ನೇತ್ರಾವತಿ ಮೈ ತುಂಬಿಕೊಂಡ ಕರಿಚಂದ್ರ ಕಾಳ ಸೀರೆ ಎಲ್ಲೆಲ್ಲೂ ನಾನೀ ನೂಲಿನೆಳೆಯ ಕಸೂತಿ ಅದು ಕರುಳ ಬಳ್ಳಿ ಹಬ್ಬಹರಡಿ ಮುರಗಿ ಹೆಣಿಕೆಯ ವಂಕಿ ಚಿತ್ತಾರ ನಡೆಯ ನಾಜೂಕು ಹರವು ಖುಷಿ ಪ್ರೀತಿಯ ಕುಸುರಿ ಕಣ್ಣರಳಿ ಮದುವೆ ಮನೆ ಕೋಮಲ ಎಳೆಹಾಸು ಮೃದು ಮನದ ...

ತನ್ನಷ್ಟಕ್ಕೆ ತಾನು ನಡೆದು ಹೋಗುತ್ತಿದ್ದರೂ ಮೈಯೆಲ್ಲಾ ಸಾವಿರ ಕಣ್ಣು ಮಾಡಿಕೊಂಡು ಯಾರೋ ನೋಡಿದಾಗ ಭಯಗೊಂಡು ಬೆವೆತು ಚಕ್ಕನೆ ಆ ಕಡೆ ಸರಿದರೆ ಯಾರು ಇಲ್ಲ ಆದರೂ – ಏಕೋ ಏನೋ ಸಂತೆಯಲ್ಲಿ ನಡೆದಾಡಿದ ನೆನಪು *****...

ಪ್ರತಿಯೊಬ್ಬ ಮನುಷ್ಯನೂ ತಾನು ಮಲಗುವ ಸಮಯದಲ್ಲಾದರೂ ತುಸು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಏನು ಮಾಡುತ್ತಿದ್ದೇನೆ? ಯಾತಕ್ಕೆ ಮಾಡುತ್ತಿದ್ದೇನೆ? ಮಾಡುತ್ತಿರೋದು ಸರಿಯೆ, ತಪ್ಪೆ? ಹೀಗೆ ಪ್ರಶ್ನೆಗಳನ್ನ ಕೇಳ್ತ ತನ್ನ ವಿಚಾರಗಳನ್ನ ಚರ್ಚಿಗೆ ಗುರಿ...

ಅರಿಯದವರ ಅನಿಸಿಕೆ ಹೆಣ್ಣು ಅಬಲೆ ತಿಳಿಯದು ಹೆಣ್ಣಿನ ಬೆಲೆ ಸಮಯಸಿಕ್ಕಾಗ ಬೀಸಿ ಬಲೆ ತೋರಿಸುತ್ತಾರೆ ಜಗತ್ತಿಗೆ ತಾವೆಂತಹ ಸಬಲೆ *****...

ಲಖನೋವಿನಲ್ಲಿ ನಾನು ಲಖನವಿ ಕುರ್ತ ಧರಿಸಿದೆನು ಅತಿ ತೆಳ್ಳಗಿನ ಒಂದು ಜತೆ ಚಪ್ಪಲಿಯ ಮಟ್ಟಿದೆನು ಮತ್ತೆ ಗಡ್ಡವೂ ಬೆಳೆದಿತ್ತು, ಅಲ್ಲಲ್ಲಿ ಬಿಳಿಯಾಗಿತ್ತು, ಇಡಿಯ ಹಜರತ್‌ಗಂಜ್ ನನ್ನ ಕಾಯುವಂತಿತ್ತು ಮೆಟ್ಟು ಮೆಟ್ಟಲಿಗೆ ಅಂಗಡಿ ಬಾಗಿಲುಗಳು ತೆರೆದು...

ನೆಮ್ಮದಿಗೆ ಅವಳು ಹಾಕಿದ ಅರ್ಜಿಗಳೆಲ್ಲಾ ವಜಾಗೊಂಡಿದೆಯಂತೆ. ವಿನಂತಿ ಪತ್ರದ ಒಕ್ಕಣಿಕೆ ಒಂದು ಚೂರು ಸರಿಯಾಗಿಲ್ಲ, ಎಲ್ಲಿಯೂ ಒಂದನ್ನು ಕಾಳಜಿಯಿಂದ ಪೂರ್ಣಗೊಳಿಸಿಲ್ಲ, ಚಿತ್ತುಕಾಟು, ತಿದ್ದುಪಡಿಗಳಿದ್ದರೆ ಪರಿಗಣಿಸಲಾಗುವುದಿಲ್ಲ -ಎಂಬುದು ತಲಾಟಿಯ ...

ನೋಡು- ಕಣ್ಣು ತುಟಿ ಮೂಗು ಕೈಯಿ ಮೈಯಿ ಏನಿಲ್ಲದಿದ್ದರೂ ಇದ್ದ ಹಾಗೆಯೇ ಕಾಣಿಸುವ ಚಂದ್ರನನ್ನು ಕಡೆಯ ಬಾರಿ ಎಂಬಂತೆ ನೋಡಿ ಬಿಡು. ಬೆಂಕಿಯನ್ನು ಬೆಳಕನ್ನು ಬಣ್ಣವನ್ನು ಬೆಡಗನ್ನು ತುಂಬಿಕೊಂಡಿರುವ, ನಿನ್ನೊಳಗೆ ಬೆರಗನ್ನು ಭಯವನ್ನು ಹುಟ್ಟಿಸಿದ ಆಕಾಶ...

ಸತ್ತ ನೆನ್ನೆ ಮೊನ್ನೆಗಳು ಎತ್ತೆತ್ತ ಹೋದವೋ ಕಣ್ಣಿ* ಕಿತ್ತು ಚದುರಿಬಿಟ್ಟವು ಕಣ್ಣಿಗೇ ಕಾಣದಂತೆ ಕತ್ತೆತ್ತಿ ನೋಡು ನಿನ್ನ ಮುಂದಿದೆ ಇಂದು ಇನ್ನೊಂದು ನಾಳೆ ಬದುಕ ಪುಸ್ತಕದ ಮತ್ತೊಂದು ಹಾಳೆ ***** *ಕಣ್ಣಿ: ಸಣ್ಣ ಕರುಗಳನ್ನು ಕಟ್ಟಿಹಾಕಲು ನುಣುಪ...

ಕಾಳ ರಾತ್ರಿಯ ಚೋಳ ಭಯದಲಿ ಆತ್ಮ ಹಾವನು ತುಳಿದಿದೆ ||ಪ|| ರಾತ್ರಿ ಜಾರದೆ ಪಾತ್ರ ತೀರದೆ ಸೂರ್ಯದೇವನು ಏಳನೆ ಯುಗದ ಗಂಟೆಯ ಜಗದ ಗಂಟೆಯ ಒಮ್ಮೆ ಬಾರಿಸಿ ಕರೆಯನೆ ಹಗಲು ಕರಗಿದೆ ಇರುಳ ಮೌನದಿ ಮಿಂಚು ಹುಳಗಳು ಹಾರಿ ಮಿನುಗು ತಾರೆಯ ಗುನುಗು ರಾಗದಿ ಚಳಿ...

1...910111213...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....