
ನೆನಪಿನ ಕಾಡು ಸುತ್ತಲೂ ಹಬ್ಬಿ ಎತ್ತಲೂ ಸುತ್ತ ರಾಗಗಳು ವರ್ತಮಾನಕ್ಕೆ ಚಿತ್ರದ ಹಂಗೆ? ಅವೆಲ್ಲ ಬರಿಯ ಹೃದ್ರೋಗಗಳು ಸತ್ತ ನಾಗಗಳು – ಪಟ್ಟೆನಾರುಗಳು ಛಲಕ್ಕೆ ಬಿದ್ದ ಸರ್ಪಧ್ವಜನ ವಿಕಾರ ರೂಪಿನ ಊರುಗಳು ನಾಳೆ ಇವತ್ತಿಗೆ ಕೊಡುವ ಈ ಅರ್ಥ ಇವತ...
ಸುಡಗಾಡುಗಟ್ಯಾಗ ಚಂದುಳ್ಳ ಚಲುವೇರು ಕುಂಟಲ್ಪಿ ಹಂಚಲ್ಪಿ ಆಡ್ಯಾರೆ ಹೆಣಗುಂಡ ತೆಗಿನ್ಯಾಗ ಚಕಚಂದ ಕುಂತಾರೆ ಕ್ವಾಡ್ಬಾಳಿ ಗಾರೀಗಿ ತಿಂದಾರೆ ||೧|| ಏಂಚಂದಾ ಭೋಚಂದಾ ಮಾಚಂದಾ ಸುಡಗಾಡು ಗೋರೀಯ ಮ್ಯಾಲ್ಹೂವು ನಕ್ಕಾವೊ ಗಿಡದಾಗ ಗಿಳಿಯಣ್ಣ ಕಂಟ್ಯಾಗ ನರಿ...
ನಟ್ಟ ನಡು ಇರುಳಲ್ಲಿ ಅರಳಿದ ಹೂವು ನೆಟ್ಟ ಬಾವುಟದಲ್ಲಿ ಹೆಪ್ಪೊಡೆದ ನೋವು ನಡುವೆ ಉರಳುವ ಚಕ್ರ ಚಲನೆ ಸಾವಯವ ಮೈಮಾಟದಲ್ಲಿ ಭಾವ ಬುದ್ಧಿಗಳ ಕೂಟದಲ್ಲಿ ಕತ್ತಲ ರಾಣಿಯ ಮಿಂಚಿನ ಪ್ರತಿಮೆ! ಕುಶಲವೆ ನನ್ನ ಕತ್ತಲ ರಾಣಿ? ವಸಾಹತುವಿನ ಹುತ್ತದಲ್ಲಿ ವಿಷವಿ...
ಗುರಿ ಇರಬೇಕು ಬಾಳಿಗೆ ಛಲವಿರಬೇಕು ಜೀವಕೆ| ಗುರಿಇರದ ಬಾಳಿಗೆಲ್ಲಿದೆ ಕೊನೆಯು ಛಲವಿರದ ಜೀವಕೆಲ್ಲಿದೆ ಬೆಲೆಯು| ಗುರಿ ಬೇಕು ಗಂಡಿಗೆ, ಛಲಬೇಕು ಹೆಣ್ಣಿಗೆ|| ಅತ್ತ ಇತ್ತ ಹರಿದಾಡುವ ಮನಸ ಅಂಕೆಯಲಿಡಬೇಕು| ಆಸೆ ಆಮೀಷಕೆ ಅಧೀನವಾಗದ ಹಾಗೆ ನಿಗಾವಹಿಸಲು...
ಬಿತ್ತೋ.. ಬಿತ್ತೋ.. ನನ್ನೆದೆ ಹುತ್ತವ ಕರಗಿಸಿ ಅರಿವಿನ ಬೀಜವ ಬಿತ್ತೋ.. ಬಿತ್ತೋ.. ಮನಸಲಿ ಕಟ್ಟಿಹ ಕಲ್ಮಷ ಕಟ್ಟೆಯ ಒಡೆದು ಶುದ್ಧ ಭಾವದ ಸಲಿಲವ ಚಿಮ್ಮಿಸೋ… ಚಿಮ್ಮಿಸೋ.. ವಿಷಮ ಆಸೆಯ ಕೋಶ, ಕೋಶವ ಕ್ಷಯಿಸಿ ಬುದ್ಧ ಬೆಳಕನು ಕಣ್ಣಲಿ ತುಂಬಿಸ...
ಕಡಲೂ ಹೇರಳ ಕೆರೆಯೂ ಹೇರಳ ತುಂಬಿದ ಕೆರೆಯೂ ಹೇರಳ ಕೇರಳ ಕೇರಳ ಕೇರಳ ಬಿಸಿಲೂ ಹೇರಳ ಮಳೆಯೂ ಹೇರಳ ಹರಿಯುವ ಹೊಳೆಯೂ ಹೇರಳ ಕೇರಳ ಕೇರಳ ಕೇರಳ ಮರವೂ ಹೇರಳ ಗಿಡವೂ ಹೇರಳ ಹಸಿರಿನ ಮಲೆಗಳು ಹೇರಳ ಕೇರಳ ಕೇರಳ ಕೇರಳ ತಾಳೆಯು ಹೇರಳ ಬಾಳೆಯು ಹೇರಳ ನಾರೀಕೇಳವ...
ಸೀರೆ ಸೆರಗ ತಾಗಿದ ಗಾಳಿ ಪ್ರೇಮದ ನವಿರು ಹೊತ್ತುತಂತು ಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿ ಚಿತ್ರ ಬಿಡಿಸಿತು ನೀನಿಡುವ ಪ್ರತಿ ಹೆಜ್ಜೆಯಲಿ ಕನಸು ಇಣುಕುತ್ತಿದೆ ಗೆಳತಿ ಮನಸುಗಳ ಅಗಣಿತ ತರಂಗಗಳು ಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನ...













