ಯಾರದು ಢಣ್ ಢಣ್
ಯಾರದು ಭಂ ಭಂ
ಓಹೋ ದಾಸಯ್ಯ

ತಲೆಗೆ ಮುಂಡಾಸು
ಅದಕೊಂದು ಚೂವಿ
ಬಗಲಲಿ ತೂಗುವ
ಜೋಳಿಗೆ ಬಾವಿ

ಶುಭವಾಗತೈತೆ
ಶುಭವಾಗತೈತೆ
ನಾಯಿಯ ಹಿಡಕೊಳ್ಳಿ
ಗದ್ದಲ ಮಾಡತೆ

ಮನೆಯಜಮಾನ್ರಿಗೆ
ಶುಭವಾಗತೈತೆ
ಮನೆಯಜಮಾನ್ತಿಗು
ಶುಭವಾಗತೈತೆ

ಮನೆಹೈಕಳಿಗೆ
ಶುಭವಾಗತೈತೆ
ಹಟ್ಟಿ ಆಕಳಿಗೂ
ಶುಭವಾಗತೈತೆ

ನಂಟರು ಇಷ್ಟರು
ಶುಭವಾಗತೈತೆ
ಹೊಲಮನೆ ನೆಲಮನೆ
ಶುಭವಾಗತೈತೆ

ಜೋಳಿಗೆಯೊಳಕ್ಕೆ
ಅಕ್ಕಿ ಒಂದು ಕುಡುತೆ
ಪುಡಿಗಾಸಿದ್ದರೆ
ಇರಲಿ ಅದೂ ಜೊತೆ
ಶುಭವಾಗತೈತೆ

ಢಣ್ ಢಣ್ ಢಣ್ ಢಣ್
ಭಂ ಭಂ ಭಂ ಭಂ

ನಾಯಿಯ ಹಿಡಕೊಳ್ಳಿ
ಕಚ್ಚಿ ಬಿಡತೆ!
*****