Home / Poem

Browsing Tag: Poem

ಶ್ರಾವಣದ ಶನಿವಾರ ನಮ್ಮ ತಂದೆಯು ನಾವು ಅಣ್ಣತಮ್ಮಂದಿರೆಲ್ಲ ಹಣೆಗೆ ನಾಮವ ತಿದ್ದಿ, ತಾಳ ತಂಬೂರಿ ಮದ್ದಲೆ ವಾದ್ಯಗಳ ಜೊತೆಗೆ ಎಲ್ಲ ದೇವರ ನಾಮಗಳ ಬಲ್ಲ ರೀತಿಯಲಿ ಹಾಡುತ್ತ, ‘ಸಂಚಾರ’ ಹೊರಟು, ಮನೆ ಮನೆಗೂ ಹೋಗಿ ಬಿಕ್ಕೆಯ ಬೇಡಿ ತಂದ ಬೀಯವನೆಲ್ಲ ಕಡೆಯ...

ಹದಿನಾಲ್ಕು ಹರೆಯದ ನರಸಿ ಬಲು ಚೆಲುವೆ ಮುದವಾಗುತಿದೆ ಇವಳ ನಡೆ ನುಡಿಯ ನೋಡೆ ಹರುಕು ಕಂಚುಕ ತೊಟ್ಟು ಮಲಿನಾಂಬರವುಟ್ಟು ಉಡುಗುವಳು ವರ್ತನೆಯ ಮನೆಗಳೊಳು ಕಸವ ಮುಕುರವೇತಕೆ ಇವಳ ಮೂಗೆ ಸಂಪಿಗೆ ಮೊಗ್ಗು ಪೊಳೆವ ಕಂಗಳ ತುಂಬಿ ತುಳುಕುತಿದೆ ಹಿಗ್ಗು ಚೆಲ್...

ಈ ಊರು ಕೇರಿಗೆ ಅಂತರವೇನು? ದೇವರಾಣೆ ಕಾಣೆ! ಸತ್ಯಸುಳ್ಳಿನ ಅಂತರ, ಎಲ್ಲ ಮನುಜರ ಹುಟ್ಟಿನ ಗುಟ್ಟು ಒಂದೇ… ನಡೆವ ನೆಲ, ಕುಡಿವ ಜಲ, ಉಂಭೊ ಬಾನ, ಉಡೋ ಬಟ್ಟೆವೊಂದೇ… ಸುರಿವ ಮಳೆ, ಕರೆವ ಹೆಸರೊಂದೇ… ಈ ಊರು ಕೇರಿಗೆ ಬಿಸಿಲು, ನೆ...

ರಾತ್ರಿ ಬೆಳಗೂ ಕರಿಪರದೆಯ ಮುಂದೆ ಮಿಂಚುತ್ತಿದ್ದ ತಾರೆಯರು ಹಗಲು ನೀಲಿ ಪರದೆಯ ಹಿಂದೆ ನಿದ್ದೆ ಮಾಡ್ತಿದಾರೆ ಸಂಜೆಗೆ ಅವರವರ ಸೀನಿಗೆ ಸರಿಯಾಗಿ ಸದ್ದು ಮಾಡದೆ ಎದ್ದೆದ್ದು ಬರ್‍ತಾರೆ. *****...

ಹಿಡಿಗಂಟು ಕೊಟ್ಟು ಹಿಡಿ ಹಿಡೀ ಎಂದ ಹಿಡಿತ ಸಿಗಲೆ ಇಲ್ಲ ಹಿಡಿಯಬೇಕು ಅನ್ನುವುದರೊಳಗೆ ಪುಡಿ ಪುಡಿಯೆ ಆಯಿತಲ್ಲ ಬೊಗಸೆಯೊಳಗೆ ಹಿಡಿದಂಥ ನೀರು ಸಂದುಗಳ ಹಿಡಿದು ಜಾರಿ ಕೈಗೆ ಬಾರದೇ ಬಾಯ್ಗೆ ಸೇರದೇ ಹೋಯಿತಲ್ಲ ಸೋರಿ ಕೊಟ್ಟಾಗ ಗಂಟು ಹಿಡಿದದ್ದೆ ಗಟ್ಟಿ...

ಸೋಮವಾರ ಸೋಂಬೇರಿ ಸುಖನಿದ್ರೆ ಮಂಗಳವಾರ ಮಂಗಳದ ನಿದ್ರೆ ಬುಧವಾರ ಬುದ್ಧಿವಿರಾಮ ನಿದ್ರೆ ಗುರುವಾರ ಗುರುವಿದಾಯ ನಿದ್ರೆ ಶುಕ್ರವಾರ ಚಕ್ರಗತಿಯಲಿ ನಿದ್ರೆ ಶನಿವಾರ ಅನಿವಾರ್ಯ ನಿದ್ರೆ ಭಾನುವಾರ ಸಾಲದ ಕೊಸರು ನಿದ್ರೆ ಇನ್ನು ಇದ್ದ ಬಿದ್ದ ಹೊತ್ತಲ್ಲಿ ...

ತಾಯೆ ನಿನ್ನ ಮಡಿಲಲಿ ಕಣ್ಣ ತೆರೆವ ಕ್ಷಣದಲಿ ಸೂತ್ರವೊಂದು ಬಿಗಿಯಿತಮ್ಮ ಸಂಬಂಧದ ನೆಪದಲಿ ಆಕಸ್ಮಿಕವೇನೋ ತಿಳಿಯೆ ನಿನ್ನ ಕಂದನಾದುದು, ಆಕಸ್ಮಿಕ ಹೇಗೆ ನಿನ್ನ ಪ್ರೀತಿ ನನ್ನ ಗೆದ್ದುದು? ಗುಣಿಕೆ ಮಣಿದು ನಾನು ನಿನ್ನ ಚರಣತಳಕೆ ಬಿದ್ದುದು? ಇಲ್ಲಿ ಹರ...

ಕತ್ತಲಾಗುವುದನೇ ಕಾದ ಹೊಲದೊಡೆಯ ಸಿಹಿ ಹಾಲು ತುಂಬಿದ ಬೆಳೆಸೆ ತೆನೆಯ ಕುಳ್ಳು ಬೆಂಕಿಯಲಿಟ್ಟು ಹದವಾಗಿ ಸುಟ್ಟು ಚೂರು ಚೂರೇ ಕಂಕಿಯನು ಕಿತ್ತು ಕರಿಯ ಕಂಬಳಿಯ ಒಡಲ ತುಂಬಿ ಬಲಿತ ದಂಟಿಲೆ ಒಡನೆ ಓಡೆಯ ಏರಿಸಾರಿಸಿ ತೂರಿಸಿ ಮೂಲೆಸೇರಿಸಿ ತಳ ಸರಿಸಿ ಹೊಡ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...