ಮಳೆಯಲ್ಲಿ ಎಲ್ಲಬಾಗಿಲು ಹಾಕಿಕೊಂಡೋ ಚಳಿಯಲ್ಲಿ ಬೆಚ್ಚನೆಯ ಶಾಲು ಹೊದ್ದುಕೊಂಡೋ ಕವನಗಳು ಸುರಿಸುವಂತೆ ಈ ಬೇಸಗೆಯೆ ಬಸಿಲಿನ ಮುಂಜಾವು ಮುಸ್ಸಂಜೆಯಲ್ಲಿಯೂ ನಾನೇ ನೀರೆರದು ಬೆಳೆಸಿದ ಮರಗಳ ಸಾಲಿನಲ್ಲಿ ಕುಳಿತು. ಅದರ ಮೇಲೆ ವರ್ಷ ವರ್ಷಗಳವರಗೆ ಚಿಲಿಪಿಲ...

ದೂರದೂರ ದಿಕ್ದಿಗಂತದಿಂದ ದೂರಕೆ ಹಗಲು ಮುಗಿಲು ಮಿಲನವಾಗಿ ಕುಣಿಯುತಿರುವೆಡೆ ಜಗವೆ ಒಲವ ಕೊಳಲು ಆಗಿ ಗಾನ ಸುರಿವೆಡೆ ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ! ಕಣ್ಣ ಮುಚ್ಚಿ ಹೃದಯ ಮುಚ್ಚಿ ಒಮ್ಮೆ ಅಂದು ಕಾತರಿಸಲು ಮಿಂಚಿನಂತೆ ತೂರಿ ನೀನು ಜೀವ ತೋ...

ಪ್ರಿಯ ಸಖಿ ಅನ್ನವನು ಕೊಡು ಮೊದಲು ಬಟ್ಟೆಯನು ಕೊಂಡು ಉಡಲು ಕಟ್ಟಿಕೊಡು ಮನೆಗಳನು ಬಳಿಕ ನೀನು ಕವಿಯಾಗಿ ಬಾ ನೀತಿವಿದನಾಗಿ ಬಾ ಶಾಸ್ತ್ರಿಯಾಗಿ ಧಾರ್ಮಿಕನಾಗಿ ಮನುಜಕತೆಯನು ಕಲಿಸು ಬಾ ಇವನದನು ಕಲಿಯ ಬಲ್ಲ! ಇದು ಮೊದಲು ಆಮೇಲೆ ಉಳಿದುದೆಲ್ಲ! ಗೋಪಾಲಕ...

“ಮರಗಳೆಲ್ಲಾ ಯಾಕೆ ಅಷ್ಟೊಂದ್ ದೊಡ್ಡಕ್ ಇರ್‍ತಾವೆ?” “ಒಳ್ಳೇವ್ರೆಲ್ಲಾ ಹಾಗೇ ಮರಿ, ಎತ್ತರ ಇರ್‍ತಾರೆ.” “ಒಳ್ಳೇವ್ರಾದ್ರೆ ಯಾಕೆ ಮತ್ತೆ ಮಾತೇ ಆಡೊಲ್ಲ?” “ಮಾತಾಡಿದ್ರೆ ಬಂತೇ ಚಿನ್ನ ನಡತೆಗೆ ತಪ...

ಹಾಸಿಗೆಯೆ ಹರಸಿರುವ ದುಂಡುಮಲ್ಲಿಗೆಯರಳೆ ಆ ತುಂಬು ಹೆರಳ ಹೆಣ್ಣೆಲ್ಲಿ? ಬಿಳಿ ದಿಂಬಿನಂಚಿನಲಿ ಗೆರೆ ಬರೆದ ಕಾಡಿಗೆಯೆ, ಆ ದೀಪದುರಿಯ ಕಣ್ಣೆಲ್ಲಿ? ಅತ್ತ ಮಂಚದ ಕೆಳಗೆ ಬಿದ್ದ ಕಾಲುಂಗುರವೆ, ಆ ನವಿಲನಡೆಯ ಹೆಣ್ಣೆಲ್ಲಿ? ಬೆಳ್ಳಿ ಬಟ್ಟಲಿನೊಳಗೆ ಬಿಟ್ಟ...

ಚಂದ್ರಮುಖಿಯು ನೀನು ಎಂದು ಬೆಡಗುಗಾರ್ತಿ ಚೆಲುವೆಯೆಂದು ಸಂದ ಜೀವದಾತ್ಮ ಗೊಂಬೆಯೆಂದು ಪೇಽಳಿ- ಇಂದು ತರವೆ ಇನಿಯ ಇನಿತು ಕೊರಗಿಸುವುದೊ! ನೀರೆ ನೀನೆ ಶೂರೆ ಎಂದು ಎನ್ನ ಮೋಹ ಕಲಶವೆಂದು ಸಾರೆ ಸರಸಿ ತೀರದಲ್ಲಿ ಚೆನ್ನು ಮುತ್ತು- ಮೀರಿದೊಂದಾನಂದದಿತ್ತ...

ಬಂಡಿಯ ಮೇಗಣ ಹೆಳವನಂತೆ, ಕಂಡಕಂಡ ಕಡೆಗೆ ಹಲುಬಿದರೆ, ನಿಮಗೆ ಬಂದುದೇನಿರೋ? ಈ ಮಹಾಘನವನರಿಯದನ್ನಕ್ಕ. ಹಾಡಿದರಿಲ್ಲ, ಹರಸಿದರಿಲ್ಲ, ಕೇಳಿದರಿಲ್ಲ. ಏನ ಮಾಡಿದರು ವಾಯಕ್ಕೆ ವಾಯವೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ||...

ರಾತ್ರಿ ಬೆಳಕು ಮಳೆ ಬಿಸಿಲು ನೆಳಲು ನಾನೆಂದೂ ಬಿಟ್ಟುಕೊಟ್ಟವಳೇ ಅಲ್ಲ: ಯಾಕೆಂದರೆ ಅದು ನನ್ನ ಬಿಟ್ಟಿಲ್ಲ ತನ್ನ ಋತುಮಾನದಲ್ಲಿ ನನ್ನನ್ನಾಳಕ್ಕಿಳಿಸಿ ಎತ್ತರಕ್ಕೇರಿಸುವ ಪ್ರಕೃತಿಯೇ ನಾನಿರುವಾಗ ಯಾವುದಕ್ಕೂ ಕೊಸರಿಕೊಂಡಿಲ್ಲ ಪಕ್ಷಿಯಾಗಿ ಚಿಲಿಪಿಲಿಗ...

ಮನಸಿನಾಗಿನ ಭಾವಗಳಂತೆ ಮರದ ಮೇಲಿನ ಚಿಗುರೆಲೆಯೆಲ್ಲ ತೂರಿಬಂದ ಗಾಳಿಯಲ್ಲಿ ಕುಣಿಯುತಿತ್ತು-ಬಳುಕಿ ಬಳುಕಿ-ಕುಣಿಯುತಿತ್ತು. ತುಟಿಯ ಮೇಲಿನ ಮುಗುಳಿನ ಹಾಗೆ ಸುತ್ತ ಹಾಸಿದ ಹಸುರಿನ ಮೇಲೆ ಹಾರಿಬಂದ ಚಿಟ್ಟೆ ದಂಡು ಜಿಗಿಯುತಿತ್ತು-ನಲಿದು ನಲಿದು-ಜಿಗಿಯು...

ಪ್ರಿಯ ಸಖಿ, ನಮ್ಮ ಸಮಾಜದಲ್ಲಿದ್ದ ಉನ್ನತ ಮೌಲ್ಯಗಳು ನಿರಂತರವಾಗಿ ಅಧೋಗತಿಗಿಳಿಯುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣವೇನು? ಹುಡುಕಹೊರಟರೆ ಸಾವಿರಾರು ಕಾರಣಗಳು ಸಿಕ್ಕಬಹುದು. ಆದರೆ ಕವಿ ಜಿ. ಎಸ್. ಶಿವರುದ್ರಪ್ಪನವರಿಗೆ ಹೊಳೆದಿರುವ ಒಂದೇ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....