ಇದೇಕೋ ಈ ಜನ ಬೇಡ ಬೇಡ ಎಂದರು
ಹೂಬಿಟ್ಟಿತು ಹಣ್ಣಾಯಿತು ಮರ
ಮತ್ತೆ ಮತ್ತೆ ಚಿಗುರುವುದಿದ್ದೇ ಇದೆ
ಪ್ರತಿ ವರುಷ ಇನ್ನೇಕೆ ಕಸಿ
ಮಾಡಿಸುವ ಹಂಬಲ ಬಿಡಿ
ಅದೆಲ್ಲಾ ಚಿಕ್ಕ ಚಿಕ್ಕ ಗಿಡಗಳಿಗೆ
ಬಳಲಿ ಬೆಂಡಾದವುಗಳಿಗೆ ತಾವೇ
ಹೂ ಬಿಡಲಾರದವುಗಳಿಗೆ
ನಿಮ್ಮಂಥವರಿಗಲ್ಲ ಬೇಡ ಬೇಡ
ಎಂದರು ಅವರು
*****
ಇದೇಕೋ ಈ ಜನ ಬೇಡ ಬೇಡ ಎಂದರು
ಹೂಬಿಟ್ಟಿತು ಹಣ್ಣಾಯಿತು ಮರ
ಮತ್ತೆ ಮತ್ತೆ ಚಿಗುರುವುದಿದ್ದೇ ಇದೆ
ಪ್ರತಿ ವರುಷ ಇನ್ನೇಕೆ ಕಸಿ
ಮಾಡಿಸುವ ಹಂಬಲ ಬಿಡಿ
ಅದೆಲ್ಲಾ ಚಿಕ್ಕ ಚಿಕ್ಕ ಗಿಡಗಳಿಗೆ
ಬಳಲಿ ಬೆಂಡಾದವುಗಳಿಗೆ ತಾವೇ
ಹೂ ಬಿಡಲಾರದವುಗಳಿಗೆ
ನಿಮ್ಮಂಥವರಿಗಲ್ಲ ಬೇಡ ಬೇಡ
ಎಂದರು ಅವರು
*****