ನಾನು ಪ್ರೀತಿಸಿದ್ದು ನನ್ನನ್ನೆ
ನನ್ನ ಅಹಂಕಾರವನ್ನು
ನನ್ನ ದುಃಖವನ್ನು
ನನ್ನ ಕೆಟ್ಟತನವನ್ನು
ಅದಮ್ಯವಾಗಿ ಪ್ರೀತಿಸಿದ್ದು ನಾನೆ.

ಪ್ರೀತಿ ಬಟ್ಟಲು
ತುಂಬುವ ಮೊದಲೆ
ಆಸೆ ಬರುಕಿಯಂತೆ
ಕುಡಿಯುತ್ತಿದ್ದವಳು ನಾನೆ.

ಒಮ್ಮೆ ಮಾತ್ರ ನನಗೆ
ಗೊತ್ತಿಲ್ಲದ ಹಾಗೆ
ಬಟ್ಟಲು ತುಂಬಿ ತುಳುಕಿ
ಚೆಲ್ಲಿತು ನಿನ್ನ ಮೇಲೆ
ಅದೇ ಕೊನೆ-

ಆಮೇಲೆ ಪ್ರೀತಿಸಿದ್ದು ನಿನ್ನನ್ನೆ.


ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)