ಮನವ ನಿಲ್ಲಿಸಿಹೆನೆಂದು, ಆ ಮನದ ನೆಲೆಗಾಣದೆ
ಅರು ಹುಮರವೆಗೊಳಗಾಗಿ, ಕಳವಳ ಮುಂದುಮಾಡಿ,
ಚಿಂತೆ ಸಂತೋಷವ ನೋಡಲು, ಭ್ರಾಂತಿಗೊಂಡು
ತಿರುಗುವ ಮನುಜರಿರಾ ನೀವು ಕೇಳಿರೋ.
ಮನವ ನಿಲ್ಲಿಸುವುದಕ್ಕೆ ಶರಣರ ಸಂಗ ಬೇಕು.
ಜನನ ಮರಣವ ಗೆಲಿಯಬೇಕು.
ಗುರುಲಿಂಗಜಂಗಮದಲ್ಲಿ ವಂಚನೆ ಇಲ್ಲದೆ,
ಮನದ ಸಂಚಲವ ಹರಿದು, ನಿಶ್ಚಿಂತವಾಗಿ
ನಿಜವ ನಂಬಿ ಚಿತ್ರ ಸುಯಿಧಾನವಾದಲ್ಲದೆ,
ಮನದೊಳಗೆ ಲಿಂಗವು ಅಚ್ಚೊತ್ತಿದಂತಿರಬೇಕೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****