
ಬೆಳ್ಳಾನೆ ಬೆಳದಿಂಗಳು ಬೆಳ್ಳಿಯ ಕೋಲ್ ಮಿಂಚು ಬೆಳ್ಳಿ ಕುದುರೆ ಏರಿ ಬಂದಾನೆ ನನ್ನ ಸರದಾರ||ಽಽಽಽ ಮನಸು ಲಲ್ಲೆಯಾಡಕೊಂಡ್ಯಾವೆ ಅವನ ನೋಡಿ||ಽಽಽಽ ಅಂಬರದ ಹೊಂಬೆಳಕಲ್ಲಿ ಇಬ್ಬನಿಯ ತಂಪಲ್ಲಿ ಜೊತೆಗೂಡಿ ಆಡಿದ ಆಟದಾಗ ನಾಚಿ ಮೊಗ್ಗಾದೆನೆ||ಽಽಽಽ ಗಂಡು: ...
ಬಾಗೆಳೆಯಾ ಅಂಗಳಕೆ ಸಾಲು ದೀಪಗಳ ಬೆಳಗೋಣ ದೀಪಾವಳಿ ಮಾಗಿಯ ರಾತ್ರಿಯಲಿ. ಬಾಗೆಳೆಯಾ ಚಾವಡಿಗೆ ಬಣ್ಣಬಣ್ಣದ ಜರಿಯ ದೀಪದ ಗೂಡು ಕಟ್ಟೋಣ ಮೌನ ದೀಪಗಳ ಕಾಂತಿಯಲಿ ಬಾ ಗೆಳೆಯಾ ಪಡಸಾಲೆಗೆ ಮೆಲ್ಲಗೆ ಹಚ್ಚೋಣ ಸುರುಸುರು ಬತ್ತಿ ನನ್ನ ನಿನ್ನ ಕಣ್ಣೊಳಗಿನ ನೂರ...
ಅದು ನನ್ನದಲ್ಲದ ಅಂಗಿ ಅದರೆ ಇಂಚಿಂಚೂ ಮೆಚ್ಚುಗೆ ಆದದ್ದು ಸುಳ್ಳಲ್ಲ. ಬಯಸಿದ್ದು ಕನವರಿಸಿದ್ದು ಅದಕ್ಕಾಗೇ ಇಲ್ಲ, ಬಿಟ್ಟುಬಿಡು, ನಿನ್ನ ಮೈಬಣ್ಣಕ್ಕೆ ಒಪ್ಪಿಗೆಯಾಗದು ಅಮ್ಮನ ತಕರಾರು. ಮುನಿಸಿಕೊಂಡೆ, ಮಾತು ಬಿಟ್ಟೆ, ಮತ್ತೆ ಮತ್ತೆ ನೋಡಿಬಂದೆ. ಕಿ...
ಬಸ್ಸಿನ ತುಂಬ ನೂಕು ನುಗ್ಗಲಿತ್ತು ಅಂಗಡಿ ಬೀದಿಗಳಲ್ಲೂ ಹಾಗೆಯೇ ಹಗಲಿಗೆ ಹೆಗಲು ತಾಗಿಸಿ ಅಲ್ಲೆಲ್ಲ ನೀವು ನಿಂತಿದ್ದಿರೆಂಬುದು ಗೊತ್ತು ಚಹದಂಗಡಿಯಲ್ಲಿ ಮೇಜಿನೆದುರು ಅಕಸ್ಮಾತ್ ಕೇಳುವಿರಿ ಬೆಂಕಿ ಮತ್ತದೇ ಮಾತು ಅದೇ ಕತೆ ಯಾರು ಯಾರನ್ನೋ ಹುಡುಕುವ ...
ಬಾರೆ ನೀರೆ ತಾರೆ ತಂಗಿ ಚಂಚಂದುಂಡಿ ಕಟ್ಟೋಣ ಚಂದಾ ಮಾಮಾ ಪಂಚ್ಮೀ ಮಾಮಾ ಆತ್ಮಾರಾಮಾರಾಗೋಣ || ತುರುಬಾ ತುಂಬಾ ತುಂಬೀ ಹೂವಾ ತೌರಿಗೆ ತುಂಬಿ ಬಾರವ್ವಾ ಪಂಚ್ಮೀ ಹಬ್ಬಾ ಬಂತೌ ತಂಗಿ ಬ್ಯಾಸರ ಸಾಕೌ ಬಾರವ್ವಾ || ನಾಗರಹಾವು ನಾಗರ ನಾವು ಸಕ್ಕರೆ ಪಾಕಾ ಆ...
ಗಾಳಿ ಬೀಸಲು ಬಳ್ಳಿ ಚಿಗುರಲು ಅರಳಿತು ಹೂ ಮನ ನನ್ನ ತನುಮನವು || ನಿನ್ನ ತಂಪಿನ ಧಾರೆಯಲ್ಲಿ ನಿನ್ನ ನಗುವ ಭಾವದಲ್ಲಿ ನನ್ನ ಹೂ ಮನವು|| ಬಯಸಿಬಂದ ಲತೆಯ ಹಸಿರು ನಗುವ ಭಾವದಲ್ಲಿ ನನ್ನ ಹೂ ಮನವು|| ಪಾವನ ಸೆಲೆಯ ಭಾವನಾ ಲಹರಿಯ ಕಲರವ ದನಿಯಲ್ಲಿ ನನ್ನ...













