ಎಂತಹ ಬಿರುಗಾಳಿಯಾದರೂ
ಶಾಂತವಾಗಲೇ ಬೇಕು.

ಎಂತಹ ಜ್ವಾಲಾಮುಖಿಯಾದರೂ
ತಣ್ಣಗಾಗಲೇ ಬೇಕು.

ಎಂತಹ ಪ್ರವಾಹವಾದರೂ
ನೆರೆ ತಗ್ಗಲೇಬೇಕು.

ಎಲ್ಲರಲೂ ಅಂತಃಕರಣ
ಇದ್ದೇ ಇರುವುದು.

ಕೇಡನು ಅದು ಕೊನೆಗೂ
ಗೆದ್ದೇ ತೀರುವುದು.
*****
ಗುಜರಾತ್‌ಗೆ ಕವಿ ಸ್ಪಂದನ