ಮಂಡೇಲಾ

ಬಿಳಿಯ ರಾತ್ರಿಗಳಲ್ಲಿ ಕರಿಯ ಮಿಂಚಾದವನು
ಹಗಲು ಹರಿದಾಡುತ್ತ ಕೆಂಪು ಹೆಗಲಾದವನು
ಬಿಳಿ ಕಸದ ಬಂಡಿಯನು ಹೊರಗೆಳೆಯುತ್ತ ಹೋಗಿ
ಜಾರ ಜೇಲಿನ ಒಳಗೆ ಒಂಟಿ ಬಯಲಾದವನು.

ಶ್ವೇತ ಸೆರೆಯಲ್ಲಿ ಸೂರ್‍ಯ ಕುರುಡಲ್ಲಿ
ಬಿಳಿಯ ಬತ್ತಿಯ ಹೊಸೆದ ಕಪ್ಪು ಕಿರಣ
ಮಗ್ಗಿ ಹೇಳುವ ಮಹಾ ಬುದ್ಧಿವಂತರೆ ಕೇಳಿ
ಮುಗ್ಗಿ ಹೋದವು ಮಾತು ಕಾಲಹರಣ.

ಮಂಡೇಲ ಮಾನವತೆ ಗುಡುಗು ಮಿಂಚಿನಮಣ್ಣು
ಸಿಡಿದ ಕಣಕಣದಲ್ಲು ಕ್ರಾಂತಿ ಕಣ್ಣು
ಕುರುಡು ಗೋಡೆಯ ನಡುವೆ ಕನಸುತ್ತ ಕೂತವನು
ಸುತ್ತ ಸರ್‍ಪದ ಕಾಡು ಬಿಳಿಯ ದರ್‍ಪ.

ನುಗ್ಗಿ ಬರುತಿದೆ ಅಲ್ಲಿ ಕನಸು ಮೌಲ್ಯದ ಮಿಡಿತ
ನನಸಿನಾಸೆಯ ಹೊತ್ತು ಕಾಡ ಕತ್ತರಿಸಿ
ಸುಗ್ಗಿ ಬಿಡುಗಡೆ ಸುಖದ ಕಪ್ಪು ಕುಣಿತ
ಕರುಳ ಕದ್ದವರೆಲ್ಲ ಬೇಗ ಉತ್ತರಿಸಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Henrik Johan Ibsenನ “The Ghosts” ಸಾಂಪ್ರದಾಯಿಕ ಸಾಮಾಜಕ್ಕೊಂದು ಪಾಠ
Next post ನಾನು ನನ್ನ ಇರುವಿಕೆಗೆ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…