾರತ್ತು ಕಟ್ಟಿಸಿದ. ಶಹರ ಪಟ್ಟಣಗಳು ನರಕಕೂಪಗಳಾಗಿ ನಿನ್ನ ಸಮಾಧಿಗೆ ಸಂಗಮರಮರಿಯ ಹಾಲಿನಂತಹ ತಂಪು ಬೆಳದ...

ಬಹಳಷ್ಟು ಜನರಿಗೆ ಕುರ್-ಆನ್ ಬಗ್ಗೆ ತಿಳಿದಿಲ್ಲ. ಎಲ್ಲರಿಗೆ ತಿಳಿದಿರುವ ಅವಶ್ಯಕತೆ ಏನಿದೆ? ಎಂದು ನೀವೆಲ್ಲ ಕೇಳಬಹುದೇನೋ…. ಹೌದು! ನಮ್ಮ ದೇಶ ಸರ್ವಧರ್ಮಗಳ ಸಮನ್ವಯ ದೇಶ. ಎಲ್ಲ ಧರ್ಮಗಳ ಸಾರ ಒಂದೇ. ಅದು ತಿಳಿದಿದ್ದರೆ ಒಳ್ಳೆಯದಲ್ಲವೇ? ಲಂ...

ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ ಬೇಕೆ ಮತೀಯ ವೈರ? ಉಳಿಸಿಕೊಂಡರೆ ಕಿಸಿರು ನಿನಗೋ ಕಪ್ಪು ಹೆಸರು! ಸೋ...

ನಾಣಿಗೆ ಒಲೆಯಲ್ಲಿ ಬೆಂಕಿ ಭಗಭಗ ಉರಿತಾನೇ ಇದೆ. ಅರ್ಧ ಹೊರಗೆ ಇನ್ನರ್ಧ ಒಳಗೆ ಉರಿತಿದ್ದ ತೆಂಗಿನ ಸೋಗೆಗಳನ್ನು ಕಂಡ ಸಂಪ್ರೀತ ಗಾಬರಿಯಾದಂತಾಗಿ ಎಲ್ಲ ಸೇರಿಸಿ ಒಳಗೆ ತುರುಕಿದ. ಅದೇ ತಾನೆ ಕಾಲೇಜು ಮುಗಿಸಿ ಮನೆಗೆ ಬರ್‍ತಾ ಇದ್ದ. ದೂರ ಕೊಂಚ ಹೆಚು ಎ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...