ಕಗ್ಗತ್ತಲೆಯ ಗೂಡುದಾಟಿ
ಹೊನ್ನ ಹುಡಿಯನೊದ್ದು
ಬೆಳ್ಳಿರಥ ಏರಿಬರುತಿಹನು ಸೂರ್ಯ
ಶರಣು ದೇವದೇವೊತ್ತಮಾ
ಜೀವಕೋಟಿಗಳಿಗೆ ಉಸಿರಿಗೆ ಉಸಿರು
ನೆಲದಾಳಕೆ ಬೇರು ಬಿಡಿಸಿ
ಆಕಾಶದಗಲಕೆ ಚಿಗುರುಹೊಮ್ಮಿಸಿ
ತೋಳ್ತೆಕ್ಕೆಯೊಳು ಎಲ್ಲರ ಬಳಸುತ
ಏರುತಿಹನು ಏರುತಿಹನು
ಆಕಾಶದೆತ್ತರಕೆ
ಬರುತಿಹನು ಬರುತಿಹನು
ನಮ್ಮೆದೆಯ ಅಂತರಂಗದಾಳದೊಳಕೆ
ಶರಣು ಶರಣು ದೇವದೇವೊತ್ತಮಾ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)