“ಶಿವನಿಗ್ಯಾಕೆ ಮೂರ್‍ ಕಣ್ಣು?”
“ಅವನು ದೇವ್ರಲ್ವ?”
“ಲಕ್ಷ್ಮೀಗ್ಯಾಕೆ ಅಷ್ಟೊಂದು ಕಯ್?”
“ಅವಳೂ ದೇವ್ರಲ್ವ?”

“ಬ್ರಹ್ಮಂಗ್ ನಾಕ್‌ತಲೆ ಯಾಕಮ್ಮ?”
“ವಿಷ್ಣೂ ಮಗನಲ್ವ?”
“ಹಾವು ವಿಷ್ಣೂನ್ ಕಚ್ಚೊಲ್ವ?” “ಛೀ
ಹೋಗೋ ಬಿಡುವಿಲ್ಲ”

“ಹೋಗೇ ಅಮ್ಮ ಸುಮ್ನೆ ಬಯ್ತಿ
ಉತ್ತರ ಹೇಳಲ್ಲ
ಕಲಿತ್ಕೊ ಕಲಿತ್ಕೊ ಅಂತೀ-ಕಲಿಯೋಕ್
ಮಾತ್ರ ಬಿಡೋಲ್ಲ!

ಅಪ್ಪನ್ಹಂಗೇ ಶಿವಗೂ ಹೆಂಡ್ತಿ
ಇದಾಳೆ ಅಲ್ವಾಮ್ಮ?
ನನ್ಹಂಗಿರೋ ಇಬ್ಬರು ಮಕ್ಳೂ
ಇಲ್ವಾ, ಹೇಳಮ್ಮ?

ಹೆಂಡತಿ ಮಕ್ಕಳು ದೇವರಿಗೂನೂ
ಇರಬೋದೇನಮ್ಮ?
ನಮ್ತರಾನೇ ಇದ್ರೆ ಅವ್ರು
ದೇವರು ಹೆಂಗಮ್ಮ?”
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)