Home / Poem

Browsing Tag: Poem

ಎಷ್ಟೊಂದು ಸಲ ಕೈಕೊಟ್ಟುಬಿಡುತ್ತವಲ್ಲ ಹಿಗ್ಗು ಸಂತೋಷ ಆನಂದ ಎಲ್ಲೋ ಲೆಕ್ಕ ತಪ್ಪಿ ಮತ್ತೆಲ್ಲೋ ಮೋಸವಾಗಿ ಬಿಡುತ್ತದೆ ಮಗದೊಮ್ಮೆ ಚದುರಂಗದಾಟ. ಸುಖ ಸುಪ್ಪತ್ತಿಗೆಯ ಕಣ್ಣೀರು ಮಡುವಿಗೆ ಸಿಕ್ಕಿತೊಂದು ಅನಾಥ ಶಿಶು ಮುತ್ತು ಬೆಳಗಿನ ಹೊತ್ತು ಕಸದ ಗುಂಡ...

ಆಕಿ ಹೆಂಗದಳ ‘ಯಂಗ್’ ಅದಳ ಹೆಂಗೆಂಗೋ ಅದಳ ಮುಂಜಾನಿ ಮೂಡೋ ರಂಗಾಗ್ಯಾಳ ಸಂಜೀಗಿ ಹೊಳೆಯೋ ಚಿಕ್ಕೀ ಆಗ್ಯಾಳ, ಗಿಡದಾಗಿನ ಹಕ್ಕಿ ಆಗ್ಯಾಳ ಆಕಿ ಹೆಂಗದಳ ಬಂಗಾರದಂಥ ನಿಂಬಿ ಆಗ್ಯಾಳ ಜೀವ ತುಂಬಿದ ಗೊಂಬಿ ಆಗ್ಯಾಳ ಸ್ವರ್ಗದಾಗಿನ ರಂಭಿ ಆಗ್ಯಾಳ ಆಕಿ ಹೆಂಗದಳ...

ದಾರಿತಪ್ಪಿ ನಡೆದರೂ ಮಾನತಪ್ಪಿ ನುಡಿದರೂ ತಾಯಿಯಂತೆ ಕ್ಷಮಿಸಿ ನಮ್ಮ ಕಾಯುತಿರುವ ಪ್ರೀತಿಯೇ, ಋತು ರೂಪದ ನೀತಿಯೆ ಯಾರ ಆಜ್ಞೆಸಲಿಸಲೆಂದು ರಾಶಿ ಚಿಗುರ ತರುವೆ? ಯಾರ ಬರವ ಹಾರೈಸಿ ನೆಲಕೆ ಹಸಿರ ಸುರಿವೆ? ಯಾರ ಒಲುಮೆ ಉಕ್ಕಿ ಪತ್ರ ಮರಮರದಲು ಬರೆವೆ? ಹ...

ಹಾದಿ ಬೀದಿ ಗುಡಿ ಗುಂಡಾರ ಚರ್ಚು ಮಸೀದಿ ಗಿರಿ ಕಂದರಗಳನ್ನೆಲ್ಲಾ ಮತ ಭೇದವಿಲ್ಲದೆ ತೊಳೆದು ಪೂಜಿಸುವ ನಿಸರ್ಗ ಭಕ್ತ. *****...

ಹಣ್ಣು ಹಣ್ಣು ಮಾವಿನ ಹಣ್ಣು ಯಾರಿಗೆ ಬೇಕು ಮಾವಿನ ಹಣ್ಣು? ನಂಗೆ ಬೇಡ ಮಾವಿನ ಹಣ್ಣು ಯಾಕೋ ಬೇಡ ಮಾವಿನ ಹಣ್ಣು? ಗೊರಟಿದೆಯಲ್ಲಾ ಅದಕೇ ಬೇಡ! ಹಣ್ಣು ಹಣ್ಣು ಬಾಳೇ ಹಣ್ಣು ಯಾರಿಗೆ ಬೇಕು ಬಾಳೇ ಹಣ್ಣು? ನಂಗೆ ಬೇಡ ಬಾಳೇ ಹಣ್ಣು ಯಾಕೋ ಬೇಡ ಬಾಳೇ ಹಣ್ಣ...

ಸತಿ ಹೋಮದೊಳಾದುದ ಕೇಳಿ ಶಿತಿ ಕಂಠನು ವ್ಯಸನವ ತಾಳಿ ಕೈಲಾಸದ ವೈಭೋಗವನು ಪಾಲಿಸುವುದ ಬಿಟ್ಟನುಽ ಶಿವನೋಽ||ಪ|| ತಾಳಿದ ಮೌನವ ತಪಸಿಗೆ ಮನವನು ಕೂರಿಸಿದನು ಆ ಪರಮಾತಮನೂ ಶಿವನೋಽ||೧|| ಹೇಮಕೂಟ ಪರ್ವತಕೆ ಹೋಗಿ ತಾ ಮಾಡುತ ತಪ ಶಿವಯೋಗಿ ಪ್ರೇಮದಿಯವತರಿಸ...

ನನ್ನ ಕೇರಿ ನಾಕವೇನು? ವಿಶ್ವವಿನೀಕೇತನ ವಿಹಾರಿ! ಕೇರಿಯೆಂದರೆ: ಹೊಸಲು ಕಾದು, ಕ್ರಿಯಾಶೀಲ ಸ್ಥಳ! ಜಗದ ಬಾಗಿಲು… ಪುರಾತನ ತೊಟ್ಟಿಲು. ಕೈಲಾಸಕೆ ಮೆಟ್ಟಿಲು. ಇಲ್ಲಿಹರು… ಸಮಗಾರ ಹರಳಯ್ಯ, ಕಲ್ಯಾಣದ ಗುಣಮಣೆ, ಜಾಂಬುವಂತ, ಮಾದರಚೆನ್ನಯ...

ಅಮ್ಮಾ, ಅಮ್ಮಾ, ಸೂರ್ಯ ಮುಳುಗೋದು ಇಲ್ವಂತೆ ಮಲಗೋದು ಇಲ್ವಂತೆ ಅದೆಲ್ಲಾ ಸುಳ್ಳಂತೆ ಹ್ಹೂ ನಮ್ಮ ಮಿಸ್ಸೇ ಹೇಳಿದ್ರು ಅವನು ಸಂಜೆ ಆಗ್ತಿದ್ದಂತೆ ಸ್ಪೀಡಾಗಿ ಅಮೇರಿಕಾಕ್ಕೆ ಹೋಗಿ, ಬೆಳಗಾಗ್ತಿದ್ಹಾಂಗೆ ವಾಪಸ್ಸು ಬಂದ್ಬಿಡ್ತಾನಂತೆ. *****...

ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು ಚಿ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...