Henrik Johan Ibsenನ “The Ghosts” ಸಾಂಪ್ರದಾಯಿಕ ಸಾಮಾಜಕ್ಕೊಂದು ಪಾಠ

Henrik Johan Ibsenನ “The Ghosts” ಸಾಂಪ್ರದಾಯಿಕ ಸಾಮಾಜಕ್ಕೊಂದು ಪಾಠ

Henrik Johan Ibsenನ ಸಮಕಾಲೀನರ ಪ್ರಕಾರ “The Ghosts” [ದಿ ಘೋಸ್ಟ] ಇಬಸೆನ್‌ನ ಗಮನಾರ್ಹ ಕೃತಿ. ಯಾಕೆಂದರೆ ೧೯ನೇ ಶತಮಾನದ ಸಾಂಪ್ರದಾಯಿಕ, ಸಮಾಜ ಒಪ್ಪದಿರುವ, ತಿರಸ್ಕರಿಸುವ ಗುಹ್ಯರೋಗವೊಂದರ ಸುತ್ತಹಣೆದ ನಾಟಕವನ್ನು ಬರೆದು ಧೈರ್ಯವಾಗಿ ಕಟ್ಟುನಿಟ್ಟಾದ ಅಲಿಖಿತ ನಿಯಮವನ್ನು ಸಾರ್ವಜನಿಕವಾಗಿ ಮೀರಿದ ಕೀರ್ತಿಯೂ ಇತನಿಗೆ ಸಲ್ಲುತ್ತದೆ. ೧೯ನೇ ಶತಮಾನದ ಸಂಪ್ರದಾಯಸ್ಥ ಪ್ಯೂರಿಟಾನಿಕ್ ವಿಮರ್ಶಕರು ಗುಪ್ತರೋಗದ ಬಗ್ಗೆ ಬರೆದ ಈ ನಾಟಕವನ್ನು ಉರಿಗಣ್ಣನಿಂದ ನೋಡಿದರು. ಆದರೆ ೨೦ನೇ ಶತಮಾನದಲ್ಲಿ ತೆರೆದ ಮನಸ್ಸಿನ ವಿಶ್ಲೇಷಣೆಯಿಂದ ಈ ವೈರುಧ್ಯಗಳ ಮಂಜು ಕರಗಿ ನಾಟಕ ಅಪೂರ್‍ವ ಯಶಸ್ಸುಗಳಿಸಿತು. “ದಿ ಘೋಸ್ಟ್” ನಾಟಕ ತೋರಿಕೆ ಮತ್ತು ನೈಜತೆ, ಪುರಿಟಾನಿಕ್ ನೈತಿಕ ಸಿದ್ಧಾಂತಗಳು ಮತ್ತು ಮುಕ್ತ ವೈಚಾರಿಕತೆ, ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಗಳು ಹೀಗೆ ಹಲವು ಸಂಗತಿಗಳಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಉದ್ಭವಿಸುತ್ತದೆ. ಹಾಗೆ ನಾಟಕ ಪ್ರಸ್ತುತ ಪಡಿಸಿದ ರೀತಿ ಕೂಡ ಅನುಪಮ. ನಿಗೂಢತೆಯನ್ನು ಕಾಯ್ದುಕೊಳ್ಳುತ್ತಲೇ ನಾಟಕ ಕುತೂಹಲವನ್ನು ಮೂಡಿಸುವ ರೀತಿ.

ನಾಟಕದ ಕೇಂದ್ರ ಪಾತ್ರ Mrs. Alving, ಆಕೆ Captain Alving ನ ಪತ್ನಿ, ವಿಧವೆ. Oswald Alving ನ ತಾಯಿ. ಚಿಕ್ಕ ಪ್ರಾಯದಲ್ಲಿಯೇ ಹಿರಿಯರ ಮಾತಿಗೆ ಬೆಲೆಗೊಟ್ಟು ತನ್ನ ಆಕಾಂಕ್ಷೆಗಳಿಗೆ ತಿಲಾಂಜಲಿಯಿಟ್ಟು ಹಡೆದವರ ಮಾತಿನಂತೆ ಮನೆತನದ ಗೌರವಕ್ಕಾಗಿ ತನಗಿಂತ ಪ್ರಾಯದಲ್ಲಿ ಅತಿಹಿರಿಯನಾದ ಆದರೆ ಶ್ರೀಮಂತನಾದ ಕ್ಯಾಪ್ಟನ್ ಆಲ್ವೀಂಗ್‌ನ ವಿವಾಹವಾಗಿ ಬಂದ ಆಕೆ ಪುರಿಟಾನಿಕ್ ತತ್ವದರ್ಶನದಿಂದ ಪ್ರಭಾವಿತಳಾದವಳು. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಪ್ಯೂರಿಟಾನಿಕ್ ತತ್ವ ಸಿಧ್ಧಾಂತಗಳ ಒಪ್ಪಿಕೊಂಡ ಕುಟುಂಬದಲ್ಲಿ ಬೆಳೆದು ಬಂದ ಕಾರಣ ಆಕೆ ತನ್ನ ಆಶೋತ್ತರಗಳಿಗೆ ವಿರುಧ್ಧವಾಗಿ ಕುಟುಂಬದ ಹಿತಾಸಕ್ತಿಗಾಗಿ ಆಲ್ವೀನ್‌ನನ್ನು ವಿವಾಹವಾಗುತ್ತಾಳೆ. ಆದರೆ ಆತನ ಅನೈತಿಕ ಚಟುವಟಿಕೆಗಳ ಅರಿವಾಗುತ್ತಲೇ ಆಘಾತಗೊಳ್ಳುತ್ತಾಳೆ. ಆತ ತನ್ನ ಆಚಾರ ತಪ್ಪಿದ ಬದುಕಿನ ಫಲ ನಿಯತ್ತಿಲ್ಲದ ದೈಹಿಕ ವ್ಯಸನಗಳಿಂದ ಗುಹ್ಯರೋಗಕ್ಕೆ ಒಳಗಾಗುತ್ತಾನೆ. ಹಾಗಾಗಿ Mrs. Alving , ತನ್ನ ಗೆಳೆಯ Paster Manders ನಲ್ಲಿಗೆ ಸಲಹೆ ಸಮಾಲೋಚನೆಗೆ ಬರುತ್ತಾಳೆ. ಆತನ ಉಪದೇಶ ಹಾಗೂ ಮನವೊಲಿಕೆಯಿಂದ ಮರಳಿ ಗಂಡನ ಬಳಿಗೆ ಬಂದ ಆಕೆ ಕುಟುಂಬಕ್ಕಾಗಿ ತನ್ನೊಳಗಿನ ಎಲ್ಲ ಆಕಾಂಕ್ಷೆಗಳ, ಯೌವನದ ಸ್ರ್ತೀ ಸಹಜ ಬಯಕೆ ಭಾವನೆಗಳ ಬದಿಗೊತ್ತಿ ಕೌಟಂಬಿಕ ಜವಾಬ್ದಾರಿಯನ್ನು ನಿಭಾಯಿಸುವತ್ತ ಆಸಕ್ತಳಾಗುತ್ತಾಳೆ. ಈಬಸನ್ ಆಕೆಯ ಪಾತ್ರವನ್ನು ಎಷ್ಟು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರುವನೆಂದರೆ ಆಕೆಯೊಬ್ಬ ಆದರ್ಶತೆಯ ಪ್ರತಿಬಿಂಬದಂತೆ.. Captain Alving ನ ಎಸ್ಟೇಟಿನ ಸಂಪೂರ್‍ಣ ಅಧಿಕಾರವನ್ನು ತನ್ನ ವಶಪಡಿಸಿಕೊಂಡು ಅದರ ಅಭಿವೃದ್ಧಿಗೆ ತಾನೇ ಸ್ವತಃ ಶ್ರಮಿಸುತ್ತಾಳೆ. ಗಂಡನ ಅಸಹ್ಯವಾದ ಚಟಗಳು ಆಕೆಗೆ ಸದಾ ಕಾಡುವ ದುಃಸ್ವಪ್ನವಾಗುತ್ತವೆ. ಒಂದು ವರ್ಷದೊಳಗೆ ಗಂಡನಿಂದ ದೂರವಾಗಿ ಬದುಕುವ ಆಕೆ ಹುಟ್ಟಿದ ಮಗನ ಸಲುವಾಗಿ ಆತನ ಬದುಕು ನಡತೆಗಳ ಮೇಲೆ ತಂದೆಯ ನೆರಳು ಬೀಳಬಾರದೆಂಬ ಉದ್ದೇಶದಿಂದ ಆತನನ್ನು ಮನೆಯಿಂದ ಹೊರಗಿಟ್ಟು ಬೆಳೆಸುತ್ತಾಳೆ. ಹೀಗಾಗಿ Oswald Alving ತಾಯಿಯ ವಾತ್ಸಲ್ಯದಿಂದ ವಂಚಿತನಾಗುತ್ತಾನೆ. ಆಕೆಯೂ ಕೂಡ ತಾಯ್ತನದ ಖುಷಿಯನ್ನು ಆನಂದವನ್ನೂ ತ್ಯಾಗಮಾಡುತ್ತಾಳೆ. ಆಕೆಯ ತಾಳ್ಮೆ, ಸಹನೆ, ಅಪೂರ್ವ. Captain Alving ನ ಮರಣದ ನಂತರ ಪತಿಯ ಹೆಸರಿನಲ್ಲಿ ಅನಾಥಾಲಯವೊಂದನ್ನು ಪ್ರಾರಂಭಿಸುತ್ತಾಳೆ.

ಇದು ನೈಜತೆಗಿಂತ ತೋರಿಕೆಯ ಜಗತ್ತು. ಇಂದಿನ ಸಮಾಜಕ್ಕೂ ಸಂವಾದಿ. ಕಾದಂಬರಿಯ ಇನ್ನೊಂದು ಮುಖ್ಯ ಸಂಗತಿ ವಂಶಾವಾಹಿನಿಯಿಂದ ಬಂದ ದುರ್‍ಗುಣವೊಂದು ಹೊಂಚುಹಾಕುವ ಪರಿ. ಆದರೆ ಸಾಂಪ್ರದಾಯಿಕ ಆದರ್ಶವಾದವೇ ಮುಂದೆ ಆಕೆಯ ಎಲ್ಲ ಆಶಾಗೋಪುರ ನುಚ್ಚುನೂರಾಗಲು ಕಾರಣವಾಗುತ್ತದೆ. ಆಕೆಯ ಒಳತೋಟಿಯಲ್ಲಿ ಸದಾ ಕಾಡುವ ಆ ಚಿಂತೆ ಹೆದರಿಕೆ, ಭಯ, ದೈನ್ಯತೆ ಹೊಂಚುಹಾಕುತ್ತಲೇ ಇರುವ ಭೂತದಂತೆ. ಇನ್ನಿಲ್ಲದ ನೋವಿಗೆ ಕಾರಣವಾಗುತ್ತದೆ.

ತಾಯಿಯ ಸತ್ಸಂಗದಿಂದ ದೂರವಿರಿಸಿದ್ದೇ ಕಾರಣವೋ ಎಂಬಂತೆ Oswald Alving ತಂದೆಯ ಎಲ್ಲ ಗುಣಗಳ ಪ್ರತಿರೂಪವಾಗಿ ಬಿಡುವುದು. ಅದರಿಂದ ದೂರವಿರಿಸಲು ನಡೆಸಿದ ಎಲ್ಲ ಮುಂಜಾಗ್ರತೆಗಳು ನೀರಮೇಲಿನ ಹೋಮದಂತೆ ನಿಷ್ಫಲವಾಗುವುದು. ನಾಟಕದ ಮುಖ್ಯ ವಿಪರ್ಯಾಸವೆಂದರೆ ತನ್ನ ತಂದೆಯ ಕೆಲಸದಾಕೆಯೊಂದಿಗಿನ ಅನೈತಿಕ ಸಂಬಂಧದಿಂದ ಹುಟ್ಟಿದ Regina ಳೊಂದಿಗೆ Oswald ಸಂಬಂಧ ಬೆಳೆಸುವುದು. ತನ್ನ ಮಲಸಹೋದರಿಯಲ್ಲಿ ಆಸಕ್ತನಾಗುವುದು. ಅಮಲಿನ ಪದಾರ್ಥಗಳಿಗೆ ದಾಸನಾಗುವುದು. ಯಾವುದನ್ನು ಮಿಸೆಸ್ ಆಲ್ವೀಂಗ್ ಮಗನಿಂದ ದೂರವಿರಿಸಬೇಕೆಂದು ಬಯಸಿದ್ದಳೋ ಆದೇ ಆ ಭೂತದ ಪೆಡಂಭೂತ Owald ನಲ್ಲಿ ತನ್ನ ಅಸ್ತಿತ್ವವನ್ನು ಪುನಃ ಸ್ಥಾಪಿಸಿ ಆಕೆಯನ್ನು ಮರಗಟ್ಟಿಸುತ್ತದೆ. ತಾಯಿ ಸಾಂಪ್ರದಾಯಿಕ ಜೀವನದ ಕೊಂಡಿಯಾದರೆ Oswald ಆಧುನಿಕ ಸ್ವತಂತ್ರ ಬದುಕಿನ ದಾರವಾಗುತ್ತಾನೆ. ಎಲ್ಲ ಕಟ್ಟುಪಾಡುಗಳಿಂದ ಮುಕ್ತ ಜೀವನ ಶೈಲಿಗೆ ಹಾತೊರೆಯುತ್ತಾನೆ ಹಾಗಾಗಿ ತಂದೆಯ ಕಾಡಿದ ಅದೇ ಕಾಯಿಲೆ ಮತ್ತೆ ಮಗನಲ್ಲಿ ಕಾಣಿಸಿಕೊಂಡಾಗ ಆಕೆ ವ್ಯಾಕುಲಳಾಗುತ್ತಾಳೆ. ಕೊನೆಯಲ್ಲಿ ತನ್ನ ಸಾಂಪ್ರದಾಯಿಕ ಪಟ್ಟು ಬದಲಿಸಿ ಆಕೆ Oswald ಮತ್ತು Reginaರ ಸಂಬಂಧವನ್ನು ಒಪ್ಪಿಕೊಳ್ಳುತ್ತಾಳೆ.

ಆದಾಗ್ಯೂ ನಾಟಕದ ಮುಖ್ಯ ಸಿದ್ಧಾಂತವೆಂದರೆ ಸಾಮಾಜಿಕ ಬಧ್ಧತೆಯ ಹೆಸರಿನಲ್ಲಿ ಆ ಕಾಲದ ಸಾಂಪ್ರದಾಯಿಕ ಮಧ್ಯಮವರ್ಗದ ವಿವಾಹ ಸಂಬಂಧಗಳು ಹುಟ್ಟುಹಾಕುತ್ತಿದ್ದ ದುರ್‍ದೆಸೆಗಳ ಮೇಲೆ ಕನ್ನಡಿ ಹಿಡಿಯುವುದು. ನಿಜಕ್ಕೂ ಒಂದು ಅರ್ಥದಲ್ಲಿ ಮಿಸೆಸ್ ಅಲ್ವೀಂಗ್‌ಳ ಬದುಕಿನ ದುರಂತಕ್ಕೆ ಆಕೆಯ ಗಂಡ ಮತ್ತು ಮಗನ ಅಸಹ್ಯವಾದ ಗುಹ್ಯರೋಗವಲ್ಲ. ಬದಲಿಗೆ ಆಕೆಯ ಅಸಂತುಷ್ಟ ಇಚ್ಛೆಯ ವಿರುದ್ಧದ ವಿವಾಹ. ಆಕೆಯ ಸಾಂಪ್ರದಾಯಿಕ ವ್ಯಕ್ತಿತ್ವದ ಕಾರಣಕ್ಕೆ ಗಂಡ ಹೊಸ ಸಂತೋಷವನ್ನು ಅರಿಸಿ ದಾಂಪತ್ಯ ಸುಖವನ್ನು ಹೊರಬದುಕಿನಲ್ಲಿ ಪಡೆಯುತ್ತಾನೆ. ಇದರಿಂದ ಗುಪ್ತರೋಗಗಳಿಗೆ ಬಲಿಯಾಗುತ್ತಾನೆ.
ಮಗನ ವ್ಯಕ್ತಿತ್ವ ತಂದೆಯಿಂದ ಪ್ರೇರಣೆಗೊಳಗಾಗದಿರಲಿ ಎಂದು ಬಯಸಿದ ಆಕೆ ಆತನನ್ನು ಬೋರ್ಡೀಂಗನಲ್ಲಿಟ್ಟು ಬೆಳೆಸುತ್ತಾಳೆ. ಸರಿಯಾದ ಮಾರ್ಗದರ್ಶನ ಸಿಗದೆ ಮಗು ಅನೈತಿಕ ಚಟಗಳಿಗೆ ದಾಸನಾಗುತ್ತದೆ. ಆಕೆಯ ಈ ಪ್ರಯತ್ನವನ್ನೂ ಮೀರಿ ಆತ ತನ್ನ ತಂದೆಯ ಆದೇ ಖಾಯಿಲೆಗೆ ಬಲಿಯಾಗುವುದು ವಿಪರ್ಯಾಸ . ಶುದ್ಧ ಸಾಮಾಜಿಕ ಸಂಪ್ರದಾಯಗಳ ಪಾಲಿಸುತ್ತಿದ್ದ ಆಕೆಯ ಕೆಲವು ಬದುಕಿನ ನಿರ್ಬಂಧಗಳು ಈ ಅಸಂಗತ ಏರುಪೇರಿಗೆ ಕಾರಣವೂ ಹೌದು.

Henrik Johan Ibsen ೧೯ನೇ ಶತಮಾನದ ಯುರೋಪಿನ ಪ್ರಭಾವಿ ನಾಟಕಕಾರರಲ್ಲಿ ಒಬ್ಬ. ಜನಿಸಿದ್ದು ೧೮೨೮ರ ಮಾರ್ಚ ತಿಂಗಳಲ್ಲಿ ನಾರ್ವೇಯ Skein ನಲ್ಲಿ. ೧೯ನೇ ವಯಸ್ಸಿಗೆ ಕವಿತೆ ಬರೆಯಲು ಪ್ರಾರಂಭಿಸಿದ. ಸಿಸಿರೋನಿಂದ ಪ್ರಭಾವಿತನಾಗಿದ್ದ ತನ್ನ ಮೊದಲ ಕೃತಿ Cataline ಬರೆದ. ತದನಂತರ ಜರ್ಮನಿ, ಇಟಲಿಗಳನ್ನು ತಿರುಗಿ ಬಂದು ಕೊನೆಯಲ್ಲಿ ಪುನಃ ನಾರ್ವೇಗೆ ಮರಳಿದ. Christania ನಲ್ಲಿ ತಂಗಿದ. ಆದರೆ ೧೯೦೧ರಲ್ಲಿ ಅನಾರೋಗ್ಯ ಪೀಡಿತನಾಗಿ ೧೯೦೬ರಲ್ಲಿ ಮರಣಿಸಿದ. ಆತನ ಇನ್ನೊಂದು ಹೆಸರಾಂತ ಕೃತಿ `Love’s Comedy’ ಅದರಲ್ಲಿಯ “If you want to marry don’t be in love; if you love, part” ಈ ಮಾತು ಬಹು ಪ್ರಸಿದ್ಧ. ಸಮಕಾಲೀನ ಸಾಮಾಜವನ್ನು ವಿಮರ್ಶಿಸುತ್ತ ವಿವಾಹವೆಂಬ ಸುಂದರ ಸಾಮಾಜಿಕ ಒಪ್ಪಂದದ ಒಳಗಿನ ಹುಳುಕುಗಳನ್ನು ಸಮಸ್ಯೆಗಳನ್ನು ಹಾಸ್ಯಮಯವಾಗಿ ಕಟ್ಟಿಕೊಡುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟ್ಟು-ಮಗ್ಗಿ
Next post ಮಂಡೇಲಾ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…