
ಹೋಗಿ ಬರಲೇ ? ನನ್ನ ಕೈಗೆಟುಕದವ ನೀನು, ನೀನು ಸಹ ಬಲ್ಲೆ ನಿನ್ನೆತ್ತರವ, ಅದ ನುಡಿವ ರಾಜಸನ್ನದು ನಿನ್ನ ಮುಕ್ತನನು ಮಾಡಿದೆ. ನಾನು ನಿನ್ನಲ್ಲಿಟ್ಟ ಸ್ನೇಹ ಪ್ರೀತಿಗಳೆಲ್ಲ ಇನ್ನಿಲ್ಲ, ಇದ್ದೀತು ಹೇಗೆ ಒಪ್ಪದೆ ನೀನೆ ? ಈ ಭಾಗ್ಯಕ್ಕೇನು ಅರ್ಹತೆ ತಾನ...
ಎಲ್ಲಾ ಸ್ವಚ್ಛಂದದ ಸೆಳವು ಒಳಗೊಳಗೆ ಇಳಿದ ತಂಗಾಳಿ, ಮೈ ಹಗುರಾಗುವ ನಿನ್ನ ಸ್ಪರ್ಶ, ಹರವು ದಾಟಿದ ಒಂದು ನದಿ ಬಯಲು. ಘಮ ಘಮಿಸಿದ ಮುಂಜಾನೆ, ಕಿರಣಗಳ ಸೋಕಿ ಉಮೇದಗೊಂಡ ಭಾವಗಳು ಹೊಸ ಹಾಡು ಹಕ್ಕಿ ಕೊರಳು, ಒಡಲ ತುಂಬ ಹಸಿರು ಚಿಮ್ಮುವ ಹವಣಿಕೆ. ನಡೆಯು...
ಸ್ವರ್ಣಸಮುದ್ರದಿ ಪಯಣಿಸಿಹೆ ರಜತತೀರವನು ನೂಕಿರುವೆ ಜ್ಞಾನಭಾಸ್ಕರನ ತಲುಪಿರುವೆ ಇಳೆಯಿರುಳಭಿಜಿತ್ ಸೋಕಿರುವೆ. ದೃಷ್ಟಿದೀಪಿಸುವ ಕ್ಷೇತ್ರಗಳು ಕೆಚ್ಚಿನ ಕಸುವಿನ ಬೆಟ್ಟಗಳು ಹರ್ಷಜ್ವಾಲೆಯ ಶಿಖರಗಳು ಕೇವಲ ಬೆಳಕಿನ ಗಾಳಿಯೊಳು. ಆತ್ಮವಿಸ್ಕೃತಿಯ ಕಡಲು...
ಶಿಲೆಗಳಾಗಬೇಡಿ ಮನುಜರೇ| ಸುಂದರ ಶಿಲ್ಪಕಲೆಯಾಗಿ ಕೂರಬೇಡಿ| ಬರಿಯ ಹೊಟ್ಟೆಪಾಡ ಓದ ಕಲಿತು ಗೋಡೆಯ ಚಿತ್ರಪಟವಾಗಿ ನಿಲ್ಲಬೇಡಿ| ಜೀವಂತ ಮನುಜರಾಗಿ ಮನೆ, ಸಮಾಜಕ್ಕೆ ಉಪಯೋಗವಾಗುವ ನಡೆದಾಡುವ ಮಾನವರಾಗಿ || ಎಷ್ಟು ಸೌಂದರ್ಯವಿದ್ದರೇನು ಸಹನೆ ಸೌಹಾರ್ದವಿ...
ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು ಇರುಳಿನಲಿ ಭಯವೆರಸಿ ದಾರಿ ಮರೆದಿಹುದು ಹೊರಗೆ ಚಳಿ ಮಳೆ ಗಾಳಿ ಜಗವ ಭಯಗೊಳಿಸುವುದು ಸೊರಗಿ ಮೌನದಿ ನಡುಗಿ ಭೀತಿಗೊಳುತಿಹುದು. ಒಳ ದನಿಯು ಅಡಗಿಹುದು ಎದೆಯೊಳಗೆ ಉಸಿರಿಲ್ಲ ಕಳೆದೊಗೆದ ಸಿಪ್ಪೆಯೊಲು ಬಾಳಲರಿ...
ಇಲ್ಲಿ ಸಲ್ಲುವುದೆ ಅಲ್ಲಿಯೂ ಸಲ್ಲುವುದೆ ಅಥವ ಅಲ್ಲಿ ಸಲ್ಲುವುದು ಬೇರೆಯೇ ಇಲ್ಲಿಯ ಮಲ್ಲಿಗೆಯು ಅಲ್ಲಿಯು ಮಲ್ಲಿಗೆಯೆ ಅಲ್ಲಿಯ ಮಲ್ಲಿಗೆಯು ಮಾಸುವುದೆ ಇಲ್ಲವೇ ಇಲ್ಲಿಯ ಗುಲಾಬಿಯು ಅಲ್ಲಿಯು ಗುಲಾಬಿಯೆ ಅಲ್ಲಿಯ ಗುಲಾಬಿಗೆ ಮುಳ್ಳುಗಳೆ ಇಲ್ಲವೇ ಇಲ್ಲಿ...
ಸೀರೆ ಸುತ್ತಿಕೊಳ್ಳುವಾಗ ದ್ರೌಪದಿ ಉಂಗುರ ಎತ್ತಿಕೊಳ್ಳುವಾಗ ಶಕುಂತಲೆ ಒಲೆ ಹೊತ್ತಿಕೊಳ್ಳುವಾಗ ಸೀತೆ ಯಾಕೆ, ಯಾಕೆ ನೆನಪಾಗಬೇಕು? ಕೆರೆಯ ಏರಿಯ ಮೇಲೆ ಭಾಗೀರಥಿ ಎಡವಿದ ಕಲ್ಲುಗಳಲ್ಲಿ ಒಬ್ಬಬ್ಬಳೂ ಮಹಾಸತಿ ಯಾಕೆ, ಯಾಕೆ ಕಾಣಬೇಕು? ಚಿತೆಯಿಂದ ಎದ್ದು ...
ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು ಬಂದವನ ಘನಕಾವ್ಯ ಹಾರಿಸಿದ ಹೆಮ್ಮೆಯ ತುಂಬು ಹಾಯಿಯೆ ನನ್ನ ಭಾವಗಳ ಹೂಳಿದ್ದು ಹೊತ್ತ ಬಸಿರೊಳೆ ಅದಕೆ ಗೋರಿಯನು ಕಟ್ಟಿದ್ದು ? ಇರುಳ ಶಕ್ತಿಗಳ ನೆರವಿಂದ ಮರ್ತ್ಯರ ಮೀರಿ ಬರೆಯಬಲ್ಲವನ ಸತ್ವವೆ ನನ್ನಮೆಟ್ಟಿ...













