ಬಂಡಿಯ ಮೇಗಣ ಹೆಳವನಂತೆ,
ಕಂಡಕಂಡ ಕಡೆಗೆ ಹಲುಬಿದರೆ,
ನಿಮಗೆ ಬಂದುದೇನಿರೋ?
ಈ ಮಹಾಘನವನರಿಯದನ್ನಕ್ಕ.
ಹಾಡಿದರಿಲ್ಲ, ಹರಸಿದರಿಲ್ಲ, ಕೇಳಿದರಿಲ್ಲ.
ಏನ ಮಾಡಿದರು ವಾಯಕ್ಕೆ ವಾಯವೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ