ನಿನ್ನ ಕೊರಗಲಿ ನೀನು ಹಾಡಿದಾ ಹಾಡುಗಳು ನನ್ನ ಹೃದಯದೊಳಿಂದು ಕ್ರಾಂತಿಯನು ಹೊತ್ತಿಸಿವೆ. ಕ್ರಾಂತಿರಸಋಷಿ ಶೆಲ್ಲಿ!  ಆದರ್ಶವೊಂದೊಲಿದು ಜಗದ ರೂಢಿಯನೆತ್ತಿ ಬದಿಗೆಸೆದು ಮುನ್ನಡೆದೆ. ಅದಕಾಗಿ ಜಗ ನಿನ್ನ ದೂರಿ ದೂರಿಟ್ಟಾಯ್ತು- ಬಗೆಬಗೆಯ ಚಿಂತೆಗಳ, ನ...

ಪ್ರಿಯ ಸಖಿ, ಇದು ಕಂಪ್ಯೂಟರ್ ಯುಗ. ಬಟನ್ ಒತ್ತಿದರೆ ಸಾಕು ಬೇಕೆಂದ ಮಾಹಿತಿ ನಿಮಿಷಾರ್ಧದಲ್ಲಿ ಕಣ್ಮುಂದೆ ಬರುತ್ತದೆ. ಇದು ಮಾಹಿತಿಯ ವಿಷಯಕ್ಕಾಯ್ತು. ಆದರೆ, ವ್ಯಕ್ತಿಯೊಬ್ಬನ ಭಾವನೆಗಳನ್ನು ಹೀಗೆ ಇಷ್ಟೇ ಸಲೀಸಾಗಿ ಅರ್ಧೈಸಲಾದೀತೇ? ವ್ಯಕ್ತಿಯ ಭಾವ...

ಭಾಳ ಒಳ್ಳೇವ್ರ್‍ ನಮ್ ಮಿಸ್ಸು ಏನ್ ಹೇಳಿದ್ರೂ ಎಸ್ಸೆಸ್ಸು, ನಗ್ತಾ ನಗ್ತಾ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು. ಜಾಣಮರಿ ಅಂತಾರೆ ಚಾಕ್ಲೇಟಿದ್ರೆ ಕೊಡ್ತಾರೆ, ಬೆನ್ನು ತಟ್ಟಿ ಕೆನ್ನೆ ಸವರಿ ಬೆಣ್ಣೆ ಕಂದ ಅಂತಾರೆ! ಆಟಕ್ ಬಾ ಅಂತಾರೆ ಆಟದ್ ಸಾಮಾನ...

ಹಾಗೇ ನೋಡ್ತಾ ನೋಡ್ತಾ ಹೋದ್ರೆ ನನ್ ಲಚ್ಮೀನೆ ಒಳ್ಳ್ಯೋಳು | ಘಟ್ಟ್ಯಾಗೇನೊ ಮಾತಾಡ್ತಾಳೆ ಆದ್ರೂನೂವೆ ಒಳ್ಳ್ಯೋಳು || ಅವ್ಳೂ ಬಂದು ಸಿದ್ದೇ ಎಡ್ವಿ ಹದ್ನಾರ್ ವರ್ಷ ಹಾರ್ಹೋಯ್ತು | ಸೇತ್ವೇ ಕೆಳ್ಗೆ ಕಲ್ಮಣ್ ಮುಚ್ಚಿ ಹೊನ್ನೀರ್ ಕಾಲ್ವೆ ತುಂಬ್ಹೋಯ್ತ...

ಮಾಮರದ ಕೊನರೆಲೆ ಅಂಚಿನಲಿ ಮಿನುಗುವ ಸಿಹಿಮಾವು ಒಂದು ನೋಡಿ, ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು- ಬೀಳಿಸಲೆ ಬೇಕು ಎಂದು! ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು ಯೋಚಿಸಿದೆ ತಲೆಯನೆತ್ತಿ; ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು ಮೀರಿ ನೋಡಿ...

ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ, ಸಂದೇಹದಲ್ಲಿ ಮುಳುಗಿ ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೋ, ಹೇಳಿಹೆನು. ಕಾಣಬಾರದ ಘನವ ಹೇಳಬಾರದಾರಿಗೆಯು. ಹೇಳುವುದಕ್ಕೆ ನುಡಿ ಇಲ್ಲ. ನೋಡುವುದುದಕ್ಕೆ ರೂಪಿನ ತೆರಹಿಲ್ಲ. ಇಂತಾ ನಿರೂಪದ ಮಹಾ ಘನದ...

ಈ ಗಾಳಿ ಮಳೆ ನೆಳಲು ಬೆಳಕು ಚಂದ್ರ ಚಕೋರ ನೀನಿಲ್ಲದ ವೇಳೆ ಇವೆಲ್ಲಾ ಉಲ್ಟಾಪಲ್ಟಿಯಾಗಿಯೇ ಕಾಣುತ್ತಿವೆ ದಿನದ ವರ್ತಮಾನಗಳು ಕಳೆದು ಭೂತಿಸುತ್ತಿವೆ ಚಿಗುರು ಹೂವು ಕಾಯಾಗಿ ಹಣ್ಣಾಗಿ ಉದುರುತ್ತಿವೆ. ಚಂದ್ರ ಚಕ್ಕೋರಿಯರು ನನ್ನ ಮುಂದೆ ಚಕ್ಕಂದಿಸುವಾಗ ...

ನಾಲ್ಕು ವರ್ಷದ ಕಾಲ, ನಕ್ಕು ನಲಿದಾಡಿದೆವು ಕೂಡಿ ಕಲಿತೆವು, ಒಡನೆ ಕುಣಿದಾಡುತ ಕಂಡ ಕನಸುಗಳೇನು! ಆಡಿದಾಟಗಳೇನು! ಕೊನೆಯುಂಟೆ, ಮೊದಲುಂಟೆ, ಕನಸೆ ಜೀವ! ಉಗಿಯ ನಿಲ್ದಾಣದಲಿ ನೂರಾರು ಎಡೆಯಿಂದ ಜನರ ಜಂಗುಳಿ ನೆರೆದು ಚಣಗಳೆರಡು ಉರುಳೆ ಹಾದಿಯ ಹಿಡಿದು...

ಪ್ರಿಯ ಸಖಿ, ಬಹಳಷ್ಟು ಸಂದರ್ಭಗಳಲ್ಲಿ ಧರ್ಮ-ಶಾಸ್ತ್ರಕ್ಕೆ ಎದುರಾಗಿ ಮೌಲ್ಯ, ಮಾನವೀಯತೆಯ ನಂಬುಗೆಗಳು ಬಂದಾಗ ಯಾವದು ಸರಿ ? ಯಾವುದು ತಪ್ಪು ಎಂದು ಗೊಂದಲಕ್ಕೊಳಗಾಗುತ್ತೇವೆ. ಇಂತಹ ಸಂದರ್ಭದಲ್ಲೇ ಕವಿ ಕುವೆಂಪು ಅವರ ‘ಯಾವ ಕಾಲದ ಶಾಸ್ತ್ರವೇನು ಹೇಳ...

“ಶಿವನಿಗ್ಯಾಕೆ ಮೂರ್‍ ಕಣ್ಣು?” “ಅವನು ದೇವ್ರಲ್ವ?” “ಲಕ್ಷ್ಮೀಗ್ಯಾಕೆ ಅಷ್ಟೊಂದು ಕಯ್?” “ಅವಳೂ ದೇವ್ರಲ್ವ?” “ಬ್ರಹ್ಮಂಗ್ ನಾಕ್‌ತಲೆ ಯಾಕಮ್ಮ?” “ವಿಷ್ಣೂ ಮಗನಲ್ವ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....