ಬಹಳಷ್ಟು ಜನರಿಗೆ ಕುರ್-ಆನ್ ಬಗ್ಗೆ ತಿಳಿದಿಲ್ಲ. ಎಲ್ಲರಿಗೆ ತಿಳಿದಿರುವ ಅವಶ್ಯಕತೆ ಏನಿದೆ? ಎಂದು ನೀವೆಲ್ಲ ಕೇಳಬಹುದೇನೋ….
ಹೌದು! ನಮ್ಮ ದೇಶ ಸರ್ವಧರ್ಮಗಳ ಸಮನ್ವಯ ದೇಶ. ಎಲ್ಲ ಧರ್ಮಗಳ ಸಾರ ಒಂದೇ. ಅದು ತಿಳಿದಿದ್ದರೆ ಒಳ್ಳೆಯದಲ್ಲವೇ?
ಲಂಡನ್‌ನ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಇರುವ ಕುರ್-ಆನ್ ಹಸ್ತಪ್ರತಿಯೊಂದರ ತುಣುಕುಗಳು ಇಡೀ ವಿಶ್ವದಲ್ಲಿರುವ ತೀರಾ ಹಳೆಯ ಕುರ್-ಆನ್ ಹಸ್ತಪತಿಗಳಲ್ಲಿ ಒಂದು ಮೊತ್ತ ಮೊದಲನೆಯದೆಂದು ಜುಲೈ ೨೦೧೫ ರ ತಿಂಗಳಲ್ಲಿ ಸಂಶೋಧಕರು ಸತ್ಯವನ್ನು ಹೊರಗೆಡವಿದ್ದಾರೆ!
ಈ ಹಸ್ತ ಪ್ರತಿಯು ೧೩೭೦ ವರ್ಷಗಳಷ್ಟು ತೀರಾ ಹಳೆಯದಾಗಿದ್ದು ಪ್ರವಾದಿ ಮುಹಮ್ಮದ್ ಅವರ ಕಾಲಕ್ಕೆ ಸಂಪರ್ಕಕ್ಕೆ ತೀರಾ ನಿಕಟ ಸಂಬಂಧವಿದೆಯೆಂದು ಸಂಶೋಧಕರು ಪತ್ತೆ ಹಚ್ಚಿರುವರು. ಇದು ಚರ್‍ಮದ ಹಾಳೆಗಳನ್ನು ಹೊಂದಿದೆ. ಇದನ್ನು ಈಗಾಗಲೇ ಸಂಶೋಧಕರು ರೇಡಿಯೊ ಕಾರ್ಬನ್ ವಿಶ್ಲೇಷಣೆಗೆ ಒಳಪಡಿಸಿರುವರು.
ಹೀಗಾಗಿ ಈ ಹಸ್ತಪ್ರತಿಯು ೫೬೮ ರಿಂದ ೬೪೫ ನೆಯ ಇಸವಿಯಲ್ಲಿ ಸೃಷ್ಠಿಯಾಗಿದೆಯೆಂಬ ಒಮ್ಮತಕ್ಕೆ ಬಂದಿರುವರು.
ಈ ಸಂಶೋಧನೆಯು ನೂರಕ್ಕೆ ನೂರರಷ್ಟು ಖಚಿತವಾದುದ್ದು ನಿಖರವಾದುದ್ದು ಎಂದು ಇವರು ತಿಳಿಸಿರುವರು.
ಕಾರಣ- ಈ ಕುರ್ ಆನ್‌ನಲ್ಲಿ ಯಾವುದೇ ಸೇರ್ಪಡೆ ಬದಲಾವಣೆ ತಿದ್ದುಪಡಿ ಇರುವುದಿಲ್ಲ. ಮುಹಮ್ಮದ್ ಅವರ ದಿವ್ಯ ಸಂದೇಶವನ್ನೊಳಗೊಂಡಿರುವುದರಿಂದ ಇದೊಂದು ಪರಮ ಪವಿತ್ರ ಕುರ್‌ಆನ್ ಎಂದೇ ಖ್ಯಾತವಾಗಿರುವುದು.
ಇದರಲ್ಲಿ ಹಿಜಾಜಿ ಎಂದು ಕರೆಯಲಾಗುವ ಅರೇಬಿಕ್ ಆರಂಭಿಕ ಕಾಲದ ಲಿಪಿಯನ್ನು ಈ ಗ್ರಂಥದಲ್ಲಿ ಬಳಸಿರುವುದೊಂದು ವಿಶೇಷವಾಗಿದೆ.
ಇದು- ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ಮಧ್ಯಪ್ರಾಚ್ಯ ಹಸ್ತಪ್ರತಿ ವಿಭಾಗದಲ್ಲಿ ಈ ಮಹಾ ಕುರ್‌ಆನ್ ಹಸ್ತ ಪ್ರತಿ ಇದೆ. ಇದನ್ನು ಬಲು ಅಮೂಲ್ಯವಾಗಿ ಅಪರೂಪವೆಂಬಂತೆ ಸಂರಕ್ಷಿಸಿ ಇಡಲಾಗಿದೆ.
ಬರ್ಮಿಂಗ್ ಹ್ಯಾಮ್‌ಗೆ ಯಾರೇ ಹೋಗಲಿ ವಿಶೇಷವಾಗಿ ಮುಸ್ಲಿಮ್ ಬಾಂಧವರು ಭೇಟಿ ನೀಡಿದವರೆಲ್ಲ ತಪ್ಪದೆ, ಮರೆಯದೆ, ಅದನ್ನು ವೀಕ್ಷಿಸಿ, ಅದಕ್ಕೆ ನಮಸ್ಕರಿಸಿ ಬರುವರು.
ಇದು ಕುರ್-ಆನ್ ಮಹತ್ವವೆಂದರೆ…
*****


















