ಈ ಗಾಳಿ ಮಳೆ ನೆಳಲು ಬೆಳಕು
ಚಂದ್ರ ಚಕೋರ
ನೀನಿಲ್ಲದ ವೇಳೆ ಇವೆಲ್ಲಾ
ಉಲ್ಟಾಪಲ್ಟಿಯಾಗಿಯೇ ಕಾಣುತ್ತಿವೆ
ದಿನದ ವರ್ತಮಾನಗಳು ಕಳೆದು
ಭೂತಿಸುತ್ತಿವೆ
ಚಿಗುರು ಹೂವು ಕಾಯಾಗಿ ಹಣ್ಣಾಗಿ
ಉದುರುತ್ತಿವೆ.
ಚಂದ್ರ ಚಕ್ಕೋರಿಯರು ನನ್ನ ಮುಂದೆ
ಚಕ್ಕಂದಿಸುವಾಗ
ಕಣ್ಣಾಲಿಗಳು ತುಂಬಿ ಅದರ ನಡುಗುತ್ತದೆ
ನೀ ಬರುವುದೆಂದು?
ನನ್ನ ಖುಷಿಯೆ ಕಣ್ಣೀರು ಹೊರಚೆಲ್ಲುವೆ ಎಂದು?
ಭುವಿಷ್ಯಸುವಿ ಎಂದು?
ಕಾಯುತ್ತಿರುವ ಈ
ನನ್ನ ಕನಸುಗಳಿಗೆಲ್ಲ ಮುತ್ತಿಡುವುದೆಂದು?
*****