Home / ಲೇಖನ / ಇತರೆ / ಪ್ರೀತಿ ಇಲ್ಲದ ಮೇಲೆ

ಪ್ರೀತಿ ಇಲ್ಲದ ಮೇಲೆ

Hrudayaಪ್ರಿಯ ಸಖಿ,
ನಮ್ಮ ಸಮಾಜದಲ್ಲಿದ್ದ ಉನ್ನತ ಮೌಲ್ಯಗಳು ನಿರಂತರವಾಗಿ ಅಧೋಗತಿಗಿಳಿಯುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣವೇನು? ಹುಡುಕಹೊರಟರೆ ಸಾವಿರಾರು ಕಾರಣಗಳು ಸಿಕ್ಕಬಹುದು. ಆದರೆ ಕವಿ ಜಿ. ಎಸ್. ಶಿವರುದ್ರಪ್ಪನವರಿಗೆ ಹೊಳೆದಿರುವ ಒಂದೇ ಒಂದು ಮುಖ್ಯ ಕಾರಣ ನೋಡು.

ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?

ಕವಿಯ ಭಾವನೆ ಎಷ್ಟೊಂದು ಅರ್ಥಗರ್ಭಿತವಾಗಿದೆಯಲ್ಲವೇ ಸಖಿ? ನಮ್ಮಗಳ ನಡುವೆ ಪ್ರೀತಿ ಇಲ್ಲದಿರುವುದೇ ಈ ಎಲ್ಲ ಅಧೋಗತಿಗೆ ಕಾರಣವಲ್ಲವೇ ಪ್ರೀತಿಯೊಂದಿದ್ದರೆ ಬೇರೆಲ್ಲವನ್ನು ಮಾಫಿ ಮಾಡಬಹುದು ಎಂತಹ ಕಷ್ಟವಿದ್ದರೂ ಹೊಂದಾಣಿಕೆ ಮಾಡಿಕೊಳ್ಳಬಹುದು. ಹೃದಯ ವಿಶಾಲವಾಗುತ್ತಾ ಹೋಗಿ ಎಲ್ಲೆಡೆಯೂ ಪ್ರೀತಿಯನ್ನೇ ತುಂಬಬಹುದು. ಆದರೆ ……… ಅದೇ ಇಲ್ಲದಿದ್ದರೇ? ಮನುಷ್ಯನಾಗಿದ್ದು ಏನು ಪ್ರಯೋಜನ?

ಕವನದ ಕೊನೆಯಲ್ಲಿ ಕವಿ ಅತ್ಯಂತ ಮಾರ್ಮಿಕವಾಗಿ ನಮ್ಮ ಮುಂದೆ ಪ್ರಶ್ನೆಗಳನ್ನಿಡುತ್ತಾರೆ.
ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕೂ,
ಸಿಡಿಗುಂಡುಗಳ ಕದನ ನಿಂತೀತು ಹೇಗೆ ?
ಜಾತಿಮತಭಾಷೆ ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ ?
ಹೌದಲ್ಲವೇ ಸಖಿ? ಪ್ರೀತಿ-ಸ್ನೇಹಗಳಿಲ್ಲದೇ ನಮ್ಮ ಹೃದಯ ಬೆಂಗಾಡಾಗುವುದನ್ನು ತಪ್ಪಿಸುವದು ಹೇಗೆ? ಬರೀ ಸ್ವಾರ್ಥ, ಸಂಕುಚಿತ ಮನೋಭಾವ, ದ್ವೇಷ, ಅಸೂಯೆಗಳನ್ನೇ ತುಂಬಿಕೊಂಡು ಬರಡಾಗುತ್ತಿರುವ ನಮ್ಮೆಲ್ಲರ ಹೃದಯಗಳಲ್ಲೂ ಪ್ರೀತಿಯು ಚಿಗುರೊಡೆಯಬೇಕು. ಮರವಾಗಿ ಬೆಳೆಯಬೇಕು. ದಿಗಂತಕ್ಕೇರಿ ನಿಂತು ವಿಶ್ವವ್ಯಾಪಿಯಾಗಬೇಕು. ಆಗ ನಾವೆಲ್ಲರೂ ನಿಜವಾದ ಅರ್ಧದಲ್ಲಿ ಮಾನವರಾಗುತ್ತೇವೆ. ಇಲ್ಲದಿದ್ದರೆ ಭಾವನೆಗಳಿಲ್ಲದ ಬರಿಯ ಯಂತ್ರ ಮಾನವರಾಗುತ್ತೇವೆ! ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...