ಆನಿ ಬಂತಾನಿ ಯವೂರಾನಿ? ಸಿದ್ಧಾಪುರದಾನಿ ಇಲ್ಲಿಗ್ಯಾಕ್ ಬಂತು? ಹಾದಿ ತಪ್ಪಿ ಬಂತು ಹಾದಿ ಯಾಕೆ ತಪ್ಪಿತು? ಕಬ್ಬಿನಾಸೆ ಎಳೆಯಿತು ಬಾಲ ಬೀಸಿಕೊಂಡು ಊರ ನಡುವೆ ಬಂದು ಬಿಟ್ಟಿತು? ಪುಟ್ಟ ಪುಟ್ಟ ಕಣ್ಣು ಮುಖವೊ ತಟ್ಟೆ ಹೊನ್ನು ಮುಕ್ಕಿ ಬಿಡಬೇಕೆನಿಸುವಂ...

ಒಮ್ಮೆ ಕೋರ್ಟಿನಲ್ಲಿ ನ್ಯಾಯಾಧೀಶರು ರಾವಣನನ್ನು ಸಾಕ್ಷಿಗಾಗಿ ಕರೆಸಿ “‘ಗೀತಾ’ ಮೇಲೆ ಕೈ ಇಟ್ಟು ಪ್ರಮಾಣ ಮಾಡು” ಎಂದರು. “ಅದೊಂದನ್ನು ಬಿಟ್ಟು ಬೇರೆ ಕೇಳಿ; ನಾನು ಈಗಾಗಲೇ ‘ಸೀತಾ’ ಮೇಲೆ ಕೈ ಇಟ್ಟು ಸುಟ್ಟು ಕೊಂಡಿದ್ದೇನಿ.&#...

ಪಶ್ಚಿಮದ ಕದವ ತೆಗೆದು, ಬಚ್ಚಬರಿಯ ಬೆಳಗನೋಡಲೊಲ್ಲದೆ, ಕತ್ತಲೆಯ ಬಾಗಿಲಿಗೆ ಮುಗ್ಗಿ ಕಣ್ಣುಗಾಣದ ಅಂಧಕರಂತೆ, ಜಾರಿ ಜಾರಿ ಎಡವಿಬಿದ್ದು, ಕರ್ಮಕ್ಕೆ ಗಿರಿಯಾಗುವ ಮರ್ತ್ಯದ ಮನುಜರಿರಾ ನೀವು ಕೇಳಿರೋ ಹೇಳಿಹೆನು. ನಮ್ಮ ಶರಣರ ನಡೆ ಎಂತೆಂದರೆ, ಕತ್ತಲೆಯ...

ಯಾವ ಬೋಧೆಯಿಂದಿವನು ಬೋಧಿ ಸತ್ವನಾದಾನು? ಯಾವ ಓದಿನಿಂದಿವನು ವಾದಾತೀತನಾದಾನು? ಯಾವ ಚಿಲುಮೆಯಿಂದ ಇವನ ಕೊರಡು ಚಿಗುರೀತು? ಯಾವ ಒಲುಮೆಯಿಂದ ಇವನಿಗೆ ಬಲ ಬಂದೀತು? ಯಾವ ದಾರಿದೀಪದಿಂದ ಇವನ ಕಗ್ಗಾಡು ಬೆಳಗೀತು? ಯಾವ ಸಾಧನೆಯಿಂದ ಇವನ ಬಾಧಕ ಭಂಗವಾದೀತ...

ಹಿಂದು ಮುಸ್ಲಿಮರ ಜಗಳ ನಿನ್ನೆ ಈವತ್ತಿನದಲ್ಲ, ಘಜ್ನಿ ಮಹಮದ್ ಕಾಲದಿಂದಲೂ ದಾಳಿ ನಡೆದಿದೆ. ವಿಗ್ರಹ ಭಜನೆ, ದೇವಾಲಯಗಳ ನಾಶ, ಅಂದಿನಿಂದ ಇಂದಿನವರೆಗೂ ನಡೆಯುತ್ತಾ ಬಂದಿದ್ದರೂ ಹಿಂದುಗಳು ಶಾಂತಿಮಂತ್ರ ಜಪಿಸುತ್ತಾ ಸೆಕ್ಯುಲರ್ ಪಾಠ ಬೋಧಿಸುತ್ತಾ ಸಹಬ...

ಸಮುದ್ರ ಕಿನಾರೆಯಲ್ಲಿ ಎಲ್ಲಿ ದೊಡ್ಡ ದೊಡ್ಡ ಅಲೆಗಳು ಗೋಧಿಬಣ್ಣದ ಮರಳುಗಳನ್ನು ತಂದುಹಾಕಿವೆಯೋ ಅಲ್ಲಿ ಅದೇ ಬಣ್ಣದ ಏಡಿಗಳು ಯಥೇಷ್ಟ ಓಡಾಡುತ್ತವೆ. ಎಷ್ಟು ಚಿಕ್ಕವಿವೆ ಇವು ಎಂದರೆ ಒಂದು ಅಂಗಿಜೇಬಿನಲ್ಲಿ ಸುಮಾರು ಒಂದು ನೂರನ್ನು ಸುಲಭವಾಗಿ ತುಂಬಬಹ...

ನೋಡಿ ನಾನು ಇದ್ದಲ್ಲೇ ಇರೋವ್ನು ನನಗೆ ಮೂಡಣವೂ ಇಲ್ಲ ಪಶ್ಚಿಮವೂ ಇಲ್ಲ. ಉದಯವೂ ಇಲ್ಲ. ಅಸ್ತವೂ ಇಲ್ಲ. ಕೆಂಪು ಇಲ್ಲ ಕಪ್ಪು ಇಲ್ಲ. ಹಗಲೂ ಇಲ್ಲ, ರಾತ್ರೇನೂ ಇಲ್ಲ. ನನಗಿಲ್ಲ ಇದ್ಯಾವುದರ ಸೋಂಕು ಅದೆಲ್ಲಾ ಅವರವರ ಕಣ್ಣಿನ ಮಂಕು. *****...

ಊರ ಚೇರುಮನ್ನರಿಗೆ ರಾಷ್ಟ್ರಪ್ರಶಸ್ತಿ ಬಂದದ್ದಕ್ಕೆ ಊರಿಗೆ ಊರೇ ರೋಮಾಂಚನಗೊಂಡಿತ್ತು. ತೀರಾ ಸಣ್ಣ ಊರದು. ಭಾರತದ ಭೂಪಟದಲ್ಲಿ ಅದಕ್ಕೊಂದು ಸ್ಥಾನವೇ ಇರಲಿಲ್ಲ. ಸಂತೋಷಪಡಲು ಅದಕ್ಕೊಂದು ಕಾರಣವೂ ಇರಲಿಲ್ಲ. ಈಗ ಅದು ದೊರಕಿತ್ತು. ಚೇರುಮನ್ನರ ಹೆಸರು ...

1...1516171819...53

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...