ಚಂಡಿ

ಕಪ್ಪಿಟ್ಟ ಮುಖ
ಮಿಂಚು ಕಣ್ಣುಗಳು
ಬೆಂಕಿ-ಬಿಸಿಯುಸಿರು
ಗುಡುಗು-ಸಿಡಿಲು
ಮೃದು ವಚನಗಳು!

ಅವಳು
ಕಣ್ಣು ನೆಟ್ಟಲೆಲ್ಲಾ ಕಂದಕಗಳು

ತೋಳುಗಳು ತಾಕಿ
ನೆಲಕ್ಕುರುಳಿದವು ಹೆಮ್ಮರಗಳು

ಕಾಲಾಡಿದಲ್ಲೆಲ್ಲಾ ಚಿಮ್ಮಿದವು
ಬಿಸಿ ನೀರ ಬುಗ್ಗೆಗಳು
ತಲ್ಲಣಿಸಿತು
ಸಕಲ ಜೀವ-ಜಗತ್ತು

ಕೋಪವೋ…
ಪರಿತಾಪವೋ…
ಅವಳೇ ಬಲ್ಲಳು

ನಿಂತಲ್ಲಿ ನಿಲ್ಲಳು
ಬಂದಂತಯೇ ಹೊರಟು ಹೋದಳು.
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಿಲುಗರಿ – ೧೧
Next post ದುಡುಕು

ಸಣ್ಣ ಕತೆ