ತೋಟಕ್ಕೆ ಗಿಡಗಳ ಮಧ್ಯೆ ಬಾಳೆ ಹಾಕಬೇಕು ಅಂದುಕೊಂಡಿದ್ದ ಇಳಾ ಮೊದಲು ಮಣ್ಣು ಪರೀಕ್ಷೆ ಮಾಡಿಸಬೇಕು ಅಂತ ಗೊತ್ತಾದ ಮೇಲೆ ಅದನ್ನು ಮಾಡಿಸಿದಳು. ಮಣ್ಣು ಪರೀಕ್ಷೆ ಮಾಡಿಸಿ ಬಾಳೆ ಹಾಕಬಹುದು ಅಂತ ಗೊತ್ತಾದ ಮೇಲೆ ಅಂಗಾಂಶ ಕಸಿ ಪದ್ಧತಿಯಿಂದ ಬಾಳೆ ಬೆಳೆದರ...
ಸ್ವಾತಂತ್ರ್‍ಯ ಸೌಧವನು ರಚಿಸತೊಡಗಿಹರದೋ ನಾಡ ನಾಯಕರೆಲ್ಲರೊಂದುಗೂಡಿ; ಸೌಧವನ್ನಾಗಿಸುತ ಅದಕೆ ಕಲಶವನಿಟ್ಟು ಹರಸು, ಹೇ! ಭಾರತದ ಭಾಗ್ಯದೈವ! ಮತದ ಮೈಲಿಗೆ ಕಳೆದು ಒಮ್ಮತದ ಮಡಿಯುಟ್ಟು ಸ್ವಾತಂತ್ರ್‍ಯ ಮಂದಿರದೊಳೆಲ್ಲ ನೆರೆದು ಭಾರತಾಂಬೆಯನೇಕನಿಷ್ಠೆಯ...
ಚಂದ ಚಂದದ ಮಕ್ಕಳು ಅಂಗಳಕೆ ಬಂದರು ತಿಂಗಳ ಬೆಳಕ ನೋಡಿ ನಲಿದು ನಾಳೆ ಬರುವೆವೆಂದರು ಚಂದ ಚಂದದ ಮಕ್ಕಳು ಹೂದೋಟಕೆ ಹೋದರು ಒಂದೊಂದು ಹೂವಿಗೂ ಪರಿಮಳವ ತಂದರು ಚಂದ ಚಂದದ ಮಕ್ಕಳು ಪಾಠಶಾಲೆಗೆ ತೆರಳಿದರು ಪಾಠ ಕಲಿತು ಓಟಕಿತ್ತು ಊಟಕೆ ಮನೆಗೆ ಬಂದರು ಮಕ್...
ಹೆತ್ತ ತಾಯಿಯೆ ನಿನ್ನ ಸೇವೆಗೆ ಮುಡಿಪು ನನ್ನೀ ಬಾಳುವೆ, ನಿನ್ನ ಮಗ ನಾ ಎನುವ ಹೆಮ್ಮೆಯ ಹೊತ್ತು ಹರಿದಿದೆ ಕಾಲುವೆ. ನಿನ್ನ ಸ್ಮರಣೆಯೆ ಇಂಥ ಭೀಕರ ಯುದ್ಧ ರಂಗದ ನಡುವೆಯೂ, ಸಹಜವಲ್ಲದ ಬಿರುಸು ಬಾಳಿನ ಮೃತ್ಯು ಸನ್ನಿಧಿಯಲ್ಲಿಯೂ. ನೆಮ್ಮದಿಯೊಳಿದೆ ಇಡ...
ಶ್ರೀರಾಮಚಂದ್ರ ಹುಟ್ಟಿದ ದಿನವೇ ಡೋಂಟ್ ಕೇರ್ ಅಂತ ನೀವೇ ಫೇರ್‌ವೆಲ್ ಏರ್ಪಾಡು ಮಾಡುಕೊಂಡಿದ್ದು ನೋ ಒನ್ ವಾಸ್ ಅವೇರ್ ನಮಗಾರಿಗೂ ಗೊತ್ತೇ ಮಾಡದಂತೆ ಹೊರಟು ಬಿಟ್ಟಿದ್ದು ವಾಸ್ ಇನ್ ಎ ವೇ ಅನ್‌ಫೇರ್ ನಿಮ್ಮ ಪಾಂಡಿತ್ಯ ನೀವು ಕನ್ನಡ ಕಾವ್ಯಕ್ಕೆ ...
ಒಂದು ಹೂ ನಗು ಬೇಕೆಂದರೂ ಕೊಡಬೇಕು ಕಾಸು ಬರೀ ಒಣ ಮಾತಿಗೂ ಲೆಕ್ಕ ರೊಕ್ಕ ತಾಸು ತಾಸು ಸೇವೆ ಕರ್ತವ್ಯಗಳ ಮಾತು ದೂರ ಬರೀ ಸಂಬಳ ಕೇವಲ ಸಿಂಬಳ ಮಾಡುವ ಕೆಲಸಕ್ಕೂ ಅದರ ಬೆಲೆಗೂ ಎಂದೂ ತಾಳೆಯಾಗುತ್ತಿಲ್ಲ *****...
ಬಳ್ಳ ರಕ್ತ ಕೊಳ್ಳೆ ಹೊಡೆವ ಸೊಳ್ಳೆ ಎದುರು ಮಾನವನ ಯತ್ನ ಬರೀ ಜೊಳ್ಳು! *****...
ಏಡ್ಸ್ ವೈರಸ್ ಏಡ್ಸ್ ಪಸರಿಸಿ ವರ್ಷಗಳೇ ಸಂದರೂ ಅದಕ್ಕೆ ಕಾರಣವಾದ ವೈರಸ್ಸ್ ಬಗ್ಗೆ ತಿಳಿದಿದ್ದಿಲ್ಲ. ಅಥವಾ ಏ ಆರ ಯು ಮುಂತಾದ ವೈರಸ್‌ಗಳು ಏಡ್ಸ್‌ಗೆ ಕಾರಣವೆಂದು ತಿಳಿಯಲಾಗಿತ್ತು. ಆದರೆ ಪ್ಯಾಶ್ಚರ್ ಇನ್ಸ್‌ಟಿಟ್ಯೂಟ ಪ್ಯಾರಿಸ್‌ನ ತಜ್ಞರಾದ ಪ್...
ಸೂರ್ಯನಂತೆ ಬೆಳಗಬೇಕೆಂದು ನಕ್ಷತ್ರದಂತೆ ಮಿನುಗುತ್ತೇವೆ ಪೂರ್ಣತೆ ಪಡೆಯಲು ಬಾಳನ್ನು ಓಣಿಯಲ್ಲಿ ಇಣಕಿ ನೋಡುತ್ತೇವೆ! *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







