ಗಾಳಿ ಬೀಸಲು
ಬಳ್ಳಿ ಚಿಗುರಲು
ಅರಳಿತು ಹೂ ಮನ
ನನ್ನ ತನುಮನವು ||

ನಿನ್ನ ತಂಪಿನ ಧಾರೆಯಲ್ಲಿ
ನಿನ್ನ ನಗುವ ಭಾವದಲ್ಲಿ
ನನ್ನ ಹೂ ಮನವು||

ಬಯಸಿಬಂದ ಲತೆಯ
ಹಸಿರು ನಗುವ ಭಾವದಲ್ಲಿ
ನನ್ನ ಹೂ ಮನವು||

ಪಾವನ ಸೆಲೆಯ ಭಾವನಾ
ಲಹರಿಯ ಕಲರವ ದನಿಯಲ್ಲಿ
ನನ್ನ ಹೂ ಮನವು||

ಋತುಗಾನ ಮನ ಇಂಚರ
ನಾದ ಸ್ವರೂಪ ಭಾವದಲ್ಲಿ
ನನ್ನ ಹೂ ಮನವು||

ಸ್ನೇಹ ಬಾಳ್ವೆ ನೀತಿ ನೇಮ
ಪರಿಣತೆಯ ಹಣತೆಯಲ್ಲಿ
ನನ್ನ ಹೂ ಮನವು||

ಜಗದ ಮನುಜರ ಪ್ರೀತಿ
ಮಮತೆ ನಿತ್ಯ ಶಾಂತಿಯಲ್ಲಿ
ನನ್ನ ಹೂ ಮನವು||
*****

Latest posts by ಹಂಸಾ ಆರ್‍ (see all)