ಮೂರೊಂದ್ಲೇ ಮೂರು
ಮೇಲೇಳು ಗಂಟೆ ಆರು

ಮೂರೆರಡ್ಲೇ ಆರು
ಜಳಕದ ಮನೆಗೆ ಹಾರು

ಮೂರ್ ಮೂರ್ಲೆ ಒಂಭತ್ತು
ತಿಂಡಿ ತಿನ್ನಲಿಕ್ಕೆ ಹತ್ತು

ಮೂರ್ ನಾಕ್ಲೆ ಹನ್ನೆರಡು
ಹಟವನು ಬಿಟ್ಟುಬಿಡು

ಮೂರೈದ್ಲೆ ಹದಿನೈದು
ರೆಡಿಮಾಡುವರು ಬೈದು

ಮೂರಾರ್ಲೆ ಹದಿನೆಂಟು
ಪುಸ್ತಕ ಚೀಲದ ಗಂಟು

ಮೂರೇಳ್ಲೆ ಇಪ್ಪತ್ತೊಂದು
ನಿನ್ನ ತುಂಟಾಟೆಲ್ಲ ಬಂದು

ಮೂರೆಂಟ್ಲೆ ಇಪ್ಪತ್ನಾಲಕು
ಹೇಳಿದ್ದನ್ನು ಕಲಿಬೇಕು

ಮೂರೊಂಭತ್ಲೆ ಇಪ್ಪತ್ತೇಳು
ಶಾಲೆ ಮುಗಿತು ಮೇಲೇಳು

ಮೂರು ಹತ್ಲೆ ಮೂವತ್ತು
ಮನೆ ಕಡೆ ಓಟವ ಕಿತ್ತು.
*****