ಸಿಡಿ, ಟಿಪ್ಪು ಠುಸ್ : ಸೋಭಾಯಾತ್ರೆ ಬುಸ್

ಬೆಳಗಾವಿ ಅದಿವೇಸ್ನ ಮಾಡಿ ಜೊತೆಗೆ ಒಬ್ಪರಿಗೊಬ್ಟರು ಬಡಿದಾಡಿ ತಿಂದು ಕುಡ್ದು ಮಜಾ ಮಾಡಿ ಅಧಿವೇಸ್ನದ ಹಾಲ್ನಾಗೆ ನಿದ್ರೆ ಮಾಡಿ ಲಾಸ್ಟ್‌ಡೇಗೆ ಮುಂಚೇನೇ ೫೦% ಸ್ಯಾಸಕರು ಮರಳಿ ಬೆಂಗಳೂರಿಗೆ ಹೊಳ್ಳಿದ್ರೆ, ಭಾಳೋಟು ಮಂದಿ ಗೋವಾ ಬೀಚ್‌ನಾಗೆ ಪೆನ್ನಿ ಕುಡ್ದು ಬಿದ್ದು ಹೊಳ್ಳಾಡೋಕೆ ಹೊಂಟೋದ್ರಂತೆ! ಅಧಿವೇಸ್ನದಿಂದ ಆದ ಪ್ರಾಫೀಟ್ಟೇನು? ಎಲ್ಲೆ ಪ್ರಾಫಿಟ್ ತೆಗೀರತ್ತ. ಮೂರು ಕೋಟಿಗೂ ದುಪ್ಪಟ್ಟು ಲಾಸು. ದುಡ್ಡು ಯಾದು? ಜನಗುಳ್ದು. ಯಾದೋ ದುಡ್ಡು ಎಲ್ಲಮ್ಮನ ಜಾತ್ರೆ ನಡ್ದೋಯ್ತು ಬಿಡ್ರಿ. ಈ ಮುಂಡೇವು ಕಿತ್ತಾಡೋಕೆ ಬೆಂಗ್ಳೂರು ಸಾಲ್ದು ಅಂತ ಬೆಳಗಾವಿಗೆ ಹೋದ್ವು. ಹುಟ್ಟ ಗುಣ ಚಟ್ಟದ ಮೇಲೇ ಹೋಗೋದು. ಅಲ್ಲೂ ಹಂದಿ ನಾಯಿ ಗೂಳಿ ತರಾ ಗುದ್ದಾಡಿ ಮಂಡನೆಗಳ ಪುಸ್ತಕಾನೆಲ್ಲಾ ಎರಚಾಡಿ ಮಂಗಾಟ ಆಡಿದ್ವು. ಜೊತೆಗೆ ನಕಲಿ ಸಿಡಿಗಳ ಹಾರಾಟ, ಕಾಂಗೈಗಳ ಬಯಲಾಟ ಕೋ.ಜಾ ಸರ್ಕಾರದ ನರಳಾಟ್ದಾಗೆ ಮೂರುದಿನ ಮುಂಡಾಮೋಚಿ ಹೋತು.

ದ್ಯಾವೇಗೋಡ್ರ ಚೇಲಾ ನಾರಾಯಣಗೋಡನೆಂಬೋ ಆಯುಕ್ತ ಕುಯುಕ್ತಿಯಿಂದ ಫಾರೆಸ್ಟ್‌ನ ಹೋಲ್‌ಸೇಲಾಗಿ ಹರಾಜಿಗಿಟ್ಟು ೬೦ ಕೋಟಿ ನುಂಗವನೆ ಅಂತ ಗ್ರೇಹೇರ್ ಪಾಟೀಲ ಬಾಯಿ ಬಡುಕಳತ್ಲು, ನೆಕ್ಸ್ಟ್‌ ಡೇನೇ ಬಂತು ನೋಡಿ ಖರ್ಗೆ ಧರ್ಮಾ ಜೊತೆ ಸಂಗ್ರಾಮಸಿಂಗ್‌ನ ಸಂಗಂ ಪೋಟೋ! ಹಳೆ ಹಿಂದಿ ಪಿಕ್ಚರ್ ಸಂಗಂನಾಗ್ಳ ರಾಜಕಪೂರು ವೈಜಯಂತಿ ರಾಜೇಂದ್ರ ಕುಮಾರ್ ಗ್ಯಾಪ್ನಕ್ಕೆ ಬಂದರು. ಸ್ಯಾಸಕ ಎಂಕ್ಟೇಸನ ಕಲಾಮತ್ತಿಗೆ ಕೆರಳಿ ಭೂತಗಳಂತಾದ ಕಾಂಗೈಗಳು ಕೂಗಾಟಕ್ಕಿಳಿದ್ವು. ಎಂಕ್ಟೇಸು ಬೇಷರತ್ ಸಾರಿ ಕೇಳ್ದ. ಸಿಬಿಐ ತನಿಖೆ ಆಗೋಗ್ಲಿ ಕೊಮಾರಸ್ವಾಮಿ ರಾಜಿನಾಮೆ ಬಿಸಾಕಿ ನಮ್ಮನ್ನ ಯಲಕ್ಷನ್ನಾಗೆ ಫೇಸ್ ಮಾಡ್ಲಿ ಅಂತ ಪೀಸ್ ಕಳ್ಕೊಂಡು ರಚ್ಚೆ ಹಿಡಿದ್ವು. ಕೊನೆಗೆ ಪೆಕರನಂಗೆ ನಕ್ಕ ಎಂಕ್ಟೇಸು ಈ ಪೋಟೋಂವಾ ಯಾವನೋ ನನ್ನ ರೂಮಿನ ಮುಂದಾಗಡೆ ಬಿಸಾಕಿದ್ದ. ಅವ್ನು ಖರ್ಗೆ, ದಬರಿ ಧರ್ಮುಗೆ ಆಗದ ಪಾರ್ಟಿ ಇರ್ಬೋದು. ಹೆಂಗಾರ ಆಗ್ಲಿ ನಿಮಗೆಲ್ಲಾ ತೋರ್ಸಿ ಮಜಾ ತಗೋಣವಾ ಅಂತ ಹಿಡ್ಕಂಬಂದೆ. ಇದರಿಂದ ಯಾರ್ಗಾನ ಅಗ್ದಿ ಫೀಲಾಗಿದ್ರೆ ಐ ಆಲ್ಸೋ ಪೀಲ್ ವೆರಿಬ್ಯಾಡ್ ಅಂದು ಕವಕ ವನೆ ನಕ್ಕುಬಿಟ್ಟ! ನೀವು ಯಾರ ಯಾರ್ದೋ ಸಿಡಿ ತೋರಿಸ್ತಿದ್ರಲ್ಲ ಆದಕ್ಕೆ ನಾನೊಂದು ಟ್ರೈಲರ್ ಬಿಟ್ಟೆ. ಇಂಥದ್ದನ್ನು ಟೆಕ್ನಿಕಲಿ ಕ್ರಿಯೇಟ್ ಮಾಡ್ಬೋದು ಅಂತ ತಿಪ್ಪೆ ಸಾರಿಸಿದ.

ಎಂಕ್ಟೇಸ್ನ ಹಿಕಮತ್ತಿಗೆ ಒಳಗೇ ಖುಸಿಪಟ್ಟ ಕೊಮಾಸಾಮಿ ಅದೇ ಖುಸಿನಾಗೆ ಮರಾಠಿ ಹೈದನ ಮನೆಗೇ ಮಿಡ್ ನೈಟ್ ನುಗ್ಗಿ ನಿದ್ದೆ ಹೊಡ್ದು ಕನ್ನಡಿಗರು ಮರಾಠೇರು ಭಾಯಿ ಭಾಯಿ ಝಲಾಕ್ ಪಾಹಿಜೆ ಝಲಕ್ನ ಸ್ಟಾಪ್ ಮಾಡಿ ಅಂತ ರಿಕ್ವೆಸ್ಟ್ ಮಾಡಿಕೊಂಡ. ಕೊಮಾರ ಆಧಿವೇಸ್ನದಾಗೆ ಕುಂತಿದ್ಕಿಂತ ಅಡಿಗಲ್ಲುಗಳ್ನ ಹಾಕ್ಕು ಅಡ್ಡಾಡಿದ್ದೇ ಹೆಚ್ಚಾಟ್ಟಾಗೋತ್ರಿ. ಬಳ್ಳಾರಿ ರೆಡ್ಡಿ ಸಿಡಿಯ ಬದ್ನಾಮ್‌ನಿಂದ ಬಚಾವಾಗಲು ಬೆಳಗಾವಿಗೆ ಓಡಿ ಬಂದ್ರೆ ನಾರಾಯಣಗೌಡನ ಫಾರೆಸ್ಟ್ ಸಿಡಿ ಪ್ರತ್ಯಕ್ಷವಾಗಬೇಕೆ! ಕೊಮಾರನ ಫೇಸು ಅಗ್ದಿ ಡಾಂಬರ್ ಕಲರ್ರಾ ಗೋತು. ಇನ್ ಬಿಟ್ವೀನ್ ಬಳ್ಳಾರಿ ರೆಡ್ಡಿ ದೊರೆ ಮಗ ನಂಗೆ ಪೋಜ್ ಕೊಡ್ತಾ ಬೆಳಗಾವಿಗೂ ಬಂದಿದ್ದ. ಆವಯ್ಯನ ಬಾಡಿಗೆ ೪೦ ಬಾಡಿಗಾರ್ಡಗಳ ಸರ್ಪಗಾವಲು. ೧೦ ಸ್ಕಾರರ್ಪಿಯೋ ವೆಹಿಕಲ್ಲುಗಳು ಆತನ ಬಾಡಿಸುತ್ತಾ ರೌಂಡ್ ಹೊಡಿಲಿಕತ್ತಿದ್ವು. ಸಪರೇಟ್ ಮನೇನೇ ಬಾಡಿಗೆ ತಕ್ಕಂಡಿದ್ದ. ಆತನ್ನ ನೋಡುತ್ಲು ಕಾಂಗ್ರೆಸ್ನೋರು ತಬ್ಬಾಡಿದರು. ಬಿಜೆಪಿನೋರು ಕೈ ಕುಲುಕ್ತಾ ವಿಲಿವಿಲಿ ಒದ್ದಾಡಿದ, ಜೆಡಿ‌ಎಸ್ ನೋರು ತಮ್ಮ ತುತ್ತು ಕಸಿದ್ಕೊಳ್ಳೋಕೆ ಬಂದ ಪಿಸಾಚಿನ ನೋಡ್ದಂಗೆ ನೋಡ್ಲಿಕತ್ತಿದರು.

ತುತ್ತು ಅಂದ್ರೆ ಅಂತಿಂಥ ತುತ್ತಲ್ಲ ಬಿಡ್ರಿ. ಸ್ಯಾಲಿನಿ ಮೇಡಂ ಎಂಬೋ ಡಿಸಿ ಹಾಕಿಸಿದ ಮಹಾತುತ್ತು. ಫಾರ್ ಎಕ್ಜಾಂಪಲ್ ಬೆಳಿಗ್ಗೆ ಬೆಡ್ ಟೀ ಟೊಮೊಟೋ ಆಮ್ಲೆಟ್, ಇಡ್ಲಿ ಬ್ರೆಡ್ ಬಟರ ಸಂಗಡ ಬಾಳೆ ಹಣ್ಣಿನ ಜೊತೇಲಿ ಧಾರವಾಡ ಪೇಡೆ. ಮಧ್ಯಾಹ್ನ ಪರೋಟ ಕುರ್ಮಾ ಕ್ಯಾಪ್ಸಿಕಂ ಪೇಡೆ. ಮಧ್ಯಾಹ್ನ ಪರೋಟ ಕುರ್ಮಾ ಕ್ಯಾಪ್ಸಿಕಂ ಮಸಾಲ, ಕುಂದಾಕರದಂಟು, ಮುಂಬೈ ಗುಲಾಬ್ ಜಾಮೂನು, ಅನ್ನ ಸಾಂಬಾರ್ ಮೊಸರನ್ನ ಇತ್ಯಾದಿ ಶಾಕಾಹಾರಿಗಳಿಗೆ ಸಮರ್ಪಣೆ. ಕತ್ತಲಾಗು ತ್ಲೂವೆ ಕೋಳಿ ಪಲಾವ್ ಕುರಿ ಮಾಂಸದ ಐಟಮ್ಮು, ಮಡಿಕೆ ಬಿರಿಯಾನಿ. ೫ ಗಂಟೆ ಸಂಜೆಗೆ ಸಾಥ್ ನೀಡಲು ಪನ್ನೀರ್ ಪಕೋಡ ಕಾಂದಾ ಬಜ್ಜಿ ಇದು ಡೈಲಿ ಮೆನು ನಮೂನೆ. ಲಾಸ್ಟ್ ಡೇ ಸಪ್ಪರ್ ಏನು ಗೊತ್ತೇನ್ರಿ?

೮:೩೦ ರಿಂದ ೧೦.೩೦ ರವರೆಗೆ ಸ್ಪೆಷಲ್ ಸೂಪ್. ಪುಲ್ಕಾಕುಲ್ಚಾ, ಮಲಾಮ್ ಮೀಠಿ ಮಾಠರ್. ಪನ್ನೀರ್ ಕ್ಯಾಪ್ಸಿಕಂ ಪ್ಲಸ್ ಜೀರಾ ರೈಸ್, ಸ್ಕಿಮ್ಡ್ ರೈಸ್, ದಾಲ್ ಫ್ರೈಯ್ ಮಾಮೂಲಿ ಸಾಂಬಾರ್, ಪ್ರಾನ್ ಕರಿ, ಚಿಕನ್ ಹರ್ಯಾಲಿ, ಡಾಲರ್ ಜಿಲೇಬಿ, ಮುರಾಯ್ಯೆ ಸ್ಯಾಂಡ್ ವಿಚ್. ಅಧಿವೇಸ್ನ ಮೆಮೋರಿಗಾಗಿ ಇನ್ನೇನೋ ತರಾವರಿ ಕಲರ್ ಬಾಟ್ಲಿಗಳು ಬಂದರೂ ಬಯಲಿಗೆ ಬರದೆ ಹೊಟ್ಟೆ ಸೇರಿದವು. ಸ್ಯಾಲಿನಿ ಮೇಡಂ ಬಡಿಸಿದ ಈ ಭೂರಿ ಭೋಜನ ಉಂಡಿದ್ದೆಷ್ಟೋ ಚೆಲ್ಲಿದೆಷ್ಟೋ. ಕಂಠ ಮಟ್ಟ ಕುಡಿದು ವಾಮಿಟ್ ಮಾಡಿದ್ದೆಷ್ಟೋ. ದಿನದ ಒಂದು ಹೊತ್ತಿನ ಕೂಳಿಗೆ ಬಾಯಿ ಬಾಯಿ ಬಿಡೋ ಜನ ನಮ್ಮ ನಡುವೆನೇ ಅವರೆ. ಹಗಲು ರಾತ್ರಿ ಮೈ ಬಗ್ಗಿಸಿ ದುಡಿದ್ರೂ ಅರೆಹೊಟ್ಟೆ ಉಂಡು ಮಲಗೋ ಲಕ್ಷೋಪಲಕ್ಷ ಸಂಸಾರಗಳಿವೆ. ಮುಖ್ಯಮಂತ್ರಿ ಸ್ಯಾಸಕರು ಅಧಿಕಾರಿಗಳು ಅವರ ಪಟಾಲಮ್ಮುಗಳು ಸಿಕ್ಕಿದ್ದನ್ನ ತಿಂದು ಗೂಳಿ ಹುಚ್ಚು ನಾಯಿಗಳಂಗೆ ಎಗರಾಡಿ ಕನ್ನಡನಾ ಉದ್ಧಾರ ಮಾಡೋಕೆ ಮಾಡಿದ ಸಮಾರಾಧ್ನೇನೇ ದೊಡ್ಡ ಸಾಧನೆ ಆಗೋತು ನೋಡ್ರಿ. ಇತ್ತ ಕಡೆ ಎಂಇ‌ಎಸ್ ಪಾಕ್ಡಾಗಳು, ಮಾಮೆಳಾವ್ ಮಾಡಿದರು. ಮರಾಠ ಡಿಸಿ‌ಎಂ ಪಾಟೀಲ ಬೆಳಗಾವಿನಾಗೆ ನಾವೂ ಅಧಿವೇಸ್ನ ಮಾಡಿ ಇದಕ್ಕಿಂತ ದೊಡ್ಡ ಸಮಾರಾಧ್ನೆ ಇಟ್ಕಂತೀವಿ ಅಂತ ಬೊಗಳಿದ. ಅದಕ್ಕೆ ವಾಟಾಳು, ನೀನೇನು ಬಡಾ ಘೋಷ್, ಪಿಗ್ಸ್ ಐಟಂ ಇಟ್ಕಂತಿಯೇನಲೆ ಪಾಟೀಲ? ಬೆಳಗಾವಿ ನಿಮ್ಮಪ್ಪಂದೇನ್ಲಾ ಹೇವಾನ್? ಹೆಚ್ಚಿಗೆ ಮಾತಾಡಿದ್ರೆ ನಿನ್ನ ಮಹಾರಾಷ್ಟ್ರಕ್ಕೆ  ನನ್ನ ಕನ್ನಡಕ ತೊಡಿಸಿ ಟೋಪಿ ಇಕ್ಕಿ ಬಿಡ್ತೀನಿ ಹುಷಾರ್ ಅಂತ ಕೂಗಿದ್ದು ನಿಜವಂತಲ್ರಿ. ಬೆಳಗಾವಿನಾಗೆ ಸಿಕ್ಕ ಭರ್ಜರಿ ಬೇಟೆ ಮೇದ ಕೊಮಾರ, ಪ್ರತಿವಸ ಬರ್ತೀವಿ ಮ್ಯಾಡಂ ಅಂತ ಸ್ಯಾಲಿನಿಗೆ ಸೆಲ್ಯೂಟ್ ಹೊಡ್ದು, ಕಾಂಗ್ರೆಸ್ ಕೋರೆಯ ಹ್ಯಾಂಡ್ಲ್ ಹೊಡೆದ ಕಂಡು ಖರ್ಗೆ ದಬರಿ ಧರ್ಮು ದಿಗಿಲು ಬಿದ್ದು ಹೋದ್ರಂತ್ರಿ. ನಮ್ಮವನಾಗಿ ಕೋರೆ ನಮ್ಮ ಬುಡಕ್ಕೆ ನೀರು ತಂದ್ನೆ. ಇನ್ನ ಜನ್ಮ ಇರಗಂಟ ಕೋರೆ ಮಂತ್ರಿ ಮಾಡಬ್ಯಾಡಿ ಅಂತ ಸೋನಿಯಾಗೆ ಖರ್ಗೆ ಧರ್ಮು ಫ್ಯಾಕ್ಸ್ ಕಳಿಸ್ವಾರಂತೆ. ಸುದ್ದಿಗೇನನ್ರಿ ಮಸ್ತೇ ಐತೆ. ೧೫೦ ಕೋಟಿ ಸಿ‌ಎಂ ನುಂಗಿದ್ರೆ ಶ್ರೀಮತಿ ಸಿ‌ಎಂ. ಸಿ‌ಎಂ ಬ್ರದರ್ಸ್, ಅತ್ತಿಗೆಮ್ಮ ಭವಾನಿ ಕವಿತಾ ಎಲ್ಲಾ ಕಾಂಪಿಟೇಷನ್ನಿಗೆ ಬಿದ್ದೋರಂಗೆ ಬೇನಾಮಿಂಮಾಗಿ ಆಸ್ತಿ ಮಾಡ್ಕೋಂತಾ ಅವರೆ. ಇದನ್ನು ಕಂಡು ಅಬ್ಬೆ ಪಾರಿಗಳಂತಾದ ಯಡೂರಿ ಅಂಡ್ ಗ್ಯಾಂಗ್ ತಾವೂ ಕೈಲಾದೋಟು ಗುಳುಂ ಮಾಡ್ಲಿಕತ್ತಾರೆ. ಬೆಂದ ಮನೆಯಾಗೆ ಇರಿದದ್ದೇ ಲಾಭ. ಶಂಕ್ರ ಮೂತ್ರಿನ ಟಿಪ್ಪು ಕೈಯಿಂದ ಪಾರು ಮಾಡಿ ನೆಮ್ಮದಿಯಾಗಿ ಕೊಮಾರಸ್ವಾಮಿ ಸಿರಿವಂತ ಆಗೋದೆಂಗೆ ಅಂತ ‘ಸಿರಿವಂತ’ ಸಿಲಿಮಾ ನೋಡ್ತಿರೋವಾಗ್ಲರ ಸಿಟಿ ರವಿ ಅಂಬೋದೋ ತಲೆಕೆಟ್ಟೋನು ದತ್ತ ಪೀಠದಾಗೆ ಮಾಲೆ ಹಾಕ್ಕಂತೀವಿ. ಯಾವನು ಅದೇನ್ ಕಿತ್ಕೋತಾನೋ ಸೋಭಾಯಾತ್ರೆ ಮಾಡೇ ಮಾಡ್ತೀವಿ ಅಂತ ಅಸುಭದ ಮಾತುಗುಳ್ನ ಆಡ್ತಾ ಅವ್ನೆ. ಒನ್ಸ್ ಎಗೇನ್ ಯಾತ್ರೆಗೀತ್ರೆ ಶುರುಮಾಡಂಗಿಲ್ಲ. ೧೯೭೫ ರ ರೂಲ್ಸೇ ಫಾಲೋ ಮಾಡ್ರಿ. ಇಲ್ಲದಿದ್ದರೆ ದೋಸ್ತಿ ಖತಂ ಅಂತ ಹಳೆರಾಗ ಹಾಡ್ಯಾನೆ ಗೋಡ. ಸಮನ್ವಯ ಸಮಿತಿ ನಾಗೆ ಕೋ-ಜಾ ಸರ್ಕಾರ ಮಿತಿ ಮೀರಿ ಚರ್ಚೆ ಮಾಡಿದರೂ ನಿರ್ಧಾರಕ್ಕೆ ಬಲಿಕ್ಕೆ ಆಗಿಲ್ಲ. ಮೆತ್ತನೆ ಕಳ್ಳ ಪ್ರಕಾಸು ಬಿಜೆಪಿ ಓರ ಕೈಗೆ ಸಿಗದಂಗೆ ಮಾಯವಾಗಿ ಬಿಟ್ಟವ್ನೆ! ಕೋರ್ಟು ಸೋಭಾ ಮಾಡಬ್ಯಾಡಿ ಅಂತೆಲ್ಲಿ ಹೇಳೈತೆ? ಸಿಟಿರವಿ ಕೊಚ್ಚನ್ ಮಾಡ್ತಾ ಬಿಜೆಪಿ ಲೀಡಸ್‍ಗೆ ಕೇರೆ ಮಾಡ್ಡಂಗೆ ಸೋಭಾ ಯಾತ್ರೆ ಸತ್ತರೂ ಮಾಡ್ದೆ ಬಿಡಲ್ಲ ಅಂತ ಅರಚಾಡ್ತಾ ದತ್ತಮಾಲೆ ಹಾಕ್ಕಂಡು ವಿಧಾನಸೌಧ ದಾಗೂ ಅಲೆದಾಡ್ಲಿ ಕತ್ತಾನೆ. ಮಂಗಳೂರ್ನಾಗೆ ಕೋಮು ಕದನ ಬೇರೆ ಶುರುವಾಗೇತೆ. ಗುಡಿಯಾಗೆ ಹೋಮ ಹವನ ಮಾಡ್ಕಳಿ. ಆದರೆ ಗುಡ್ಡ ಹತ್ತಿ ಗುದ್ದಾಡಿದ್ರೆ ನಾನ್ ಒಪ್ಪಂಗಿಲ್ಲ ಅಂಬೋ ಗೋಡ್ರ ಮಾತೇ ಯಾಗೂ ಒಪ್ಪಿಗೆ ಆಗವಲ್ದು. ಬಿಜೆಪಿಯ ಡಿವಿ‌ಎಸ್ ಗೋಡ ಈ ಮಾತ್ನ ಕೂಮಾಸಾಮಿ ಹೇಳ್ಳಿ ಅಂತ ಪಟ್ಟು ಹಿಡಿದವ್ನೆ. ಮತ್ತೊಂದು ಸಮಸ್ಯೆ ತಮ್ಮ ಗಮನ ತೆಲಿಮ್ಯಾಗೆ ಬೆಳಗಾವಿ ಪಟಗಾದಂಗೆ ಏರಿದ್ದು ಕಂಡ ಗೋಡ್ರು ಗಮನ ಸರ್ಕಾರ ಉಳಿಸೋಕೆ ಯಾವ ಹಿಮ್ಮತ್ತು ಹಿಕಮತ್ತು ತೋತಾರೋ ದತ್ತನೇ ಬಲ್ಲ. ಅಂದ್ರೆ ಗೋಡ್ರ ದತ್ತು ಪುತ್ರ ಅಲ್ರಿ. ಗಾಡ್ ದತ್ತಾತ್ರೇಯ…. ಸೋ ವೇಟ್ ಅಂಡ್ ಸಿ.
*****
( ದಿ. ೧೯-೧೦-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊತ್ತಲ್ಲದ ಹೊತ್ತಲ್ಲಿ
Next post ಸಬ್ ವೇ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…