ತನುವೆಂಬ ಹುತ್ತದಲ್ಲಿ,
ಮನವೆಂಬ ಸರ್ಪ ಹೆಡೆಯನುಡಿಗಿ ಕೊಂಡಿರಲು,
ಜ್ಞಾನಶಕ್ತಿ ಬಂದು ಎಬ್ಬಿಸಲು,
ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ಧ್ವಕ್ಕೇರಲು,
ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು.
ಕರಣಂಗಳೆಲ್ಲ ಉರಿದು ಹೋದವು.
ಇದ್ದ ಶಕ್ತಿಯನೆ ಕಂಡು,
ಮನ ನಿಶ್ಚಯವಾದುದನೆ ಕಂಡು,
ಪಶ್ಚಿಮದ ಕದವ ತೆಗೆದು,
ಬಚ್ಚಬರಿಯ ಬೆಳಗಿನೊಳಗೆ ಓಲಾಡಿ
ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****