Home / Kannada

Browsing Tag: Kannada

ಅಡುಗೆ ರಸರುಚಿ ವಾಸನೆಯ ಮೋಹ ಸವಿಗೆ ಬಾಗದವನಾರು ಹೇಳು ? ಕುರಿಯ ಕಾವ ಕುರುಬನೀಂ; ಧರೆಯ ಕಾವ ರಾಜಗೆ ಪಕ್ವಾನ್ನ ನಾಕಕೆ ಅನ್ಯ ಕೀಳು ಮೊಸರನ್ನ ಸಂಡಿಗೆ ಉಪ್ಪಿನಕಾಯ ಲೀಲಾಂಮೃತಕೆ ಸಖ್ಯನಾಗದವನಾರು ಧೀರ ? ರಣರಂಗ ಕಲಿಯೇನು; ಕಾಳಗದ ಹುಲಿಯೇನಿದಕೆ ವಿಶ್...

ಹೊಸವರ್ಷ ಬಂದಂತೆ ಯಾರು ಬಂದಾರು ಗಿಡಮರಕೆ ಹೊಸವಸ್ತ್ರ ಯಾರು ತಂದಾರು? ಹಾಡೆಂದು ಕೋಗಿಲೆಯ ಕೂಗಿ ಕರೆದಾರು ಮಾವಿನಾ ಚಿಗುರನ್ನು ತಿನಲು ಕೊಟ್ಟಾರು? ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ ಬಂದನೊ ವಸಂತ ಬಂದಿಗಳೆ ಎಲ್ಲ! ...

ಯುರೋಮ್ಯೂಸಿಯಂದ ಬೆತ್ತಲೆ ಚಿತ್ರಗಳ ಉಬ್ಬರಿಳಿತ ಮಾರ್ಬಲ್ಲಿನ ಕೆತ್ತನೆಯ ನರನಾಡಿಗಳು ಮಾರ್ಕೆಟ್ಟಿನ ತುಂಡು ಬಟ್ಟೆಯ ಹುಡುಗಿಯರು ಚೌಕ ಸುತ್ತ ಬಳಿಸಿ ಮುದ್ದಿಸುವ ಪ್ರೇಮಿಗಳು ಪರಿವೆ ಇಲ್ಲದೆ ಬಿದ್ದಿರುವ ಹಾದಿಬದಿಯ ಕಾಮಿಗಳು ಎಂಥೆಂಥಾ ಚಿತ್ರಗಳಿವು&...

ಏಳಿ ಎದ್ದೇಳಿ ದುಡಿವ ಜಗದ ಕೈಗಳೊಂದಾಗಲ್ಹೇಳಿ. ಕ್ರೂರ ಕೈಗಳ ದಾಸ್ಯ ಬಿಡಿಸಲೇಳಿ. ನಿಮ್ಮ ಬಲ ಜಗದ ಬಲ ನಿಮ್ಮ ಛಲ ಯುಗಕೆ ಫಲ ನಿಮ್ಮೆದೆಯ ಹಣತೆಯಲಿ ಒಡಲ ಜಗದ ಬೆಳಕು ನಿಮ್ಮೊಲವ ನುಡಿಯಿಂದ ಮಾನವತೆ ಬದುಕು | ನರಿಯ ನುಣ್ದನಿಗಿನ್ನೂ ಕೂಗೋ ಕಾಕವಾಗುವಿರ...

ಸಮುದ್ರದ ಗೀತೆ ಮುಗಿಯುವದಿಲ್ಲ ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ ಋತುಗಳು ಬದಲಾಗುತ್ತವೆ ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ. ಮಾತನಾಡಿದ ಮಾತುಗಳು ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ. ನೀಲ ಗಗನದ ಹೊಳೆವ ಚಿಕ್ಕಿಗಳು ಹೊನ್ನ ಮರಳಿನಲಿ...

ತೋಟದಲಿ ಬಳುಕುತಿಹ ಬಳ್ಳಿಯೊಳಗರಳುತಿಹ ಎಳೆಮೊಗ್ಗುಗಳಿಂದ ಚಿವುಟಿ ಕೈಯಲಿ ಹಿಡಿದು ಹಸುಗೂಸ ಹಾಲ್ಕೆನ್ನೆಯಂತೆ ಮಿದುವಾಗಿರುವ ದನಗಳನು ಕೆನ್ನೆಗಳಿಗೊತ್ತಿಕೊಂಡೆ ! ಗಳಿಗೆಗಳು ಉರುಳಿದುವು. ಕಾವಿನಲಿ ಎಳೆಮೊಗ್ಗು ಬಸವಳಿದು ಬಾಡುತಲಿ ನಿರ್ಜೀವ ತರಗಾಯ್ತ...

ಅಧ್ಯಾಯ ೩ ಮರುದಿನ ಪಾಠಗಳು ಸುರುವಾದುವು. ಅರವಿಂದನಿಗೆ ಮೊದಲ ಪೀರಿಯಡಿಗೆ ಹತ್ತನೆ ಕ್ಲಾಸಿನಲ್ಲಿ ಇಂಡಿಯನ್ ಹಿಸ್ಟರಿ ಇತ್ತು. ಅರವಿಂದ ಜನರು ಯಾಕ ಇತಿಹಾಸ ಓದಬೇಕು ಎಂಬುದರ ಬಗ್ಗೆ ಆರಂಭಿಕವಾಗಿ ಮಾತಾಡಿದ. ಅಷ್ಟರಲ್ಲಿ ಕ್ಲಾಸು ಮುಗಿದ ಗಂಟೆಯಾಯಿತು....

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...