ಕವಿತೆ ಇದು
ಕವನವಲ್ಲವಿದು
ಭಾವವನದ ಹಣತೆ ||

ಹೃದಯ ಮಿಡಿಯುವ
ಮನವನು ಸೆಳೆಯುವ
ಅನಂತ ರೂಪ ಭಾವನೆ ||

ಜೀವ ವನವು ತುಂಬಿ
ಭಾವ ವನವು ತುಂಬಿ
ಜೀವ ಭಾವ ಹೊರ ಹೊಮ್ಮಿತು ||

ಮೊಗ್ಗು ಬಿರಿದು
ಅರಳಿ ನಿಂತ ಸುಮವೂ
ಮನವನು ಕಾಡಿತೂ ||

ಅವನ ಸನಿಹದಲಿ
ಬದುಕು ಬಾಳ್ವೆಯಲಿ
ಹಣತೆ ಬೆಳಗಿ ಬೆಳಕಾಯ್ತು ||
*****