ಪಶ್ಚಿಮದ ಕದವ ತೆಗೆದು,
ಬಚ್ಚಬರಿಯ ಬೆಳಗನೋಡಲೊಲ್ಲದೆ,
ಕತ್ತಲೆಯ ಬಾಗಿಲಿಗೆ ಮುಗ್ಗಿ
ಕಣ್ಣುಗಾಣದ ಅಂಧಕರಂತೆ,
ಜಾರಿ ಜಾರಿ ಎಡವಿಬಿದ್ದು,
ಕರ್ಮಕ್ಕೆ ಗಿರಿಯಾಗುವ ಮರ್ತ್ಯದ
ಮನುಜರಿರಾ ನೀವು ಕೇಳಿರೋ ಹೇಳಿಹೆನು.
ನಮ್ಮ ಶರಣರ ನಡೆ ಎಂತೆಂದರೆ,
ಕತ್ತಲೆಯ ಬಾಗಿಲಿಗೆ ಗದವನಿಕ್ಕೆ
ಪಶ್ಚಿಮದ ಕದವ ತೆಗೆದು,
ಬಚ್ಚಬರಿಯ ಬೆಳಗಿನೊಳಗೆ ಲೋಲಾಡುವ
ಶರಣರ ಪಾದಕ್ಕೆ ಮತ್ತೊಂದು
ಬಾರಿ ಎರಗಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****