ಅಮ್ಮಾ ಅಮ್ಮಾ ಒಂದೇ ಒಂದು
ಉಂಡೆ ಕೊಡ್ತೀಯಾ?
ನೆಂಚ್ಕೊಳ್ಳೋಕೆ ಜೊತೆಗ್ ಒಂದೇ
ಚಕ್ಲಿ ಇಡ್ತೀಯಾ?

ಅಮ್ಮಾ ನಂಗೆ ಹಸಿವೆ ಇಲ್ಲ
ಊಟ ಬೇಡಮ್ಮ
ಅದಕ್ಕೆ ಬದಲು ಎರಡೇ ಎರಡು
ದೋಸೆ ಮಾಡಮ್ಮ.

ಕ್ಲಾಸಿಗೆಲ್ಲ ನಾನೇ ಫಸ್ಟು
ಎಲ್ಲ ಆಟ್ದಲ್ಲಿ!
ಇನ್ನೊಂದ್ ಸ್ವಲ್ಪ ಬೆಣ್ಣೆ ಹಾಕೇ
ದೋಸೆ ಪ್ಲೇಟಲ್ಲಿ!

ತುಂಬ ವೀಕಾಗಿದೀನಂತೆ
ಮೇಡಂ ಹೇಳಿದರು,
ತಿಂಡಿ ಸರಿಯಾಗ್ ತಿನ್ನೋಲ್ವಾಂತ
ಮೆಲ್ಲಗೆ ಕೇಳಿದರು.

ಮೇಡಂ ಮತ್ತೆ ಬಯ್ಯದ ಹಾಗೆ
ತಿಂಡಿ ಮಾಡ್ಕೊಡೆ,
ಇಲ್ಲ ಅಂದ್ರೆ ನಾಳೆ ಸ್ಕೂಲಿಗೆ
ನೀನೇ ಹೋಗ್ಬಿಡೆ!
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)