ಬಿತ್ತೋ.. ಬಿತ್ತೋ..
ನನ್ನೆದೆ ಹುತ್ತವ ಕರಗಿಸಿ
ಅರಿವಿನ ಬೀಜವ ಬಿತ್ತೋ.. ಬಿತ್ತೋ..

ಮನಸಲಿ ಕಟ್ಟಿಹ
ಕಲ್ಮಷ ಕಟ್ಟೆಯ ಒಡೆದು
ಶುದ್ಧ ಭಾವದ ಸಲಿಲವ ಚಿಮ್ಮಿಸೋ… ಚಿಮ್ಮಿಸೋ..

ವಿಷಮ ಆಸೆಯ
ಕೋಶ, ಕೋಶವ ಕ್ಷಯಿಸಿ
ಬುದ್ಧ ಬೆಳಕನು ಕಣ್ಣಲಿ ತುಂಬಿಸೋ

ಚಂಚಲ ಮನಸಿನ
ಕೊಂಬೆ ರೆಂಬೆಯ ತರಿದು
ಸತ್ಯ ದಾರಿಯ ತಪ್ಪದೆ ತುಳಿಸೋ

ವ್ಯರ್ಥ ಬಾಳಿನ
ಉದ್ದನೆ ಬಾಲವ ಸುಟ್ಟು
ಒಂದಕ್ಕಾದರೂ ಉಪಯುಕ್ತವೆನಿಸೋ…
*****