‘ಇಂದು’ ಎಂಬುದು
ನಿನ್ನ ತಾಯಿ
ಕ್ಷಣ ಕ್ಷಣವ
ಅನುಭವಿಸಿಕಾಯಿ
‘ನೆನ್ನೆ’ ಎಂಬುದು
ಹಳೆಯ ಗೆಳೆಯ
ನಂಬಿದರು
‘ಭೂತ’ವಾಗಿ ಬಿಡುವ
ನಾಳೆ ಎಂಬುದು
ಹೊಸ ಗೆಳೆಯ
ನಂಬಿದರೆ
ಕೈ ಜಾರಿ ಬಿಡುವ
ನಂಬು ಇಂದನ್ನು
ಅದು ನಿನ್ನ ತಾಯಿ
ಕ್ಷಣ ಕ್ಷಣವು
ಅನುಭವಿಸಿ ಕಾಯಿ!
*****