ಮನೆ ಮನೆಯೊಳೆಮಗೆಷ್ಟೊಂದು ಅಡುಗೆ
ಯನುಕೂಲವಿರುತ್ತಿರಲೇನು ಮಲವೆದ್ದು ಘಂ
ಮೈನುವ ಬೀದಿ ಬದಿಯನ್ನದಾತುರವೋ?
ಮನೆ ಮಡದಿ ಮಕ್ಕಳೊಲವಿನಲಿ ಉಂಬನ್ನ
ತನು ಮನವಾಗೆ ಮನೆಯೆ ಮಂದಿರವಕ್ಕು – ವಿಜ್ಞಾನೇಶ್ವರಾ
*****