Home / ಕವನ / ಕವಿತೆ

ಕವಿತೆ

ಎಲ್ಲ ದಾರಿಗೊಂದೆ ಗುರಿ ಬಿಡುಗಡೆ ಸೃಷ್ಟಿನಿಯಮದಲ್ಲಿ ಇಲ್ಲ ನಿಲುಗಡೆ ನೀಲಿಯಾಕಾಶದಿಂದ ಹೂಬಿಸಿಲಿಗೆ ಬಿಡುಗಡೆ ತೂಗುತಿರುವ ಮೋಡದಿಂದ ನೀರ ಸೆರೆಗೆ ಬಿಡುಗಡೆ ಹಗಲು ತೀರಿ ಇರುಳಿಗೆ ಇರುಳು ದಾಟಿ ಹಗಲಿಗೆ ಸರದಿ ಮುಗಿದು ಸೆರೆಯು ಹರಿದು ಬರುತಲೆ ಇದೆ ಬ...

ಬಹಳ ಕಾಡಿಸಿ ಪೀಡಿಸಿ ತಮ್ಮ ಶಾಲೆಯಲ್ಲಿ ಭಾಷಣ ಮಾಡಿಸಲು ಅವರನ್ನು ಕರೆದು ತಂದಿದ್ದ ಹೆಡಮಾಸ್ತರ್‍ ಹೆಮ್ಮೆಯಿಂದ ಭಾಷಣ ಮಾಡಿದರು “ನನ್ನ ಕಳಕಳಿಯ ಕರೆಗೆ ಓಗೂಟ್ಟು ಬಂದು” ಇತ್ಯಾದಿ ಇತ್ಯಾದಿ ಮಕ್ಕಳೆ ನಾನು ನಿಮ್ಮ ಮಾಸ್ತರರ ಕಳಕಳಿಯ ಕರ...

ಆಗಸದೊಳಗೆಲ್ಲಿಂದಲೋ ನೆಲದಾಳದಿಂದಲೋ ಕಿರಣವೊಂದು ತೇಲಿ ಬಂದು ಭ್ರೂಣವಾಗುತ್ತದೆ ಕಣ್ಣು ತಲೆ ಕೈಕಾಲು ಮೂಡುವ ಮುನ್ನವೇ ಗರ್ಭಪಾತ ಮತ್ತೊಂದು ಕವಿತೆಯ ಸಾವು ಒತ್ತಡಗಳ ನಡುವೆ ಹೇಗೋ ಉಳಿದು ಕೆಲವು ಒಂಭತ್ತು ತುಂಬುವ ಮೊದಲೇ ಹೊರಬರುತ್ತವೆ ಅಪೂರ್ಣ ಅಂಗಾ...

‘ಇಂದು’ ಎಂಬುದು ನಿನ್ನ ತಾಯಿ ಕ್ಷಣ ಕ್ಷಣವ ಅನುಭವಿಸಿಕಾಯಿ ‘ನೆನ್ನೆ’ ಎಂಬುದು ಹಳೆಯ ಗೆಳೆಯ ನಂಬಿದರು ‘ಭೂತ’ವಾಗಿ ಬಿಡುವ ನಾಳೆ ಎಂಬುದು ಹೊಸ ಗೆಳೆಯ ನಂಬಿದರೆ ಕೈ ಜಾರಿ ಬಿಡುವ ನಂಬು ಇಂದನ್ನು ಅದು ನಿನ್ನ ತಾಯಿ ಕ್ಷಣ ಕ್ಷಣವು ಅನುಭವಿಸಿ ಕಾಯಿ! *...

ಕಗ್ಗತ್ತಲೆಯ ಗೂಡುದಾಟಿ ಹೊನ್ನ ಹುಡಿಯನೊದ್ದು ಬೆಳ್ಳಿರಥ ಏರಿಬರುತಿಹನು ಸೂರ್ಯ ಶರಣು ದೇವದೇವೊತ್ತಮಾ ಜೀವಕೋಟಿಗಳಿಗೆ ಉಸಿರಿಗೆ ಉಸಿರು ನೆಲದಾಳಕೆ ಬೇರು ಬಿಡಿಸಿ ಆಕಾಶದಗಲಕೆ ಚಿಗುರುಹೊಮ್ಮಿಸಿ ತೋಳ್ತೆಕ್ಕೆಯೊಳು ಎಲ್ಲರ ಬಳಸುತ ಏರುತಿಹನು ಏರುತಿಹನು...

ಹಿಂದೆ ನಮ್ಮ ಮುತ್ತಾತನವರ ಕಾಲಕ್ಕೆ ಈ ರಸ್ತೆಗಳು ಕಾಡಿನಲ್ಲಿ ಕಳೆದು ಹೋಗುತ್ತಿದ್ದವು ಬೆಟ್ಟಗಳಲ್ಲಿ ಮರೆಯಾಗುತ್ತಿದ್ದವು ನಕ್ಷತ್ರಗಳಿಗೂ ಕೈ ಚಾಚುತ್ತಿದ್ದವು ನಡೆವವರ ಎಡ ಬಲಕು ಹಸಿರು, ಹೂವು ಗರಿಕೆ ಹುಲ್ಲು ಮಾತನಾಡುತ್ತಿದ್ದವು ದಣಿವು ನೀಗುತ್ತ...

ಮೈಯೊಳಗಿನ ಮಣ್ಣು ಆಡಿಸುವುದು ನನ್ನ ಮೈಯೊಳಗಿನ ಗಾಳಿ ಹಾಡಿಸುವುದು ನನ್ನ ಜಲ ಆಗಸ ಬೆಂಕಿ, ಸಂಚು ಹೂಡಿ ಮಿಂಚಿ ಕೂರಿಸುವುದು ಏಳಿಸುವುದು ಓಡಿಸುವುದು ನನ್ನ! ಪೃಥ್ವಿ ಅಪ್ ತೇಜ ವಾಯು ಆಕಾಶವೆ, ತಾಳಿ ಹದ ಮೀರದೆ ಕುದಿಕಾರದೆ ಪ್ರೀತಿಯಿಟ್ಟು ಆಳಿ; ನೀವ...

ಹೇಳಿರಲಿಲ್ಲಿವೆ ನಾನು ನಿಮಗೆ ಅವನಿರುವುದೆ ಹಾಗೆ ಅವನ ಕೆಣಕಬೇಡಿರಿ ಎಂದು ಅವನೇನು ಹುಚ್ಚನಲ್ಲ ಹೆಡ್ಡನೂ ಅಲ್ಲ ಪ್ರೀತಿಯ ನೆಪದಲ್ಲಿ ತಲೆ ಸಡಿಲಾದವನಲ್ಲ ವಂಶಪಾರಂಪರ್ಯವಲ್ಲ ಅವನ ಪೂರ್ವಜರಲ್ಲಿ ಹೀಗೆ ಯಾರಿಗೂ ಇದ್ದಿರಲಿಲ್ಲ ಅವನಷ್ಟಕ್ಕೆ ಬಿಟ್ಟರೆ ಅ...

ನಿನ್ನೊಳಗಿರುವುದೆ ಒಂದು ವಿಧ ನಾನರಿತಿರುವುದೆ ಒಂದು ವಿಧ! ಬಟ್ಟೆಯ ಹಾವನು ಬಿಟ್ಟಿಹೆಯಾ? ತಿಳಿದೆನು ಬಿಡು ಬಿಡು ಗಾರುಡಿಯಾ! ಬರಿದೇ ಅಲೆಗಳ ತರಿಸಿಹೆಯಾ? ಪರಿಶುದ್ಧನೆ ಒಳಗಡಗಿಹೆಯಾ! ಎಲ್ಲಿಯು ನೀನೇ ತುಂಬಿಹೆಯಾ? ಸಾಹಸಿಗಲ್ಲದೆ ಕಾಂಬುವೆಯಾ! ಮೂಡಿ...

ಹರಿವ ನದಿಯು ನೀನು ಸುರಿವ ಮಳೆಯು ನೀನು ನೆಲದಿ ಬಿದ್ದ ಬೀಜ ಮೊಳೆಸಿ ಫಲದಿ ಬಂದೆ ನೀನು ಹೂವು ಹಣ್ಣ ಮೈಯೊಳು ಹೊತ್ತ ಬಳ್ಳಿ ನೀನು ತಾರೆಗಳಿಗೆ ತೀರವಾಗಿ ನಿಂತ ಬಾನು ನೀನು ಭಾರ ತಾಳಿ ನಗುವೆ ನೋವ ಹೂಳಿ ನಲಿವೆ ಲೋಕವನೇ ಸಾಕಲು ನಿನ್ನ ಬಾಳ ಸುಡುವೆ ಮರ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....