ಡೊಳ್ಳು ಹೊಟ್ಟೆ ಗುಂಡ ತಿಂಡಿ ತಿನ್ನೋಕ್ ಬಂದ, ಹಸಿವು ಇಲ್ಲ ನಂಗೆ ಚೂರೇ ತಿಂತೀನ್ ಅಂದ. ಒಂದು ತಟ್ಟೆ ಉಪ್ಪಿಟ್ಟು ಎರಡೇ ನಿಮಿಷ, ಢಂ! ಮೂರೇ ದೋಸೆ. ನಾಕೇ ರೊಟ್ಟಿ ಐದೇ ಇಡ್ಲಿ ಢಂ! ಆರು ಒಡೆ ಢಂ ಏಳು ಉಂಡೆ ಢಂ, ಎಂಟೊ, ಒಂಬತ್ತೊ ಪೂರಿ ಅಷ್ಟೆ ಢಂ ಢ...

ಗುರು: “ಏನಯ್ಯಾ, ಎಷ್ಟು ವರ್ಷಗಳಾಯಿತು ನಿನ್ನನ್ನು ನೋಡಿ ಏಕೆ ಹೀಗೆ ಇಳಿದು ಹೋಗಿದ್ದೀ. ಉಂಡಾಡಿ ಗುಂಡನಾಗಿದ್ದೆ; ಏನು ಸಮಾಚಾರ”? ಶಿಷ್ಯ: “ಗುರುಗಳೇ ತಪ್ಪುತಿಳಿಯ ಬೇಡಿ; ನಾನು ಮದುವೆ ಆಗಿಬಿಟ್ಟೆ! ***...

ತನುವೆಂಬ ಹುತ್ತದಲ್ಲಿ, ಮನವೆಂಬ ಸರ್ಪ ಹೆಡೆಯನುಡಿಗಿ ಕೊಂಡಿರಲು, ಜ್ಞಾನಶಕ್ತಿ ಬಂದು ಎಬ್ಬಿಸಲು, ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ಧ್ವಕ್ಕೇರಲು, ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು. ಕರಣಂಗಳೆಲ್ಲ ಉರಿದು ಹೋದವು. ಇದ್ದ ಶಕ್ತಿಯನೆ ಕಂಡು, ಮನ ನ...

ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು ದೇಹ ದೂರದಲಿ ಇದ್ದರೇನು ಈ ದಾಹಕೆಲ್ಲಿ ದೇಹ ಮನೋಲೋಕದ...

ಪ್ರಿಯ ಸಖಿ, ನಮಗೆ ಎಲ್ಲ ಸಂಬಧಗಳಿಗೂ ಹೆಸರಿಟ್ಟು ಕರೆಯುವ ಹುಚ್ಚು. ಅಪ್ಪ, ಅಮ್ಮ, ಅಣ್ಣ, ಅಕ್ಕ, ಚಿಕ್ಕಮ್ಮ, ದೊಡ್ಡಪ್ಪ, ಅಂಕಲ್, ಆಂಟಿ, ಗಂಡ, ಹೆಂಡತಿ, ಫ್ರೆಂಡ್…. ಇತ್ಯಾದಿ ಹೆಸರುಗಳನ್ನಿಟ್ಟು ಸಂಬಂಧಗಳ ವ್ಯಾಪ್ತಿ ಮಿತಿಗೊಳಿಸಿಬಿಡುತ್ತ...

ಕಿವಿಗಳು ಬೇಕು ಸಾರ್‍ ಕಿವಿಗಳು! ಕತ್ತೆಯ ಕಿವಿಗಳು ಕುದರೆಯ ಕಿವಿಗಳು ಹಸುವಿನ ಕಿವಿಗಳು ಎತ್ತಿನ ಕಿವಿಗಳು ಕವಿಯ ಭಂಡಾರ ತುಂಬಲು ಆನೆಯ ಕಿವಿಗಳು ಸಮಯವಿದ್ದರೆ ಕಾವ್ಯಕ್ಕೆ ಮಾನವನ ಕಿವಿಗಳು! *****...

ಅಕ್ಕ! ಆಗಾಗ ನುಗ್ಗುತ್ತಲೇ ಇರುತ್ತವೆ ನಿನ್ನ ಸತ್ಯ ಶೋಧದ ಅಮೃತ ವಚನಗಳು ಗುಣ ಗುಣಿಸುತ್ತೇನೆ ಕನವರಿಸುತ್ತೇನೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕದಳಿ ಬನದಿಂದೆದ್ದು ಬಂದು ನನ್ನ ಭುಜ ತಲುಕಾಡಿದೆ ಕ್ಷಮಿಸು! ಗುರುತು ಹಿಡಿಯಲೇ ಇಲ್ಲ ಮರುವೋ; ನಿದ...

ಅವನ ಅನೇಕ ಹೆಂಡಂದಿರಿದ್ದರಲ್ಲ ಅವರೇನಾದರು? ಅವರೆ?  ಕೆಲವರು ಅವರವರ ಹುಟ್ಟೂರಿಗೆ ಹೊರಟುಹೋದರು.  ಇನ್ನು ಯಾರನ್ನೋ ಆಶ್ರಯಿಸಿದರು.  ಕೆಲವರು ಚಾರ್‌ಮಿನಾರಿನ ಸಮೀಪ ಮಾಲೆಗಳನ್ನು ಕಟ್ಟಿ ಮಾರತೊಡಗಿದರು. ಹಳೆ ನಗರದ ಧೂಳು ಎಲ್ಲಾ ಹೂವುಗಳ ಮೇಲೂ ಕುಳಿ...

ಸಾಹುಕಾರನು ನೆಲಗಡಲೆ ತಿನ್ನುತ್ತ ತನ್ನ ಮನೆಯ ತಲೆವಾಗಿಲ ಮುಂದೆ ಕುಳಿತಿದ್ದನು. ಅತ್ತಕಡೆಯಿಂದ ಒಬ್ಬ ಸಾಧು ಬಂದು ಭಿಕ್ಷೆ ಬೇಡಿದನು. “ಮುಂದಿನ ಮನೆಗೆ ಹೋಗು’” ಎಂದು ಸಾಹುಕಾರನು ನುಡಿದನು. “ತಿನ್ನಲು -ನಾಲ್ಕು ಕಾಯಿಗಳನ್ನಾದ...

1...3940414243...53

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...