ಭಾರತ ದೇಶದ ತೊಂಡು ದನಗಳಿಗೆ ಕರ್ನಾಟಕವೇ ಪ್ರೀತಿಯು ಇಲ್ಲಿಯ ಹುಲ್ಲು ನೀರು ಕಂಡರೆ ಎಲ್ಲಿಲ್ಲದ ಸಂಪ್ರೀತಿಯು ಆದರೆ ಏಕೊ ಕನ್ನಡ ಎಂದರೆ ಅವುಗಳಿಗಿನ್ನು ಅಪಥ್ಯವು ಇಂತಹ ರೋಗಕೆ ಮದ್ದು ಯಾವುದು? ತಿಳಿಯಬೇಕು ಇಂದು ನಾವು ಕರ್ನಾಟಕಕೆ ಗೋಡೆಗಳಿಲ್ಲ ಇರು...

ಹಿಂಬಾಲಿಸಿ ಅತ್ತ, ಇತ್ತ ನೀ ತಿರುಗಿದತ್ತ, ಹೊರಳಿದತ್ತ, ಹರಿದತ್ತ ಆಸೆಬುರುಕ ಕಣ್ಣಲ್ಲಿ ಹತ್ತು ಹಲವು ಕೋನಗಳಲ್ಲಿ ಚಿತ್ರ ಎತ್ತಿಕೊಳ್ಳುತ್ತ ಸಂಧಿಗಾಗಿ ಹೊಂಚುತ್ತ ಬರ ಸೆಳೆಯೆ ಹುನ್ನಾರ ಹೂಡುತ್ತ ನೆವ ಸವದಲ್ಲಿ ತಾಕುತ್ತ ಅಲ್ಲಿ ಇಲ್ಲಿ ಮುಟ್ಟುತ್ತ...

ಹಾಡುವುದು ಕೋಗಿಲೆ ತನ್ನ ಆಶೆಯಂತೆ ಹಾಡೆ ಕೋಗಿಲೆಯ ಭಾಷೆಯಂತೆ ಅರಳುವುದು ಹೂವು ತನ್ನ ಆಶೆಯಂತೆ ಪರಿಮಳವೆ ಹೂವಿನ ಭಾಷೆಯಂತೆ ಉರಿಯುವುದು ಬೆಂಕಿ ತನ್ನ ಆಶೆಯಂತೆ ಬೆಳಕೆ ಬೆಂಕಿಯ ಭಾಷೆಯಂತೆ ಬೀಸುವುದು ಗಾಳಿ ತನ್ನ ಆಶೆಯಂತೆ ಮರ್ಮರವೆ ಗಾಳಿಯ ಭಾಷೆಯಂತ...

೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ ವಿಶಾಲ ಹೃದಯವಿಲ್ಲದ ನೀಚರು ನಿಕೃಷ್ಟರು ಜ್ಞಾನಭಾರತಿ ಬೆಂಗಳೂರು&...

ಬಳುಕುತ ಕುಣಿಯುತ ವಯ್ಯಾರದಲಿ ಗುಡ್ಡಬೆಟ್ಟ ಕೊರಕಲಲಿ ಬರುತಿಹಳು ಹೆಜ್ಜೆ ಇಟ್ಟಡಿಯಲಿ ನೆಲವು ಅರಳುತಲಿ ಹಸಿರ ಪೈರನುಟ್ಟಿಹಳು ಸಂಭ್ರಮದಲಿ ವಿದ್ಯುತ್‌ ಯಂತ್ರಕೆ ನೀನಾದೆ ಮಂತ್ರ ಕೈಗಾರಿಕೆಗೆ ನೀನಾದೆ ರಾಗ ತಾಳತಂತ್ರ ಸಾಸಿರ-ಸಾಸಿರ ಕನಸುಗಳ ಕಥನವು ಭ...

ಅಂತರಂಗದಾಳದಲಿ ಮರೆಯಾಗಿ ನಿಂತಿದೆ ಒಂದು ಬಂಗಾರದ ಎಳೆ ಅದು ಆತ್ಮವಿಶ್ವಾಸದ ನೆಲೆ. ಅನುಭವದುರಿಯಲಿ ಬೆಂದು ಉಕ್ಕಿಹರಿದ ಲಾವಾರಸ ಗಟ್ಟಿಯಾದಾಗ ಪುಟಕ್ಕಿಟ್ಟ ಬಂಗಾರ, ಅದೇ ಜೀವನ ಸಾರ. ಅಂತರಂಗದಾಳದ ಬಂಗಾರದ ಎಳೆಯೊಳಗೆ ಬೆಚ್ಚನೆ ಮಲಗಿದೆ ಆತ್ಮವಿಶ್ವಾಸ...

ಬಾಳಿಗಾಹಾರ ಹೇಗೋ ಹಾಗೆ ನೀ ನನಗೆ, ಬೇಸಿಗೆಯ ನೆಲಕೆ ಮಳೆಧಾರೆ ಸುರಿದಂತೆ; ನನ್ನ ಈ ತುಯ್ತಗಳು ಎಲ್ಲವೂ ನಿನಗಾಗೇ ಜಿಪುಣನಿಗು ಅವನ ನಿಧಿಗೂ ನಡುವೆ ಇರುವಂತೆ. ನಿನ್ನ ಬಗೆಗಿನ ಹೆಮ್ಮೆ ಒಮ್ಮೆ, ಮರುಗಳಿಗೆಯೇ ಕಾಲ ನಿನ್ನೀ ಚೆಲುವ ಕದಿವನೆನ್ನುವ ಶಂಕೆ;...

ತಪ್ಪು ನೆಪ್ಪುಗಳ ನಡುವೆ “ಮಹಾರಾಜ ಮಹಾರಾಜ ರಾವಣೇಶ್ವರ” ಕರೆಗೆ ಕಿವಿಗೊಟ್ಟು ತಟ್ಟನೆ ತಿರುಗಿದೆ. ನೆನಪಿನ ತಂತುಗಳು ತುಂಡಾಗಿ ವಾಸ್ತವ ಜಗತ್ತಿಗೆ ಬಂದಾಗ ಸಖಿಯೊಬ್ಬಳು ಏನನ್ನೋ ಭಿನ್ನವಿಸುತ್ತಿದ್ದಾಳೆ. “ಏನು ವಿಷಯ”?...

ಬಾಳ ಬಳ್ಳಿ ಬಿಟ್ಟ ಹೂವು ಕೂಸು ಮುದುಮುದ್ದಿದೆ ಜೀವ ಜೀವ ಆತು ಓತು ಮೈಯ್ಯ ಮಾಟ ತಿದ್ದಿದೆ ಮೋಹ ಮಮತೆ ಕೂಡ ದಣಿದು ದೇಹ ಜಾಲ ಹೆಣೆದಿದೆ ಅಳುವ ನೋವ ಕುಂದು ಕೊರತೆ ಬಾಲರೂಪ ನೊಣೆದಿದೆ ಬಲಿದು ಬೆಳೆದು ನಲಿದು ಉಲಿದು ಹೊಂದು ಫಲವ ಕುಸುಮವೆ ಬಾಳು ಬಾಳ ಕ...

1...7891011...14

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....