ಆಕಿ ಹೆಂಗದಳ
‘ಯಂಗ್’ ಅದಳ
ಹೆಂಗೆಂಗೋ ಅದಳ

ಮುಂಜಾನಿ ಮೂಡೋ ರಂಗಾಗ್ಯಾಳ
ಸಂಜೀಗಿ ಹೊಳೆಯೋ ಚಿಕ್ಕೀ ಆಗ್ಯಾಳ,
ಗಿಡದಾಗಿನ ಹಕ್ಕಿ ಆಗ್ಯಾಳ
ಆಕಿ ಹೆಂಗದಳ

ಬಂಗಾರದಂಥ ನಿಂಬಿ ಆಗ್ಯಾಳ
ಜೀವ ತುಂಬಿದ ಗೊಂಬಿ ಆಗ್ಯಾಳ
ಸ್ವರ್ಗದಾಗಿನ ರಂಭಿ ಆಗ್ಯಾಳ
ಆಕಿ ಹೆಂಗದಳ

ಬೀಸೋ ಗಾಳಿ ಆಗ್ಯಾಳ
ಹರಿಯೋ ನೀರಾಗ್ಯಾಳ
ಬ್ಯಾಸಿಗಿ ಬಿಸಿಲಿಗಿ ತಂಪ ನೆಳ್ಳ ಆಗ್ಯಾಳ
ಆಕಿ ಹೆಂಗದಳ

ಕಣ್ಣಾಗಿನ ಕನಸಾಗ್ಯಾಳ
ಮನದಾಗಿನ ಮಾತಾಗ್ಯಾಳ
ಜೀವದಾಗಿನ ಜೀವಾಗ್ಯಾಳ
ಆಕಿ ಹೆಂಗದಳ

ಆಕಿ ಹೆಂಗೆಂಗೋ ಅದಳ
*****