ಅಪ್ಪ ಅಪ್ಪ ನಿನ್ನ ನಾನು ಡ್ಯಾಡಿ ಅನ್ನೋಲ್ಲ, ಅಪ್ಪ ಅಂತ್ಲೇ ನಿನ್ನ ಕರೆದರೆ ಚೆನ್ನಾಗಿರೊಲ್ವ? ಮಮ್ಮಿ ಅಂದ್ರೆ ಏನೋ ಕಮ್ಮಿ ಅಮ್ಮಾ ಅನ್ಲಾಮ್ಮ? ಅಮ್ಮ ಅಂದ್ರೆ ಜಾಮೂನ್ ತಿಂದ್ಹಾಂಗ್ ಇರತ್ತೆ ಕಣಮ್ಮಾ! ಅಜ್ಜೀ ಅಂದ್ರೆ ಅಜ್ಜೀಗ್ ಖುಷಿ ಪುಟ್ಟಾ! ಅಂತಾ...

ಶಂಕರ: “ಲೋ ದಿವಾಕರ, ನೀನು ಒಂದು ತಿಂಗಳು ರಜಾ ಹಾಕಿ ಊರಿಗೆ ಹೋದೆಯಲ್ಲಾ, ಅಲ್ಲಿ ಹೇಗೆ ಕಾಲ ಕಳೆದೆ?” ದಿವಾಕರ: “ಮೊದಲನೆಯ ದಿನ ಕುದುರೆ ಸವಾರಿಯಲ್ಲಿ ಕಾಲಕಳೆದೆ. ಮಾರನೆಯ ದಿನದಿಂದ ರಜಾ ಮುಗಿಯುವವರೆಗೂ ಆಸ್ಪತ್ರೆಯಲ್ಲಿ ಕಳೆ...

ಮನವ ನಿಲ್ಲಿಸಿಹೆನೆಂದು, ಆ ಮನದ ನೆಲೆಗಾಣದೆ ಅರು ಹುಮರವೆಗೊಳಗಾಗಿ, ಕಳವಳ ಮುಂದುಮಾಡಿ, ಚಿಂತೆ ಸಂತೋಷವ ನೋಡಲು, ಭ್ರಾಂತಿಗೊಂಡು ತಿರುಗುವ ಮನುಜರಿರಾ ನೀವು ಕೇಳಿರೋ. ಮನವ ನಿಲ್ಲಿಸುವುದಕ್ಕೆ ಶರಣರ ಸಂಗ ಬೇಕು. ಜನನ ಮರಣವ ಗೆಲಿಯಬೇಕು. ಗುರುಲಿಂಗಜಂ...

ಮಾಸಿದ ಜನತೆಯ ತೊಳೆಯುತ್ತ ಸನ್ಮಾರ್ಗ ತೋರಲು ಬರುವಂಥ ಬೆಳಕು ಸಂತರು ಬಾಳನು ಬೆಳಗುವ ಬೆಳಕು ಬಸವ ಬುದ್ಧರಂತೆ ರಾಮಕೃಷ್ಣರಂತೆ ಸರ್ವಜ್ಞನೀ ಹುಟ್ಟಿ ಬಂದೆ ಮಲಗಿದ್ದ ನಾಡವರನೆಬ್ಬಿಸ ಬಂದೆ ತುಂಡುಗಂಬಳಿ ಹೊದ್ದು ಕರದಿ ಕಪ್ಪರ ಹಿಡಿದು ವೀರಕೇಸರಿಯಂತೆ ತ...

‘ಮರುಳಸಿದ್ಧ’ ಒಬ್ಬ ಕ್ರಾಂತಿಯೋಗಿ, ವಿಶ್ವ-ಬಂಧು ಎಂದೆಲ್ಲಾ ಅಭಿಮಾನಿಸುವ ಭಕ್ತರಿದ್ದಾರೆ. ಕರ್ನಾಟಕದ ಪ್ರಮುಖ ಮಠವೆಂದೇ ಹೆಗ್ಗಳಿಕೆಗೆ ಪಾತ್ರವಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ನಾಡಿನಾದ್ಯಂತ ಶೈಕ್ಷಣಿಕವಾಗಿ, ಸಾಮಾಜಿಕವಾಗಿ,...

ಮನದ ತುಂಬೆಲ್ಲಾ ಬಿರುಕುಗಳೇ ಬಿಟ್ಟಿರುವಾಗ ಎಷ್ಟೂಂತಾ ತ್ಯಾಪಿಹಚ್ಚಿ ಸವರಲಿಕ್ಕಾದೀತು? ತುಣುಕು ತುಣುಕು ಹಳೆಬಟ್ಟೆಗಳ ತ್ಯಾಪಿಹಚ್ಚಿದ ಹೊದಿಕೆ ಕೌದಿಯೇ ಹೊರತು ರಗ್ಗ ಅಲ್ಲಾ! ಬಿರುಕು ಮನಸು ಬಿರುಕು ಕಟ್ಟಡ ಬೀಳೋದಕ್ಕೆ ಮೊದಲೇ ‘ಆರ್ಕಿಟೆಕ್ಟ್’ ಹುಷ...

ಪ್ರಿಯದರ್ಶಿಯಾದ ಅಶೋಕನು ತನ್ನ ರಾಜ್ಯದಲ್ಲಿ ಹೆದ್ದಾರಿಗಳನ್ನು ಕಡಿಸಿದನು ಬಾವಿಗಳನ್ನು ತೋಡಿಸಿದನು ಸಾಲುಮರಗಳನ್ನು ನೆಡಿಸಿದನು ಧರ್ಮಸಾಲೆಗಳನ್ನು ಕಟ್ಟಿಸಿದನು ಅಲ್ಲಲ್ಲಿ ಶಿಲಾಶಾಸನಗಳನ್ನು ನಿಲ್ಲಿಸಿದನು. ಅವನ ಕಾಲದಲ್ಲಿ ಪ್ರಯಾಣಿಕರಿಗೆ ಕಳ್ಳಕಾ...

ಸೂರ್ಯ ಬಿಡ್ರಿ ನನ್ಮಗಂದು ಡೇ ಡ್ಯೂಟಿ ಟೈಂ ಟು ಟೈಂ ಅವನೇನ್ ನನ್ ಥರಾ ಒಂದಿನನಾದರೂ ಮಾಡ್ತಾನಾ ನೈಟ್ ಡ್ಯೂಟಿ ಆಕಾಶದಲ್ಲಿ ಒಂದ್ನಿಮಿಶ ಎಂದಾದರೂ ಇರ್‍ತಾನಾ ಓವರ್‍ ಟೈಂ. *****...

ಮನೆಗೆ ಬಂದ ಅತಿಥಿ ಅಭ್ಯಾಗತರನ್ನು ಸತ್ಕರಿಸುವುದಕ್ಕೆ ಹಿಂದಿನ ದಿನಗಳಲ್ಲಿ ತಂಬಾಕು ಸೇದುವ ಏರ್ಪಾಡು ಮಾಡಿಕೊಡುತ್ತಿದ್ದರು. ಬಂದವರಿಗೆ ಎಕ್ಕೆಲೆ – ತಂಬಾಕುಗಳನ್ನು ಒದಗಿಸಿದರೆ ದೊಡ್ಡ ಮನ್ನಣೆ ಮಾಡಿದಂತೆ. ಬಂದ ಅತಿಥಿಯಾಗಲಿ ಆಪ್ತರಾಗಲಿ ಮನ...

1...4445464748...53

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...