ಅವನ ಅನೇಕ ಹೆಂಡಂದಿರಿದ್ದರಲ್ಲ
ಅವರೇನಾದರು?

ಅವರೆ?  ಕೆಲವರು ಅವರವರ ಹುಟ್ಟೂರಿಗೆ
ಹೊರಟುಹೋದರು.  ಇನ್ನು ಯಾರನ್ನೋ
ಆಶ್ರಯಿಸಿದರು.  ಕೆಲವರು ಚಾರ್‌ಮಿನಾರಿನ
ಸಮೀಪ ಮಾಲೆಗಳನ್ನು ಕಟ್ಟಿ ಮಾರತೊಡಗಿದರು.
ಹಳೆ ನಗರದ ಧೂಳು ಎಲ್ಲಾ ಹೂವುಗಳ ಮೇಲೂ
ಕುಳಿತಿದೆ.

ಕೆಲವರು ನರ್ತಕಿಯರಾದರು.  ಸ್ಪರ್ಶಕ್ಕೆ ನಾಚಿದರು.
ನಿಜಕ್ಕೂ ಪ್ರೇಮಿಸಿದರು.  ಬೇರೆ ರೀತಿಯಿಂದ
ಬೇರೆ ಜನರೆದುರು ಹಾಡಿದರು.  ಆಗಿಂದಾಗ್ಗೆ ಸತ್ತ
ಇವರ ಗೋರಿಯನ್ನು ಯಾರೂ ಕಟ್ಟಿಸಲಿಲ್ಲ.

ಇನ್ನು ಕೆಲವರು ಕೊನೆಯಿಲ್ಲದ ಗಲ್ಲಿಗಳಾದರು
ನೀವು ಮೆಟ್ಟುವ, ನೀವು ಹುಡುಕುವ
*****

Latest posts by ತಿರುಮಲೇಶ್ ಕೆ ವಿ (see all)