ಡೊಳ್ಳು ಹೊಟ್ಟೆ ಗುಂಡ
ತಿಂಡಿ ತಿನ್ನೋಕ್ ಬಂದ,
ಹಸಿವು ಇಲ್ಲ ನಂಗೆ
ಚೂರೇ ತಿಂತೀನ್ ಅಂದ.

ಒಂದು ತಟ್ಟೆ ಉಪ್ಪಿಟ್ಟು
ಎರಡೇ ನಿಮಿಷ, ಢಂ!
ಮೂರೇ ದೋಸೆ. ನಾಕೇ ರೊಟ್ಟಿ
ಐದೇ ಇಡ್ಲಿ ಢಂ!
ಆರು ಒಡೆ ಢಂ
ಏಳು ಉಂಡೆ ಢಂ,
ಎಂಟೊ, ಒಂಬತ್ತೊ ಪೂರಿ ಅಷ್ಟೆ
ಢಂ ಢಂ ಢಂ!

ಒಂದೇ ಲೀಟರ್‍ ಹಾಲು ಕುಡಿದು
ಗುಂಡ ಎದ್ದೇ ಬಿಟ್ಟ
ಯಾಕೋ ತಿಂಡಿ ಸೇರ್‍ತಿಲ್ಲಾಂತ
ತುಂಬ ದುಃಖಪಟ್ಟ!

ಜೈ ಜೈ ಜೈ
ತಿಂಡಿ ಪೋತ ಗುಂಡ
ಎಂಥ ಹೊಟ್ಟೇಬಾಕ ಬಂದ್ರೂ
ಗುಂಡನ ಎದುರು ಥಂಡ!
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)